For Quick Alerts
ALLOW NOTIFICATIONS  
For Daily Alerts

ಹೊಸ ರುಚಿ: ಬಾಯಿ ರುಚಿ ಹೆಚ್ಚಿಸುವ ಎಳ್ಳಿನ ನೂಡಲ್ಸ್!

By Vani Nayak
|

ನೂಡಲ್ಸ್ ಎಲ್ಲರಿಗೂ ಅಚ್ಚುಮೆಚ್ಚು. ಈ ಖಾದ್ಯವನ್ನು ವಿವಿಧ ರೀತಿಯಲ್ಲಿ ಮಾಡಬಹುದು. ಹಾಂಗ್ಕಾಂಗ್ ನೂಡಲ್ಸ್ ಬಹಳ ಸ್ಪೈಸಿ ಆದರೆ, ಕ್ಯಾಂಟೋನೀಸ್ ನೂಡಲ್ಸ್ ಸಪ್ಪಗೆ ಇರುತ್ತದೆ. ನೀವು ಎಂದಾದರು ಸೆಸೇಮ್ ನೂಡಲ್ಸ್ ನ ಮಾಡಿದ್ದೀರ? ಇದು ಒಂದು ವಿಭಿನ್ನ ರೀತಿಯ ರೆಸಿಪಿಯಾಗಿದ್ದು, ಮೊದಲಿಗೆ ವಿಚಿತ್ರವೆನಿಸಿದರೂ,ನಂಬಿಕೆ ಇಟ್ಟು ಒಮ್ಮೆಯಾದರೂ ಈ ರೆಸಿಪಿಯನ್ನು ಮಾಡಿ ಅದರ ರುಚಿಯನ್ನು ಸವಿಯಲೇಬೇಕು.

ನೂಡಲ್ಸ್ ಬಹಳ ಜನಪ್ರಿಯ ಖಾದ್ಯವಾಗಿದ್ದು, ವಿವಿಧ ರೀತಿಯಲ್ಲಿ ಇದನ್ನು ತಯಾರಿಸಬಹುದು. ಹಾಂಗ್ಕಾಂಗ್ ನೂಡಲ್ಸ್ ತಯಾರಿಸುವ ರೀತಿ ಮಸಾಲೆಭರಿತವಾಗಿದ್ದರೆ, ಕ್ಯಾಂಟೋನೀಸ್ ಮಾದರಿ ಸ್ವಲ್ಪ ಲೈಟ್ ಆಗಿ ಇರುತ್ತದೆ. ಹಾಗಾಗಿ ನಾವು ನಿಮಗೆ, ಮಾಮೂಲಾಗಿ ಮಾಡುವ ನೂಡಲ್ಸ್ ಗೆ ಒಂದು ವಿಭಿನ್ನ ವಿಧಾನವನ್ನು ಸಾದರ ಪಡಿಸುತ್ತಿದ್ದೇವೆ. ಅದುವೇ ಸೆಸೇಮ್ ನೂಡಲ್ಸ್ ರೆಸಿಪಿ. ಇದನ್ನು ಸಂಜೆಯ ತಿಂಡಿಗಾಗಿ ಮಾಡಬಹುದು. ಈ ರೆಸಿಪಿ ತುಂಬಾ ಸುಲಭವಾಗಿದ್ದು ಸಾಮಗ್ರಿಗಳು ಸುಲಭವಾಗಿ ಲಭ್ಯವಿರುತ್ತದೆ.

ಸೆಸೇಮ್ ಅಂದರೆ ಎಳ್ಳು, ಆರೋಗ್ಯ ದೃಷ್ಟಿಯಿಂದ ಬಹಳ ಲಾಭಗಳಿವೆ. ಇದನ್ನು ನೂಡಲ್ಸ್ ಜೊತೆ ಸೇವಿಸಿದರೆ, ನಾಲಿಗೆಗೂ ರುಚಿಕರ ಎನಿಸುತ್ತದೆ ಹಾಗೂ ಆರೋಗ್ಯಕ್ಕೂ ಉತ್ತಮ. ಈ ಕೆಳಗೆ, ಈ ರೆಸಿಪಿಯನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗು ಮಾಡುವ ವಿಧಾನದ ವಿವರಣೆಯನ್ನು ನೀಡಲಾಗಿದೆ.

