For Quick Alerts
ALLOW NOTIFICATIONS  
For Daily Alerts

ಸಾಬೂದಾನ ಕಟ್ಲೇಟ್- ಸ್ಟೆಪ್ ಬೈ ಸ್ಟೆಪ್

|

ಸಾಬೂದಾನ ಹಾಕಿ ಯಾವುದೇ ಅಡುಗೆ ಮಾಡಿದರೂ ರುಚಿಕರವಾಗಿರುತ್ತದೆ. ಅದರಲ್ಲೂ ಸಾಬೂದಾನ ಕಟ್ಲೇಟ್ ರುಚಿಕರವಾಗಿರುತ್ತದೆ. ಇದನ್ನು ಮಾಡಲು ಹೆಚ್ಚಿನ ಶ್ರಮ ಅಗತ್ಯವಿಲ್ಲ, ಆದರೆ ಸ್ವಲ್ಪ ಅಡುಗೆಯ ಕೌಶಲ್ಯ ತಿಳಿದಿರಬೇಕಾಗುತ್ತದೆ. ಅಡುಗೆ ಕೌಶಲ್ಯ ಬರಲು ಏನು ಮಾಡಬೇಕೆಂದು ಚಿಂತೆ ಮಾಡಬೇಡಿ. ಏಕೆಂದರೆ ಇಲ್ಲಿ ನಾವು ಸ್ಟೆಪ್ ಬೈ ಸ್ಟೆಪ್ ಸಾಬೂದಾನ ಕಟ್ಲೇಟ್ ಮಾಡುವ ವಿಧಾನ ಬಗ್ಗೆ ಹೇಳಿದ್ದೇವೆ.

ಬೇಕಾಗುವ ಸಾಮಾನುಗಳು :
*2-3 ಬೇಯಿಸಿದ ಆಲೂಗಡ್ಡೆ
* 1 ಕಪ್ ನೆನೆಹಾಕಿದ ಸಾಬೂದಾನಾ
* 1/2 ಕಪ್ ಹುರಿದು ತರಿ ತರಿಯಾಗಿ ಪುಡಿ ಮಾಡಿದ ಕಡಲೆಕಾಯಿ ಬೀಜ
* ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ 3-4ಅಥವಾ ಖಾರಕ್ಕೆ ತಕ್ಕ
* ಕೊತ್ತಂಬರಿ ಸೊಪ್ಪು
* ಹಿಂಗು
* ಜೀರಿಗೆ
* ರುಚಿಗೆ ತಕ್ಕ ಉಪ್ಪು
* ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ(ಜಜ್ಜಿದ್ದು)
* ಚಿಟಿಕೆಯಷ್ಟು ಅರಿಶಿಣ
* ನಿಂಬೆ ರಸ ಅರ್ಧ ಚಮಚ

ಮಾಡುವ ವಿಧಾನ ಸ್ಲೈಡ್ ನಲ್ಲಿ ನೋಡೋಣ ಬನ್ನಿ:

ಸ್ಟೆಪ್ 1

ಸ್ಟೆಪ್ 1

ಸಾಬೂದಾನಾವನ್ನು ಚೆನ್ನಾಗಿ ತೊಳೆದು ಒಂದು ರಾತ್ರಿ ನೆನೆ ಹಾಕಬೇಕು.

ಸ್ಟೆಪ್ 2

ಸ್ಟೆಪ್ 2

ಆಲೂಗಡ್ಡೆಯನ್ನು ಬೇಯಿಸಿ ಅದರ ಸಿಪ್ಪೆ ಸುಲಿಯಿರಿ.

ಸ್ಟೆಪ್ 3

ಸ್ಟೆಪ್ 3

ನಂತರ ಆಲೂಗಡ್ಡೆಯನ್ನು ಹಿಸುಕಿ ಪುಡಿ ಮಾಡಿ.

ಸ್ಟೆಪ್ 4

ಸ್ಟೆಪ್ 4

ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ.

