For Quick Alerts
ALLOW NOTIFICATIONS  
For Daily Alerts

ಟೇಸ್ಟೀ...ಟ್ರೈಯಾಂಗಲ್ ಬ್ರೆಡ್ ಪಕೋಡ

|

ಪಕೋಡ ಅಂದರೆ ನಮ್ಮ ಕಣ್ಣು ಮುಂದೆ ಬರುವುದು ಉಂಡೆಯಾಕಾರದ ಕರಿದ ತಿಂಡಿಗಳು. ಆದರೆ ಈ ಬ್ರೆಡ್ ಪಕೋಡ ತ್ರಿಕೋನಾಕಾರದಲ್ಲಿರುತ್ತದೆ. ಆಲೂಗಡ್ಡೆಯನ್ನು ಮ್ಯಾಶ್ ಮಾಡಿ ತುಂಬುವುದರಿಂದ ಈ ಪಕೋಡ ಮತ್ತಷ್ಟು ಸ್ವಾದಿಷ್ಟಕರವಾಗಿರುತ್ತದೆ.

ಸಂಜೆ ಟೀಗೆ ಈ ಸವಿರುಚಿಯ ಪಕೋಡ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಾಗ್ರಿಗಳು
ಬ್ರೆಡ್ ಪೀಸ್ 5
ಆಲೂಗಡ್ಡೆ 2( ಬೇಯಿಸಿ, ಸಿಪ್ಪೆ ಸುಲಿದಿದ್ದು)
ಈರುಳ್ಳಿ 1
ಕಡಲೆ ಹಿಟ್ಟು 1/4 ಕಪ್
ಒಣ ಮಾವಿನ ಪುಡಿ 1 ಚಮಚ
ಖಾರದ ಪುಡಿ 1 ಚಮಚ
ರೋಸ್ಟ್ ಮಾಡಿದ ಜೀರಿಗೆ ಪುಡಿ 1 ಚಮಚ
ಜೀರಿಗೆ 1 ಚಮಚ
ಹಸಿ ಮೆಣಸಿನಕಾಯಿ 2
ರುಚಿಗೆ ತಕ್ಕ ಉಪ್ಪು
ಟೊಮೆಟೊ ಕೆಚಪ್ 2 ಚಮಚ
ಕೊತ್ತಂಬರಿ ಸೊಪ್ಪು 1 ಚಮಚ
ಎಣ್ಣೆ(ಡೀಪ್ ಫ್ರೈ ಮಾಡಲು)
ನೀರು ಅರ್ಧ ಕಪ್

ತಯಾರಿಸುವ ವಿಧಾನ:

* ಬೇಯಿಸಿದ ಆಲೂಗಡ್ಡೆಯನ್ನು ಸಿಪ್ಪೆ ಸುಲಿದು ಒಂದು ಪಾತ್ರೆಗೆ ಸೌಟ್ ನಿಂದ ಮ್ಯಾಶ್ ಮಾಡಿ, ನಂತರ ಅದಕ್ಕೆ ಖಾರದ ಪುಡಿ, ಒಣ ಮಾವಿನ ಪುಡಿ, ರೋಸ್ಟ್ ಮಾಡಿದ ಜೀರಿಗೆ ಪುಡಿ, ಚಿಕ್ಕದಾಗಿ ಕತ್ತರಿಸಿದ ಹಸಿ ಮೆನಸಿನಕಾಯಿ, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ.

* ಬ್ರೆಡ್ ನ ಕಪ್ಪು ಭಾಗವನ್ನು ತೆಗೆದು ಅದನ್ನು ತ್ರಿಕೋನ ಆಕಾರದಲ್ಲಿ ಕತ್ತರಿಸಿ, ಒಂದು ಬ್ರೆಡ್ ನಿಂದ ಎರಡು ತ್ರಿಕೋನ ಬ್ರೆಡ್ ಚೂರು ಮಾಡಬಹುದು. ಈ ರೀತಿ ಎಲ್ಲಾ ಬ್ರೆಡ್ ಚುರುಗಳನ್ನು ಕತ್ತರಿಸಿ. ನಂತರ ಬ್ರೆಡ್ ಚೂರುಗಳ ಒಂದು ಬದಿಗೆ ಟೊಮೆಟೊ ಕೆಚಪ್ ಸವರಿ.

* ಮ್ಯಾಶ್ ಮಾಡಿ, ಮಿಕ್ಸ್ ಮಾಡಿದ ಆಲೂಗಡ್ಡೆಯನ್ನು ಒಂದು ತುಂಡಿನ ಮೇಲೆ ಉದುರಿಸಿ, ಮತ್ತೊಂದು ತ್ರಿಕೋನಾಕಾರದ ಬ್ರೆಡ್ ತೆಗೆದು ಅದನ್ನು ಮುಚ್ಚಿ.

* ಕಡಲೆ ಹಿಟ್ಟಿಗೆ ಜೀರಿಗೆ, ಸ್ವಲ್ಪ ಉಪ್ಪು, ನೀರು ಹಾಕಿ ಮಿಕ್ಸ್ ಮಾಡಿ, ಮಿಶ್ರಣ ಗಟ್ಟಿಯಾಗಿರಲಿ.

* ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಬಿಸಿ ಮಾಡಲು ಇಡಿ, ಎಣ್ಣೆ ಬಿಸಿಯಾದಾಗ ಆಲೂಗಡ್ಡೆ ಹಾಕಿ ಮುಚ್ಚಿದ ಬ್ರೆಡ್ ಅನ್ನು ಕಡಲೆ ಹಿಟ್ಟಿಗೆ ಅದ್ದಿ, ನಂತರ ಮೆಲ್ಲನೆ ಕಾದ ಎಣ್ಣೆಯಲ್ಲಿ ಹಾಕಿ ಪಕೋಡ ಸ್ವಲ್ಪ ಕಂದು ಬಣ್ಣ ಬರುವಾಗ ತೆಗೆಯಿರಿ. ಇಷ್ಟು ಮಾಡಿದರೆ ರುಚಿ ರುಚಿಯಾದ ಟ್ರೈಯಾಂಗಲ್ ಬ್ರೆಡ್ ಪಕೋಡ ರೆಡಿ.

English summary

Stuffed Bread Pakoda Recipe

Stuffed bread pakora is an improvised form of the regular bread pakora. This pakora is prepared using potato stuffing inside the bread. You can always experiment with the stuffing of your choice
 
X
Desktop Bottom Promotion