For Quick Alerts
ALLOW NOTIFICATIONS  
For Daily Alerts

ಸ್ವಾದಿಷ್ಟಕರ ದಾಲ್ ಡಂಪ್ಲಿಂಗ್ಸ್ ರೆಸಿಪಿ

By ರಮ್ಯಾ ಎಂ.ಎನ್
|

ನನ್ನ ಅಮ್ಮ ಮಾಡುವ ಸ್ಪೆಷಲ್ ಅಡುಗೆಗಳಲ್ಲಿ ದಾಲ್ ಡಂಪ್ಲಿಂಗ್ಸ್ ಅಂದರೆ ನನಗೆ ಮಾತ್ರವಲ್ಲ,ಮನೆಯವರೆಲ್ಲರಿಗೂ ಪಂಚಪ್ರಾಣ. ಆವಿಯಲ್ಲಿ ಬೇಯಿಸಿದ ದಾಲ್ ಡಂಪ್ಲಿಂಗ್ಸ್ ಅನ್ನು ತಟ್ಟೆಯಲ್ಲಿ ಹಾಕಿ, ತೆಂಗಿನಕಾಯಿ ಚಟ್ನಿಯನ್ನು ತಟ್ಟೆಯ ಒಂದು ಬದಿಯಲ್ಲಿ ಹಾಕಿ, ಒಂದು ಗ್ಲಾಸ್ ಕಾಫಿ ಹಿಡಿದು ಕೂತರೆ ಈ ಸ್ನ್ಯಾಕ್ಸ್ ಮುಗಿಯುವವರೆಗೆ ಕುಳಿತ ಜಾಗದಿಂದ ನಾನಂತೂ ಕದಲುವುದಿಲ್ಲ.

ಇದನ್ನು ಮಾಡುವ ಸರಳ ವಿಧಾನ ಮತ್ತು ಇದರ ರುಚಿಯಿಂದ ನಾನು ಈ ಅಡುಗೆಯನ್ನು ಕಲಿಯಲು ತುಂಬಾ ಸಮಯ ತೆಗೆದುಕೊಳ್ಳಲಿಲ್ಲ. ನಿಮಗೂ ಈ ತಿಂಡಿ ಮಾಡುವ ಮನಸ್ಸಾಗಿದ್ದರೆ ರೆಸಿಪಿ ನೋಡಿ ಇಲ್ಲಿದೆ:

Steamed Dal Dumplings

ಬೇಕಾಗುವ ಸಾಮಾಗ್ರಿಗಳು
ತೊಗರಿ ಬೇಳೆ 1 ಕಪ್
ತುರಿದ ತೆಂಗಿನ ಕಾಯಿ ಅರ್ಧ ಕಪ್
ಹಸಿ ಮೆಣಸಿನಕಾಯಿ 2-3
ಚಿಟಿಕೆಯಷ್ಟು ಇಂಗು
ಜೀರಿಗೆ ಪುಡಿ ಅರ್ಧ ಚಮಚ
ಶುಂಠಿ 1 ಚಮಚ(ಚಿಕ್ಕದಾಗಿ ಕತ್ತರಿಸಿದ್ದು)
ಕರಿ ಬೇವಿನ ಎಲೆ 6-7
ರುಚಿಗೆ ತಕ್ಕ ಉಪ್ಪು
ನೀರು 2 ಕಪ್

ತಯಾರಿಸುವ ವಿಧಾನ

* 2 ಕಪ್ ನೀರಿನಲ್ಲಿ ಮೂರು ಗಂಟೆಗಳ ಕಾಲ ತೊಗರಿ ಬೇಳೆಯನ್ನು ನೆನೆಹಾಕಬೇಕು.

* ನಂತರ ನೀರು ಬಸಿದು ಬೇಳೆಗೆ, ತುರಿದ ತೆಂಗಿನಕಾಯಿ, ಶುಂಠಿ, ಹಸಿ ಮೆಣಸಿನಕಾಯಿ, ಜೀರಿಗೆ, ಕರಿ ಬೇವಿನ ಎಲೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ( ರುಬ್ಬುವಾಗ ನೀರು ಹಾಕಬೇಡಿ.

* ಈಗ ಇಂಗು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

* ಈಗ ಇವುಗಳನ್ನು ಉಂಡೆ ಕಟ್ಟಿ, ಆವಿಯಲ್ಲಿ 15-20 ನಿಮಿಷ ಬೇಯಿಸಿ.

* ತಯಾರಾದ ಅಡುಗೆಯನ್ನು ತೆಂಗಿನಕಾಯಿ ಚಟ್ನಿ ಜೊತೆ ಸವಿಯಿರಿ.

English summary

Steamed Dal Dumplings | Mother's Day Recipe | ಆವಿಯಲ್ಲಿ ಬೇಯಿಸಿದ ದಾಲ್ ಡಂಪ್ಲಿಂಗ್ಸ್ | ಅಮ್ಮಂದಿರ ದಿನಕ್ಕೆ ವಿಶೇಷ ಅಡುಗೆ

Of the many recipes that I have learnt from my mom, steamed dal dumplings is one of most delicious and simple ones. Everyone in our family is fond of these steamed dal dumplings. They taste heavenly when served with coconut chutney and a steaming cup of coffee.
X
Desktop Bottom Promotion