ಸ್ಟೆಪ್ 5

ಸ್ಟೆಪ್ 5

ಹಸಿ ಮೆಣಸಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ.

ಸ್ಟೆಪ್ 6

ಸ್ಟೆಪ್ 6

ಸಾಬೂದಾನಕ್ಕೆ ಬೇಯಿಸಿ, ಹಿಸುಕಿದ ಆಲೂಗಡ್ಡೆ ಹಾಕಿ ಕಲೆಸಿ (ನೀರು ಹಾಕಬೇಡಿ).

ಸ್ಟೆಪ್ 7

ಸ್ಟೆಪ್ 7

ಕಲೆಸಿರುವ ಸಾಬೂದಾನದ ತಟ್ಟೆಗೆ ಉಳಿದ ಮಸಾಲೆ ಸಾಮಾಗ್ರಿಗಳು ಅಂದರೆ ಹಸಿ ಮೆಣಸು, ಜೀರಿಗೆ, ಹಿಂಗು, ಶುಂಠಿ, ಕಡಲೆಕಾಯಿ ಬೀಜ, ಕೊತ್ತಂಬರಿ ಸೊಪ್ಪು, ಅರಿಶಿಣ, ರುಚಿಗೆ ತಕ್ಕ ಉಪ್ಪು ಹಾಕಿ ಕಲೆಸಿ.

ಸ್ಟೆಪ್ 8

ಸ್ಟೆಪ್ 8

ಸಾಬೂದಾನ ಮಿಶ್ರಣದಿಂದ ವಡೆ ರೀತಿ ತಟ್ಟಿ

ಸ್ಟೆಪ್ 9

ಸ್ಟೆಪ್ 9

ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಬೇಕು.

ಸ್ಟೆಪ್ 10

ಸ್ಟೆಪ್ 10

ಎಣ್ಣೆಯಿಂದ ತೆಗೆದ ಕಟ್ಲೇಟ್ ಅನ್ನು ಎಣ್ಣೆಯಂಶ ಹೋಗಲು ಪೇಪರ್ ಮೇಲೆ, ಅಥವಾ ಪಾತ್ರೆಯ ಮೇಲೆ ಹಾಕಿ.

ಸ್ಟೆಪ್ 11

ಸ್ಟೆಪ್ 11

ಇದನ್ನು ಸಾಸ್, ತೆಂಗಿನಕಾಯಿ ಚಟ್ನಿ ಜೊತೆ, ಅಥವಾ ಸಕ್ಕರೆ ಹಾಕಿದ ತಣ್ಣನೆಯ ಗಟ್ಟಿ ಮೊಸರಿನೊಂದಿಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಸೂಚನೆ: ಇದನ್ನು ಬಿಸಿಬಿಸಿಯಾಗಿ ತಿನ್ನಬೇಕು. ಇಟ್ಟರೆ ತಣ್ಣಗಾಗಿ ರಬ್ಬರಿನಂತೆ ಆಗುವುದು. ಆದ್ದರಿಂದ ಮಾಡುವಾಗ ಎಷ್ಟು ಬೇಕು ಅಷ್ಟು ಅಳತೆಯಲ್ಲಿ ಮಾಡಿ.

English summary

Sabudana Cutlet: Step By Step Recipe | Variety Of Healthy Snacks Recipe | ಸಾಬೂದಾನ ಕಟ್ಲೇಟ್, ಸ್ಟೆಪ್ ಬೈ ಸ್ಟೆಪ್ ರೆಸಿಪಿ | ಅನೇಕ ಬಗೆಯ ಆರೋಗ್ಯಕರ ತಿಂಡಿಯ ರೆಸಿಪಿ

This dish depends on skill. That is why step-by-step recipes always help. You may know how sabudana cutlets are made in theory but until and unless you get a practical demonstration, it might look difficult to execute.
X
Desktop Bottom Promotion