ಸುಲಭವಾಗಿ ಮಾಡಬಹುದಾದ 7 ಬಗೆಯ ಸ್ನ್ಯಾಕ್ಸ್

By:
Subscribe to Boldsky

ಎಲ್ಲಾ ವೀಕೆಂಡ್ ನಲ್ಲಿ ಹೊರಗಡೆ ಹೋಗಿ ಸುತ್ತಾಡಲು ಮೂಡ್ ಬರುವುದಿಲ್ಲ. ಎಲ್ಲಿಗೂ ಹೋಗುವುದು ಬೇಡ, ಸಿಗುವ 1-2 ದಿನ ರಜೆಯನ್ನು ಆರಾಮವಾಗಿ ಮನೆಯಲ್ಲಿಯೇ ಕಳೆಯೋಣ ಅನಿಸಿ ಬಿಡುತ್ತೆ. ಹಾಗೇ ಅಂದುಕೊಂಡು ಮನೆಯಲ್ಲಿ ಕೂತರೂ ವೀಕೆಂಡ್ ನ ಫೀಲ್ ಬರಬೇಕೆಂದರೆ ಮನೆಯಲ್ಲಿ ಏನಾದರೂ ಸ್ಪೆಷಲ್ ಅಡುಗೆ ಮಾಡಲೇಬೇಕು ಅಲ್ವಾ?

ವೀಕೆಂಡ್ ಸ್ಪೆಷಲ್ ಅಡುಗೆ ಜೊತೆ ಸಂಜೆ ತಿಂಡಿಗೆ ಯಾವುದಾದರೂ ಸರಳವಾದ ಸ್ನ್ಯಾಕ್ಸ್ ರೆಸಿಪಿಗೆ ಹುಡುಕುತ್ತಿದ್ದರೆ ಈ ಲೇಖನ ಓದುವುದನ್ನು ಮುಂದುವೆರೆಸಿ. ಇಲ್ಲಿ ನಾವು ಸರಳವಾಗಿ ಮಾಡಬಹುದಾದ ಸ್ನಾಕ್ಸ್ ರೆಸಿಪಿಗಳನ್ನು ನೀಡಿದ್ದೇವೆ. ಇವುಗಳಲ್ಲಿ ನಿಮಗಿಷ್ಟವಾದ ರೆಸಿಪಿಯನ್ನು ಆಯ್ಕೆ ಮಾಡಿ, ರಜೆಯನ್ನು ಸಂತೋಷವಾಗಿ ಕಳೆಯಿರಿ:

ದಾಲ್ ಡಂಪ್ಲಿಂಗ್

ನನ್ನ ಅಮ್ಮ ಮಾಡುವ ಸ್ಪೆಷಲ್ ಅಡುಗೆಗಳಲ್ಲಿ ದಾಲ್ ಡಂಪ್ಲಿಂಗ್ಸ್ ಅಂದರೆ ನನಗೆ ಮಾತ್ರವಲ್ಲ,ಮನೆಯವರೆಲ್ಲರಿಗೂ ಪಂಚಪ್ರಾಣ. ಆವಿಯಲ್ಲಿ ಬೇಯಿಸಿದ ದಾಲ್ ಡಂಪ್ಲಿಂಗ್ಸ್ ಅನ್ನು ತಟ್ಟೆಯಲ್ಲಿ ಹಾಕಿ, ತೆಂಗಿನಕಾಯಿ ಚಟ್ನಿಯನ್ನು ತಟ್ಟೆಯ ಒಂದು ಬದಿಯಲ್ಲಿ ಹಾಕಿ, ಒಂದು ಗ್ಲಾಸ್ ಕಾಫಿ ಹಿಡಿದು ಕೂತರೆ ಈ ಸ್ನ್ಯಾಕ್ಸ್ ಮುಗಿಯುವವರೆಗೆ ಕುಳಿತ ಜಾಗದಿಂದ ನೀವು  ಕದಲುವುದಿಲ್ಲ.

 

 

ಆಲೂ ಕಟ್ಲೇಟ್

ಇಲ್ಲಿ ನಾವು ಆರೋಗ್ಯಕರವಾದ, ರುಚಿಯಾದ ಆಲೂ ಕಟ್ಲೇಟ್ ರೆಸಿಪಿ ನೀಡಿದ್ಧೇವೆ. ಈ ಕಟ್ಲೇಟ್ ರುಚಿಯಲ್ಲಿ ಸೂಪರ್ ಆಗಿದ್ದರೂ ಮಾಡುವ ವಿಧಾನ ಮಾತ್ರ ಸರಳವಾಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

 

 

