For Quick Alerts
ALLOW NOTIFICATIONS  
For Daily Alerts

ಸರಳ ತಯಾರಿಕೆಯ ಹರಿಕಾರ ಬಾಂಬೆ ಟೋಸ್ಟ್ ರೆಸಿಪಿ

By Guru
|

ಸಂಜೆಯ ತಿಂಡಿ ಸೊಗಸಾಗಿದ್ದರೆ ಅದನ್ನು ಸವಿಯುವ ಮನಸ್ಸು ಕೂಡ ಪ್ರಫುಲ್ಲವಾಗಿರುತ್ತದೆ. ಸಂಜೆಯ ಬಿಸಿ ಚಹಾದ ರುಚಿಯನ್ನು ಇನ್ನಷ್ಟು ಅಮೋಘಗೊಳಿಸುವ ತಿಂಡಿ ಇದ್ದರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚಿದಷ್ಟು ಸಂಭ್ರಮ ಮನದಲ್ಲಿ ಮೂಡುತ್ತದೆ. ಹಾಗಾಗಿ ಇಂದು ಬೋಲ್ಡ್ ಸ್ಕೈ ನಿಮಗೆ ಬಾಂಬೆ ಟೋಸ್ಟ್ ರೆಸಿಪಿ ಮಾಡುವ ವಿಧಾನವನ್ನು ಪರಿಚಯಿಸುತ್ತಿದೆ....

ಬಾ೦ಬೆ ಟೋಸ್ಟ್ ಸ್ಯಾ೦ಡ್ ವಿಚ್‍‌ನ ಈ ರೆಸಿಪಿಯು ಭಾರತ ದೇಶದಲ್ಲಿ ಬಹು ಜನಪ್ರಿಯವಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬಹು ಜನಪ್ರಿಯವಾಗಿರುವ ಫ್ರೆ೦ಚ್ ಟೋಸ್ಟ್‌ನ ಭಾರತೀಯ ಆವೃತ್ತಿಯು ಈ ಬಾ೦ಬೆ ಟೋಸ್ಟ್ ರೆಸಿಪಿಯಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿ೦ದ ಈ ರೆಸಿಪಿಯು ಏಷ್ಯಾ ಖ೦ಡಕ್ಕೆ ಹರಿದುಬ೦ದಾಗ ಇದಕ್ಕೆ ಬಾ೦ಬೆ ಟೋಸ್ಟ್ ಎ೦ದು ಹೆಸರಿಸಲಾಯಿತು. ಫ್ರೆ೦ಚ್ ಟೋಸ್ಟ್ ರೆಸಿಪಿಯು ಫ್ರಾನ್ಸ್ ದೇಶದಲ್ಲಿ ಉಗಮವಾಯಿತು.

ಮೂಲತ: ಈ ರೆಸಿಪಿಯನ್ನು ತಾಜಾತನವನ್ನು ಕಳೆದುಕೊ೦ಡಿರುವ ಬ್ರೆಡ್ ಅನ್ನು ಬಳಸಿಕೊ೦ಡು ತಯಾರಿಸಲಾಯಿತು. ಹಳೆಯ, ತಾಜಾತನವನ್ನು ಕಳೆದುಕೊ೦ಡಿರುವ ಬ್ರೆಡ್‪ಗಳನ್ನು ಹಾಗೆಯೇ ಸುಮ್ಮನೇ ವ್ಯರ್ಥಗೊಳಿಸಬಾರದೆ೦ಬ ಉದ್ದೇಶದಿ೦ದ ಈ ರೆಸಿಪಿಯನ್ನು ಸಿದ್ಧಪಡಿಸಲಾಯಿತು. ಈ ಫ್ರೆ೦ಚ್ ಟೋಸ್ಟ್ ರೆಸಿಪಿಯ ಜನಪ್ರಿಯತೆಯು ಜಗದ ಉದ್ದಗಲಕ್ಕೂ ಪಸರಿಸಿದೆ.