Noodles

*ಪ್ರಮಾಣ - 4 ಮಂದಿಗೆ ಆಗುವಷ್ಟು
*ಸಿದ್ಧತಾ ಸಮಯ - 15 ನಿಮಿಷ
*ತಯಾರಿಸುವ ಸಮಯ - 20 ನಿಮಿಷ

ಸಾಮಗ್ರಿಗಳು:
1. ಕುದಿಸಿದ ನೂಡಲ್ಸ್ - 2 1/2 ಕಪ್
2. ಬೆಳ್ಳುಳ್ಳಿ - 1 ಟೇಬಲ್ ಸ್ಪೂನ್(ಸಣ್ಣಗೆ ಹೆಚ್ಚಿದ್ದು)
3. ಬಿಳಿ ಎಳ್ಳು - 1 ಟೇಬಲ್ ಸ್ಪೂನ್
4. ಶುಂಠಿ - 1 ಟೇಬಲ್ ಸ್ಪೂನ್(ಸಣ್ಣಗೆ ಹೆಚ್ಚಿದ್ದು)
5. ವಿನೇಗರ್ - 1 ಟೀ ಚಮಚ
6. ಡಾರ್ಕ್ ಸೋಯ - 1 ಟೀ ಚಮಚ
7. ಎಳ್ಳೆಣ್ಣೆ - 1 ಟೇಬಲ್ ಚಮಚ
8. ಸ್ಪ್ರಿಂಗ್ ಈರುಳ್ಳಿ - 1 ಟೇಬಲ್ ಚಮಚ (ಸಣ್ಣಗೆ ಹೆಚ್ಚಿದ್ದು)
9. ರುಚಿಗೆ ತಕ್ಕಷ್ಟು ಉಪ್ಪು

ವಿಧಾನ:
1 ಸಾಧಾರಣ ಉರಿಯಲ್ಲಿ ಬಿಳಿ ಎಳ್ಳನ್ನು 2 ನಿಮಿಷದವರೆಗೆ ಹುರಿದು, ಒಂದು ಬೌಲ್ ಗೆ ಹಾಕಿ.
2. ಈಗ, ಎಳ್ಳೆಣ್ಣೆ ಒಂದು ಪ್ಯಾನ್‌ಗೆ ಹಾಕಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಕೈಯಾಡಿಸಿ.
3. ಬೆಂದ ನೂಡಲ್ಸ್ ಅನ್ನು ಹಾಕಿ, ಉಪ್ಪು ಸೇರಿಸಿ, ಸ್ವಲ್ಪ ಸೋಯ ಸಾಸ್ ಮತ್ತು ವಿನೇಗರ್ ಅನ್ನು ಹಾಕಿ.
4. ಇವನೆಲ್ಲಾ ಚೆನ್ನಾಗಿ ಟಾಸ್ ಮಾಡಿ, ಬಿಳಿ ಎಳ್ಳನ್ನು ಹಾಕಿ. ಸ್ವಲ್ಪ ಎಳ್ಳನ್ನು ಅಲಂಕಾರಕ್ಕಾಗಿ ತೆಗೆದಿಡಿ.
5. ಈಗ, ಮತ್ತೆ ಟಾಸ್ ಮಾಡಿ ಮತ್ತಷ್ಟು ಬೇಯಲು ಬಿಡಿ.
6. ಬೆಂದ ನಂತರ ಒಂದು ನೂಡಲ್ ಬೌಲ್ ತೆಗೆದುಕೊಂಡು ನೂಡಲ್ಸ್ ಅನ್ನು ಹಾಕಿರಿ.
7. ಅದರ ಮೇಲೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ ಮತ್ತು ಎಳ್ಳನ್ನು ಹಾಕಿ ಅಲಂಕರಿಸಿ.
8. ಈಗ, ನಿಮ್ಮ ಸೆಸೇಮ್ ನೂಡಲ್ಸ್ ತಯಾರು.ನಿಮ್ಮ ಮಕ್ಕಳಿಗೆ,, ಅತಿ ಹೆಚ್ಚು ಮಸಾಲೆ ಇಲ್ಲದ ರುಚಿಕರವಾದ ತಿನಿಸನ್ನು ನೀಡಬೇಕೆಂದಲ್ಲಿ ಇದನ್ನು ಕೊಡಬಹುದು. ಹಾಗು, ಇದಕ್ಕೆ ಮತ್ತಷ್ಟು ಮೆರಗು ನೀಡಲು ತರಕಾರಿಗಳನ್ನು, ಮೊಟ್ಟೆಯನ್ನು ಅಥವಾ ಚಿಕನ್ ಅನ್ನು ಸೇರಿಸಬಹುದು.

English summary

Simple & Tasty Sesame Noodles Recipe

Sesame has a lot of health benefits; and when you have it with noodles, it will also compliment your taste buds along with your health. So, here are the ingredients and the method of preparation.
Story first published: Saturday, November 19, 2016, 18:11 [IST]
X
Desktop Bottom Promotion