For Quick Alerts
ALLOW NOTIFICATIONS  
For Daily Alerts

ರೋಸ್ಟ್ ಮಾಡಿದ ಆಲೂಗಡ್ಡೆಯ ರುಚಿ ನೋಡಿದ್ದೀರಾ?

|

ಇದು ಹೊಸ ಆಲೂಗಡ್ಡೆ ದೊರೆಯುವ ಸಮಯ. ಹೊಸ ಆಲೂಗಡ್ಡೆ ತಿನ್ನಲು ರುಚಿಯಾಗಿರುತ್ತದೆ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆಲೂಗಡ್ಡೆ ಬಳಸಿ ಅನೇಕ ಬಗೆಯ ಅಡುಗೆಗಳನ್ನು ಮಾಡಬಹುದೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇದರಿಂದ ತಯಾರಿಸಿದ ರೋಸ್ಟ್ ಎಂದಾದರೂ ರುಚಿ ನೋಡಿದ್ದೀರಾ? ಇಲ್ಲ ಅಂದರೆ ರೆಸಿಪಿ ನೋಡಿ ಇಲ್ಲಿದೆ.

ಸಲಹೆ: ಇದು ಮೈಕ್ರೋವೇವ್ ರೆಸಿಪಿಯಾಗಿದೆ. ಇದನ್ನು ಗ್ಯಾಸ್ ನಲ್ಲಿಟ್ಟು ನಾನ್ ಸ್ಟಿಕ್ ತವಾದಲ್ಲೂ ರೋಸ್ಟ್ ಮಾಡಬಹುದು. ಗ್ಯಾಸ್ ನಲ್ಲಿ ಇಟ್ಟು ರೋಸ್ಟ್ ಮಾಡಲು 25-30 ನಿಮಿಷಬೇಕು ಹಾಗೂ ಇದನ್ನು ಸೌಟ್ ನಿಂದ ಆಗಾಗ ಆಡಿಸುತ್ತಾ ರೋಸ್ಟ್ ಮಾಡಬೇಕು. ಆದ್ದರಿಂದ ಇದನ್ನು ಮೈಕ್ರೋವೇವ್ ನಲ್ಲಿ ಮಾಡುವುದು ಸೂಕ್ತ.

Roasted New Potatoes Recipe

ಬೇಕಾಗುವ ಸಾಮಾಗ್ರಿಗಳು
ಹೊಸ ಆಲೂಗಡ್ಡೆ
ಜೀರಿಗೆ 2 ಚಮಚ
ಬೆಳ್ಳುಳ್ಳಿ ಎಸಳು 2
ಕರಿ ಮೆಣಸಿನ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ
ಸ್ವಲ್ಪ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

*ಮೈಕ್ರೋವೇವ್ ಅನ್ನು 450 ಡಿಗ್ರಿ ಫ್ಯಾರನ್ಹೀಟ್ ಉಷ್ಣತೆಗೆ ಬಿಸಿ ಮಾಡಬೇಕು.

* ಆಲೂಗಡ್ಡೆಯನ್ನು ತೊಳೆದು ಅದಕ್ಕೆ ಉಪ್ಪು ಉದುರಿಸಿ, ಕರಿ ಮೆಣಸಿನ ಪುಡಿ , ರೋಸ್ಟ್ ಮಾಡಿದ ಜೀರಿಗೆ, ಜಜ್ಜಿದ ಬೆಳ್ಳುಳ್ಳಿ 1-2 ಚಮಚ ಎಣ್ಣೆ, ಉಪ್ಪು ಹಾಕಿ ಮಿಕ್ಸ್ ಮಾಡಿ.

* ಈಗ ಆಲೂಗಡ್ಡೆಯನ್ನು ಬೇಕಿಂಗ್ ಡಿಶ್ ಗೆ (ಬೇಯಿಸುವ ಪಾತ್ರೆ) ಸ್ವಲ್ಪ ಎಣ್ಣೆ ಸವರಿ ಅದರಲ್ಲಿ ಹಾಕಿ 10-15 ನಿಮಿಷ ರೋಸ್ಟ್ ಮಾಡಿದರೆ ಆಲೂಗಡ್ಡೆ ರೋಸ್ಟ್ ರೆಡಿ. ನಂತರ ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಇದನ್ನು ಅನ್ನ, ರೊಟ್ಟಿಯ ಜೊತೆ ತಿನ್ನಲು ರುಚಿಕರವಾಗಿರುತ್ತದೆ.

English summary

Roasted New Potatoes Recipe | Healthy Snacks Recipe | ರೋಸ್ಟ್ಡ್ ಆಲೂ ರೆಸಿಪಿ | ಆರೋಗ್ಯಕರ ಸ್ನ್ಯಾಕ್ಸ್ ರೆಸಿಪಿ

If you want to prepare some easy recipes using new potatoes, you can try roasted potatoes recipe. The recipe to prepare this side dish is very simple and you need very few ingredients like garlic, olive oil and roasted cumin seeds. Check out this crisp side dish recipe.
X
Desktop Bottom Promotion