For Quick Alerts
ALLOW NOTIFICATIONS  
For Daily Alerts

ಸಂಜೆ ಟೀಗೆ ರವೆ ವಡೆ ಸ್ನ್ಯಾಕ್ಸ್

|

ಕರಿದ ಪದಾರ್ಥಗಳನ್ನು ನೋಡುವಾಗ ನಾಲಗೆ ರುಚಿ ಬಯಸುತ್ತದೆ, ಮನಸ್ಸು 'ಬೇಡ ತಿಂದರೆ ಬಲೂನ್ ರೀತಿ ಊದಿಕೊಳ್ಳುತ್ತೀಯ ನೋಡು' ಎಂದು ಎಚ್ಚರಿಸುತ್ತದೆ. ಆದರೂ ಅಪರೂಕ್ಕೆ ತಿಂದರೆ ಏನೂ ಆಗಲ್ಲವೆಂದು ಮನಸ್ಸಿಗೆ ಸಮಧಾನ ಹೇಳಿ ಕರಿದ ಪದಾರ್ಥಗಳನ್ನು ತಿನ್ನುತ್ತೇವೆ ಅಲ್ಲವೇ?

ಎಷ್ಟೇ ಹೇಳಿ ಸಂಜೆ ಟೀ ಜೊತೆ ಫ್ರೂಟ್ ಸಲಾಡ್ ಇಟ್ಟು ತಿನ್ನಲು ಇಷ್ಟವಾಗುವುದೇ? ಏನಿದ್ದರೂ ಕುರುಕುಲು ತಿಂಡಿಗಳು/ಕರಿದ ತಿಂಡಿಗಳೇ ಟೀಗೆ ಬೆಸ್ಟ್ ಕಾಂಬಿನೇಷನ್. ಮೊದಲೇ ಹೇಳಿದಂತೆ ಅಪರೂಪಕ್ಕೆ ತಿಂದರೆ ಪರ್ವಾಗಿಲ್ಲ, ಒಂದು ಸುತ್ತು ವ್ಯಾಯಾಮ ಜಾಸ್ತಿ ಮಾಡಿದರಾಯ್ತು, ಏನಂತೀರಿ? ಬನ್ನಿ ಸವಿರುಚಿಯ ರವೆ ವಡೆಯ ರುಚಿ ನೋಡೋಣ:

Rave Vade Recipe

ಬೇಕಾಗುವ ಸಾಮಾಗ್ರಿಗಳು:
1/2 ಕೆಜಿ ರವೆ
ಹಸಿಮೆಣಸಿನಕಾಯಿ 3-4
ಈರುಳ್ಳಿ 3-4
ಅರ್ಧ ಕಪ್ ತೆಂಗಿನ ತುರಿ
ಅರ್ಧ ಚಮಚ ಅಡುಗೆ ಸೋಡಾ
1/4 ಲೀ. ಮೊಸರು
ಕೊತ್ತಂಬರಿ ಸೊಪ್ಪು 1 ಕಟ್ಟು (ಚಿಕ್ಕದಾಗಿ ಕತ್ತರಿಸಿದ್ದು)
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 1ಕಪ್
ತುಪ್ಪ 2 ಚಮಚ

ಪಾಕ ವಿಧಾನ:

* ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಅದರಲ್ಲಿ ರವೆ ಹಾಕಿ ಹುರಿದುಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿ ಹಸಿಮೆಣಸಿನಕಾಯಿಯನ್ನು ಹಾಕಿ ಮಿಶ್ರ ಮಾಡಿ.

* ಈ ಮಿಶ್ರಣಕ್ಕೆ ಮಿಶ್ರಣಕ್ಕೆ ಅಡುಗೆ ಸೋಡಾ, ಉಪ್ಪು, ತೆಂಗಿನತುರಿ, ಮೊಸರು ಹಾಕಿ ಕಲೆಸಿ (ಮಿಶ್ರಣ ಗಟ್ಟಿಯಾಗಿರಲಿ) .

* ನಂತರ ಅವುಗಳಿಂದ ಚಿಕ್ಕ-ಚಿಕ್ಕಉಂಡೆ ಕಟ್ಟಿ.

* ಒಲೆಯಲ್ಲಿ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ .

* ಎಣ್ಣೆ ಕಾದ ನಂತರ ಮಾಡಿಟ್ಟುಕೊಂಡ ಉಂಡೆಗಳನ್ನು ತಟ್ಟಿ ಹಾಕಿರಿ. ವಡೆ ಕಂದು ಬಣ್ಣ ಬರುವಾಗ ತೆಗೆದರೆ ರವೆ ವಡೆ ರೆಡಿ.

English summary

Rave Vade Recipe | Verity Of Vade Recipe | ರವೆ ವಡೆ ರೆಸಿಪಿ | ಅನೇಕ ಬಗೆಯ ವಡೆ ರೆಸಿಪಿ

For Evening snacks everybody want to eat crispy food unlike fruit salad isn't it? Here we have given tasty and crispy rava vada recipe. Try it
X
Desktop Bottom Promotion