For Quick Alerts
ALLOW NOTIFICATIONS  
For Daily Alerts

ಕಪ್ಪ ಪುಯಿಕ್-ಸ್ಪೆಷಲ್ ಮರಗೆಣಸಿನ ಖಾದ್ಯ

|

ಮನೆಯಲ್ಲಿ ಅಮ್ಮ ಮಾಡುವ ಕಪ್ಪ ಪುಯಿಕ್ ( ಮಸಾಲೆ ಹಾಕಿದ ಮರಗೆಣಸನ್ನು) ರುಚಿ ಗೊತ್ತಿದ್ದ ನನಗೆ ಮರಗೆಣಸನ್ನು ನೋಡಿದಾಗ ಆ ಅಡುಗೆಯ ರುಚಿಯೇ ನೆನಪಾಗುತ್ತದೆ. ಅಮ್ಮ ಮಾಡುವ ಅಡುಗೆಯನ್ನು ನಾನೇಕೆ ಟ್ರೈ ಮಾಡಬಾರದು ಎನಿಸಿತು.

ಕಪ್ಪ ಪುಯಿಕ್ ರುಚಿಯಾಗಿಯೇ ಬಂತು. ಆದ ಕಾರಣ ನೀವೂ ಟ್ರೈ ಮಾಡಿ, ರುಚಿಯಾಗಿರುತ್ತೆ ಎಂದು ಧೈರ್ಯವಾಗಿ ಹೇಳಬಲ್ಲೆ. ಇದನ್ನು ಟ್ರೈ ಮಾಡಿ, ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ:

ಬೇಕಾಗುವ ಪದಾರ್ಥ:
* ಮರಗೆಣಸು-1 ಕೆಜಿ (ಸಿಪ್ಪೆ ತೆಗೆದು ತೊಳೆದು ಕತ್ತರಿಸಿರಬೇಕು)
* 3/4 ಚಮಚ ಅರಿಶಿಣ
* ಉಪ್ಪು

ಮಸಾಲೆಗೆ:
* 1 1/2 ಕಪ್ ತೆಂಗಿನ ತುರಿ
* 4-5 ಹಸಿರು ಮೆಣಸಿನಕಾಯಿ
* 4-5 ಚಿಕ್ಕ ಚಿಕ್ಕ ಈರುಳ್ಳಿ ಮತ್ತು 5-6 ಎಸಳು ಬೆಳ್ಳುಳ್ಳಿ
* ಕರಿಬೇವು
* 2 ಎಸಳು ಬೆಳ್ಳುಳ್ಳಿ
* 1 ಚಮಚ ಜೀರಿಗೆ ಮತ್ತು ಅರ್ಧ ಚಮಚ ಸಾಸಿವೆ
* 3 ಚಮಚ ಎಣ್ಣೆ

ಸ್ಟೆಪ್ 1

ಸ್ಟೆಪ್ 1

ಕುಕ್ಕರ್ ನಲ್ಲಿ ಮರಗೆಣಸು ಹಾಕಿ, ಬೇಯಲು ತಕ್ಕ ನೀರು (ನೀರು ಸ್ವಲ್ಪ ಅಧಿಕವೇ ಇರಲಿ) ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ 2 ವಿಶಲ್ ವರೆಗೆ ಬೇಯಿಸಿ.

ಸ್ಟೆಪ್ 1

ಸ್ಟೆಪ್ 1

ನಂತರ ನೀರನ್ನು ಬಸಿಯಿರಿ. ನಂತರ ಒಂದು ಪಾತ್ರೆಗೆ ಹಾಕಿ ಸೌಟ್ ನಿಂದ ಕುಟ್ಟಿ smash ಮಾಡಿ.

ಸ್ಟೆಪ್ 3

ಸ್ಟೆಪ್ 3

ಹಸಿ ಮೆಣಸಿನಕಾಯಿ, ತೆಂಗಿನ ತುರಿ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಕರಿಬೇವು ಈ ಎಲ್ಲಾ ಮಸಾಲೆ ಪದಾರ್ಥಗಳನ್ನು ಜೋಡಿಸಿ.

ಸ್ಟೆಪ್ 4

ಸ್ಟೆಪ್ 4

ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಮಿಶ್ರಣ ಸ್ವಲ್ಪ ಗಟ್ಟಿಯಾಗಿರಲಿ.

ಸ್ಟೆಪ್ 5

ಸ್ಟೆಪ್ 5

ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಸಾಸಿವೆ, ಜೀರಿಗೆ, ಕರಿಬೇವು ಹಾಕಬೇಕು.

ಸ್ಟೆಪ್ 6

ಸ್ಟೆಪ್ 6

ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

ಸ್ಟೆಪ್ 7

ಸ್ಟೆಪ್ 7

ನಂತರ ಗೆಣಸಿನ ಮಿಶ್ರಣ ಹಾಕಿ.

ಸ್ಟೆಪ್ 8

ಸ್ಟೆಪ್ 8

ರುಬ್ಬಿಕೊಂಡ ಪೇಸ್ಟನ್ನು ಬೆರೆಸಬೇಕು.

ಸ್ಟೆಪ್ 9

ಸ್ಟೆಪ್ 9

ಈ ಮಿಶ್ರಣ ಸ್ವಲ್ಪ ಒಣಗುವವರೆಗೆ ಸೌಟ್ ನಿಂದತಿರುಗಿಸುತ್ತಾ ಇರಿ.

ಸ್ಟೆಪ್ 10

ಸ್ಟೆಪ್ 10

ಇಷ್ಟು ಮಾಡಿದರೆ ಸ್ಪೆಷಲ್ ಗೆಣಸಿನ ಖಾದ್ಯ(ಕಪ್ಪ ಪುಯಿಕ್ ರೆಡಿ).

English summary

Special Tapioca Recipe | Kerala Special | ಸ್ಪೆಷಲ್ ಮರಗೆಣಸಿನ ಖಾದ್ಯ | ಕೇರಳ ಸ್ಪೆಷಲ್

Tapioca recipe is famous in Kerala. It is called as Kerala Kappa Puzhukku. This tasty food is also easy to prepare. Have a look to know the procedure of Kerala Kappa Puzhukku
X
Desktop Bottom Promotion