ರವೆ ವಡೆ

ಎಷ್ಟೇ ಹೇಳಿ ಸಂಜೆ ಟೀ ಜೊತೆ ಫ್ರೂಟ್ ಸಲಾಡ್ ಇಟ್ಟು ತಿನ್ನಲು ಇಷ್ಟವಾಗುವುದೇ? ಏನಿದ್ದರೂ ಕುರುಕುಲು ತಿಂಡಿಗಳು/ಕರಿದ ತಿಂಡಿಗಳೇ ಟೀಗೆ ಬೆಸ್ಟ್ ಕಾಂಬಿನೇಷನ್. ಮೊದಲೇ ಹೇಳಿದಂತೆ ಅಪರೂಪಕ್ಕೆ ತಿಂದರೆ ಪರ್ವಾಗಿಲ್ಲ, ಒಂದು ಸುತ್ತು ವ್ಯಾಯಾಮ ಜಾಸ್ತಿ ಮಾಡಿದರಾಯ್ತು, ಏನಂತೀರಿ? ಬನ್ನಿ ಸವಿರುಚಿಯ ರವೆ ವಡೆಯ ರುಚಿ ನೋಡೋಣ:

 

 

ಫ್ರೆಂಚ್ ಫ್ರೈ

ಫ್ರೆಂಚ್ ಫ್ರೈಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಫ್ರೆಂಚ್ ಫ್ರೈಯಲ್ಲಿ ಹೊಸ ರುಚಿಯನ್ನು ಟ್ರೈ ಮಾಡಿದ್ದೀರಾ? ಇಲ್ಲ ಅಂದರೆ ಇಲ್ಲಿದೆ ನೋಡಿ ಸ್ವೀಟ್ ಅಂಡ್ ಸ್ಪೈಸಿ ಫ್ರೆಂಚ್ ಫ್ರೈ ರೆಸಿಪಿ.

ಅನ್ನ-ಮೆಂತೆ ಸೊಪ್ಪಿನ ಪಕೋಡ

ಸಾಮಾನ್ಯವಾಗಿ ಪಕೋಡವನ್ನು ಕಡಲೆ ಹಿಟ್ಟು ಬಳಸಿ ಮಾಡಿದರೆ, ಈ ಪಕೋಡವನ್ನು ಅನ್ನದಿಂದ ಮಾಡಲಾಗುವುದು. ಅನ್ನಕ್ಕೆ ಮೆಂತೆ ಸೊಪ್ಪು ಮತ್ತು ಇತರ ಪಕೋಡ ಪದಾರ್ಥಗಳನ್ನು ಹಾಕಿ ಎಣ್ಣೆಯಲ್ಲಿ ಕರಿದರೆ ರುಚಿಯಾದ ಅನ್ನ-ಮೆಂತೆ ಸೊಪ್ಪಿನ ಪಕೋಡ ರೆಡಿಯಾಗುವುದು.

 

 

ಆಲೂಬೋಂಡಾ

ಸಂಜೆ ತಿಂಡಿಗೆ ಸುಲಭವಾಗಿ ಮಾಡಬಹುದಾದ ತಿಂಡಿಗಳೆಂದರೆ ಆಲೂಬೋಂಡಾ, ಪಕೋಡ, ಮೆಣಸಿನಕಾಯಿ ಬಜ್ಜಿ. ಬಿಸಿ-ಬಿಸಿಯಾದ ಟೀ ಜೊತೆ ಬಿಸಿಯಾದ ಬೋಂಡಾ, ಪಕೋಡ ತಿನ್ನುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ?ಆಲೂಬೋಂಡಾದ ರೆಸಿಪಿ

 

 

ಹುರಿಗಡಲೆಯ ವಡೆ

ಕಡ್ಲೆ ವಡೆ, ಪಾಲಾಕ್ ವಡೆ ಹೀಗೆ ಅನೇಕ ಬಗೆಯ ವಡಾ ರುಚಿ ನೋಡಿರಬಹುದು. ಹುರಿಗಡಲೆಯಿಂದ ತಯಾರಿಸಿದ ವಡೆಯ ರುಚಿ ನೋಡಿದ್ದೀರಾ? ಬರೀ ಹುರಿಗಡಲೆ ತಿನ್ನಲು ರುಚಿಯಾಗಿರುತ್ತದೆ, ಇನ್ನು ಅದರಿಂದ ವಡೆ ಮಾಡಿದರೆ ಹೇಳಬೇಕೆ? ಈ ಸವಿರುಚಿಯ ಹುರಿಗಡಲೆಯ ವಡೆ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

 

 

Story first published: Saturday, September 14, 2013, 14:45 [IST]
English summary

Snacks Recipes For Evening

To this weekend if you want to prepare mouth watering snacks recipe, have a look into this article. Here we have given few of snacks recipes, all are very easy to prepare, enjoy this weekend with special recipes.
Please Wait while comments are loading...
Subscribe Newsletter