For Quick Alerts
ALLOW NOTIFICATIONS  
For Daily Alerts

ಹೊಸ ರುಚಿ: ಫಟಾಫಟ್ ತಯಾರಿಸಿ ಚಿಪ್ಸ್ ಚಾಟ್ ಮಸಾಲ

By Manu
|

ದಿನದ ಚಟುವಟಿಕೆಯಿಂದ ಮನೆಗೆ ಹಿಂದಿರುಗಿದ ಬಳಿಕ ಆರಾಮವಾಗಿ ಕುಳಿತು ಟೀವಿ ನೋಡುತ್ತಾ ವಿಶ್ರಾಂತಿ ಪಡೆಯುವ ವೇಳೆಯಲ್ಲಿ ತಿನ್ನಲೆಂದೇ ಇಂದು ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಪ್ಯಾಕೆಟ್ಟುಗಳಿರುವ ಕುರುಕು ತಿಂಡಿಗಳು ಲಭ್ಯವಿವೆ. ಪಾಪ್ ಕಾರ್ನ್, ಚಿಪ್ಸ್, ಚಾಟ್, ಮೊದಲಾದವುಗಳು ಸಾಮಾನ್ಯವಾಗಿವೆ. ಆದರೆ ನಿತ್ಯವೂ ಇವೇ ರುಚಿಗಳನ್ನು ಸವಿದೂ ಜಡ್ಡುಹಿಡಿದ ನಾಲಿಗೆಗೆ ಬೇರೆ ರುಚಿಯನ್ನು ನೀಡಿದರೆ ಹೇಗೆ?
ಇಂದು ಕೊಂಚ ಭಿನ್ನವಾದುದನ್ನು ಆಲೋಚಿಸೋಣ. ಕೊಂಚ ಚಾಟ್, ಕೊಂಚ ಚಿಪ್ಸ್ ಮಿಶ್ರಣಗೊಳಿಸಿ ಚಿಪ್-ಚಾಟ್ ಮಾಡಿದರೆ ಹೇಗೆ? ಉತ್ತಮ ಕಲ್ಪನೆ ಅಲ್ಲವೇ? ಬನ್ನಿ ಇಂದು ಚಿಪ್ಸ್ ಚಾಟ್ ಮಾಡುವ ಬಗೆಯನ್ನು ಕಲಿಯೋಣ. ಇದಕ್ಕಾಗಿ ಬೇಕಾಗಿರುವುದು ಹೆಸರೇ ಸೂಚಿಸುವಂತೆ ಚಿಪ್ಸ್ ಮತ್ತು ಚಾಟ್‌ಗೆ ಸೇರಿಸುವ ಕೆಲವು ಮಸಾಲೆಗಳು ಮಾತ್ರ. ಮಕ್ಕಳ ಜೊತೆಗೇ ಹಿರಿಯರೂ ಈ ಹೊಸರುಚಿಯನ್ನು ಹೇಗೆ ಸ್ವಾಗತಿಸಿ ನಿಮ್ಮ ಗುಣಗಾನ ಮಾಡುತ್ತಾರೆ ಎಂಬುದನ್ನು ಕಣ್ಣಾರೆ ನೋಡಿ ಆನಂದಿಸಿ. ಸಂಜೆಗೆ ಸ್ಪೆಷಲ್-ಆಲೂ ಟಿಕ್ಕಿ ಚಾಟ್

ಪ್ರಮಾಣ: ಇಬ್ಬರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಹದಿನೈದು ನಿಮಿಷಗಳು

Spicy Masala Chips Chaat Recipe

ಅಗತ್ಯವಿರುವ ಸಾಮಾಗ್ರಿಗಳು:
*ಆಲುಗಡ್ಡೆ ಚಿಪ್ಸ್ - 500ಗ್ರಾಂ
*ಸೇವ್ ಪುರಿ - 1 ಕಪ್
*ಹಸಿರು ಮೆಣಸಿನ ಪೇಸ್ಟ್ - 1/2 ಚಿಕ್ಕ ಚಮಚ
*ಬೆಲ್ಲದ ಪೇಸ್ಟ್ (ಅಥವಾ ಜೋನಿಬೆಲ್ಲ) - 1/2 ಚಿಕ್ಕ ಚಮಚ
*ಹುರಿದ ಶೇಂಗಾಬೀಜ- 1/2 ಚಿಕ್ಕ ಚಮಚ
*ಕೆಂಪು ಮೆಣಸಿನ ಪುಡಿ - 1/2 ಚಿಕ್ಕ ಚಮಚ
*ಕ್ಯಾರೆಟ್ - 1/2 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಈರುಳ್ಳಿ - 1/2 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಸೌತೆಕಾಯಿ- 1/2 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಲಿಂಬೆರಸ - 1/2 ಚಿಕ್ಕ ಚಮಚ
*ಕೊತ್ತಂಬರಿ ಸೊಪ್ಪು - ನಾಲರಿಂದ ಐದು ಎಸಳು (ಚಿಕ್ಕದಾಗಿ ಹೆಚ್ಚಿದ್ದು)
*ಉಪ್ಪು: ರುಚಿಗನುಸಾರ ಚಾಟ್ಸ್ ಸೇವ್ ಮನೆಯಲ್ಲಿಯೆ ಮಾಡಬಹುದು!

ವಿಧಾನ:
1) ಮೊದಲು ಆಲುಗಡ್ಡೆ ಚಿಪ್ಸ್ ಅನ್ನು ಚಿಕ್ಕ ಚಿಕ್ಕದಾಗಿ ತುಂಡರಿಸಿಕೊಳ್ಳಿ. ಇವನ್ನು ಒಂದು ದೊಡ್ಡ ಬೋಗುಣಿಯಲ್ಲಿ ಹಾಕಿ.
2) ಇದಕ್ಕೆ ಹಸಿಮೆಣಸಿನ ಪೇಸ್ಟ್, ಬೆಲ್ಲದ ಪೇಸ್ಟ್, ಶೇಂಗಾಬೀಜ, ಕೆಂಪುಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
3) ಬಳಿಕ ಕ್ಯಾರೆಟ್, ಈರುಳ್ಳಿ ಮತ್ತು ಸೌತೆ ಹಾಕಿ ಚೆನ್ನಾಗಿ ತಿರುವಿ. ಕೊನೆಯಲ್ಲಿ ಲಿಂಬೆರಸ ಸೇರಿಸಿ
4) ಈ ಮಿಶ್ರಣವನ್ನು ತಟ್ಟೆಯಲ್ಲಿ ಹರಡಿ ಇದರ ಮೇಲೆ ಕೊತ್ತಂಬರಿ ಸೊಪ್ಪಿನ ತುಣುಕುಗಳನ್ನು ಪಸರಿಸಿ ಅಲಂಕರಿಸಿ. ಎಲ್ಲಕ್ಕೂ ಮೇಲೆ ಸೇವ್ ಪುರಿಯನ್ನು ಸಿಂಪಡಿಸಿ. ಈ ರೆಸಿಪಿ ಹೇಗೆನಿಸಿತು ಎಂಬುದನ್ನು ನಮಗೆ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.

English summary

Spicy Masala Chips Chaat Recipe

Well, don't we all love to sit back after a tiring day and just do nothing but relax and have our favourite dishes by our side. Most of the common foods that we usually opt for are popcorn, chips or chats. Here's an idea! How about we do something different today? Why not try a different recipe, wherein you could mix some chaat with some chips and call it a Chip-Chaat recipe!
Story first published: Tuesday, May 10, 2016, 15:22 [IST]
X
Desktop Bottom Promotion