For Quick Alerts
ALLOW NOTIFICATIONS  
For Daily Alerts

ಡ್ರೈ ಮಶ್ರೂಮ್ ಮಂಚೂರಿಯನ್

|

ಮಂಚೂರಿಯನ್ ಅಡುಗೆಗಳು ಚೈನೀಸ್ ಅಡುಗೆಗಳಾಗಿದ್ದು, ಭಾರತದಲ್ಲಿ ಜನಪ್ರಿಯತೆಯನ್ನು ಪಡೆದಿದೆ. ಈ ಮಂಚೂರಿಯನ್ ಸಂಜೆ ಹೊತ್ತಿನಲ್ಲಿ ತಿನ್ನಲು ಸೂಕ್ತವಾದ ತಿಂಡಿಯಾಗಿದ್ದು, ಅನೇಕ ಬಗೆಯ ಮಂಚೂರಿಯನ್ ಅಡುಗೆಗಳನ್ನು ತಯಾರಿಸಬಹುದು. ಇಲ್ಲಿ ನಾವು ಮಶ್ರೂಮ್ ಮಂಚೂರಿಯನ್ ಬಗ್ಗೆ ಹೇಳಿದ್ದೇವೆ.

ಮಶ್ರೂಮ್ ಮಂಚೂರಿಯನ್ ಅನ್ನು ಗ್ರೇವಿ ಡ್ರೈ ರೀತಿಯಲ್ಲಿ ಮಾಡಬಹುದು. ಎಣ್ಣೆಯಲ್ಲಿ ಹಾಕಿ ಕರಿದು ಮಾಡುವ ಡ್ರೈ ಮಶ್ರೂಮ್ ಮಂಚೂರಿಯನ್ ರೆಸಿಪಿ ನೀಡಿದ್ದೇವೆ ನೋಡಿ:

Spicy Mushroom Manchurian

ಬೇಕಾಗುವ ಸಾಮಾಗ್ರಿಗಳು
ಅಣಬೆ 250 ಗ್ರಾಂ
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಜೋಳದ ಹಿಟ್ಟು 2 ಚಮಚ
ಮೈದಾ 2 ಚಮಚ
ಸೋಯಾ ಸಾಸ್ 1 ಚಮಚ
ರುಚಿಗೆ ತಕ್ಕ ಉಪಪ್ಉ
ಎಣ್ಣೆ
ನೀರು

ಇತರ ಸಾಮಾಗ್ರಿಗಳು
ಹಸಿಮೆಣಸಿನ ಕಾಯಿ 2
ದುಂಡು ಮೆಣಸಿನಕಾಯಿ 1
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಈರುಳ್ಳಿ 1 (ಕತ್ತರಿಸಿದ್ದು)
ಚಿಕ್ಕ ಈರುಳ್ಳಿ 2
ಚಿಲ್ಲಿ ಸಾಸ್ 1 ಚಮಚ
ಟೊಮೆಟೊ ಕೆಚಪ್ 2 ಚಮಚ

ತಯಾರಿಸುವ ವಿಧಾನ

* ಅಣಬೆಯನ್ನು ಸ್ವಚ್ಛ ಮಾಡಿ ಟವಲ್ ನಿಂದ ಒರೆಸಿ, ನಂತರ ಚಿಕ್ಕ -ಚಿಕ್ಕ ತುಂಡುಗಳಾಗಿ ಕತ್ತರಿಸಿ.

* ಒಂದು ಬಟ್ಟಲಿನಲ್ಲಿ ಜೋಳ, ಮೈದಾ ಹಿಟ್ಟು ಹಾಕಿ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ , ಸೋಯಾ ಸಾಸ್ , ರುಚಿಗೆ ತಕ್ಕ ಉಪ್ಪು ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಕಲೆಸಿ (ಮಿಶ್ರಣ ಗಟ್ಟಿಯಾಗಿರಲಿ).

* ಈಗ ಬಾಣಲೆಗೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ, ಈಗ ಅಣಬೆಯನ್ನು ಆ ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ. ಅಣಬೆ ಕಂದೂ ಬಣ್ಣಕ್ಕೆ ತಿರುಗಿದಾಗ ಎಣ್ಣೆಯಿಂದ ತೆಗೆದು ಒಂದು ಪಾತ್ರೆಯಲ್ಲಿ ಹಾಕಿಡಿ.

* ಈಗ 1 ಚಮಚ ಎಣ್ಣೆಯನ್ನು ಬಾಣಲೆಗೆ ಹಾಕಿ ಬಿಸಿ ಮಾಡಿ ಅದಕ್ಕೆ ಕತ್ತರಿಸಿದ ಹಸಿ ಮೆಣಸಿನ ಕಾಯಿ ಹಾಗೂ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳಿಳ್ಳಿ ಪೇಸ್ಟ್ ಹಾಕಿ 2 ನಿಮಿಷ ಹುರಿದು, ಅದಕ್ಕೆ ಫ್ರೈ ಮಾಡಿದ ಅಣಬೆ ಹಾಕಿ, ಬೇಕಿದ್ದರೆ ಸ್ವಲ್ಪ ಉಪ್ಪು ಚಿಲ್ಲಿ, ಟೊಮೆಟೊ ಕೆಚೆಪ್ ಹಾಕಿ ಮಿಶ್ರಣ ಮಾಡಿದರೆ ಚಿಲ್ಲಿ ಮಶ್ರೂಮ್ ರೆಡಿ.

English summary

Spicy Mushroom Manchurian | Variety Of Mushroom Recipe | ಚಿಲ್ಲಿ ಮಶ್ರೂಮ್ ರೆಸಿಪಿ | ಅನೇಕ ಬಗೆಯ ಮಶ್ರೂಮ್ ರೆಸಿಪಿ

There are many mushroom recipes that are easy to prepare and delicious too. Mushroom manchurian is also an easy to prepare starters (with gravy) that can also be served as an evening snack (dry). Check out the spicy recipe to prepare mushroom manchurian.
X
Desktop Bottom Promotion