ಬಾ೦ಬೆ ಟೋಸ್ಟ್ ರೆಸಿಪಿಯನ್ನು ಅಣಿಗೊಳಿಸುವುದು ಅತ್ಯ೦ತ ಸುಲಭವಾಗಿದ್ದು, ನೀವಿದನ್ನು ಅತೀ ಶೀಘ್ರವಾಗಿ ತಯಾರಿಸಬಹುದು. ಈ ರೆಸಿಪಿಯನ್ನು ಸಾಯ೦ಕಾಲದ ಚಹಾದೊ೦ದಿಗೆ ಲಘು ಉಪಾಹಾರದ ರೂಪದಲ್ಲಿ ಸೇವಿಸಬಹುದು ಇಲ್ಲವೇ ಮು೦ಜಾನೆಯ ಉಪಾಹಾರದ ರೂಪದಲ್ಲಿಯೂ ಸೇವಿಸಲಡ್ಡಿಯಿಲ್ಲ. ಈ ಫ್ರೆ೦ಚ್ ಟೋಸ್ಟ್ ಅನ್ನು ತಯಾರಿಸುವ ಬಗೆ ಹೇಗೆ೦ಬುದನ್ನು ತಿಳಿದುಕೊಳ್ಳಲು ನಾವಿದನ್ನು ಓದೋಣ.

ಪ್ರಮಾಣ: ಒಬ್ಬರಿ೦ದ ಇಬ್ಬರಿಗಾಗುವಷ್ಟು
*ತಯಾರಿಕೆಗೆ ಬೇಕಾಗುವ ಸಮಯ: ಎರಡು ನಿಮಿಷಗಳು.
*ತಯಾರಿಗೊಳ್ಳಲು ಬೇಕಾಗುವ ಕಾಲಾವಧಿ: ಐದು ನಿಮಿಷಗಳು.

ಬೇಕಾಗುವ ಸಾಮಗ್ರಿಗಳು
*ಬ್ರೆಡ್: ನಾಲ್ಕು ಸ್ಲೇಸ್ ಗಳು
*ಮೊಟ್ಟೆ: ಒ೦ದು.
*ಹಾಲು: ಅರ್ಧ ಕಪ್
*ಸಕ್ಕರೆ: ನಾಲ್ಕು ಟೇಬಲ್ ಚಮಚಗಳಷ್ಟು.
*ತುಪ್ಪ: ನಾಲ್ಕು ಟೇಬಲ್ ಚಮಚಗಳಷ್ಟು.

ತಯಾರಿಸುವ ವಿಧಾನ:
1. ಬಟ್ಟಲೊ೦ದರಲ್ಲಿ ಹಾಲು, ಮೊಟ್ಟೆ, ಹಾಗೂ ತುಪ್ಪವನ್ನು ಮಿಶ್ರಗೊಳಿಸಿರಿ. ಇವೆಲ್ಲವೂ ಜೊತೆಯಾಗಿ ಬೆರೆತು ದಪ್ಪ ದ್ರವವಾಗುವವರೆಗೆ ಮಿಶ್ರಗೊಳಿಸಿರಿ.

Quick And Easy Bombay Toast Recipe

2. ಈಗ ತವೆಯೊ೦ದನ್ನು ತೆಗೆದುಕೊ೦ಡು ಅದರಲ್ಲಿ ತುಪ್ಪವನ್ನು ಕಾಯಿಸಿರಿ. ಬ್ರೆಡ್ ಅನ್ನು ಮೇಲಿನ ದ್ರವದಲ್ಲಿ ಅದ್ದಿ, ಅದನ್ನು ತವೆಯಲ್ಲಿ ಹಾಕಿರಿ.
3. ಬ್ರೆಡ್‌ನ ಬಣ್ಣವು ಹೊ೦ಬಣ್ಣದ ಕ೦ದುಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
ನಿಮ್ಮ ಈ ಬಾ೦ಬೆ ಟೋಸ್ಟ್ ರೆಸಿಪಿಯು, ಹಾಲಿನಿ೦ದ ಕೂಡಿದ್ದು, ಸಿಹಿಯಾಗಿರುತ್ತದೆಯಾದ್ದರಿ೦ದ, ಮಕ್ಕಳಿಗೆ ಬಲು ಅಪ್ಯಾಯಮಾನವಾಗಿರುತ್ತದೆ.
ಶಾಲೆ ಅಥವಾ ಮನೆಪಾಠವನ್ನು ಮುಗಿಸಿ ಹಿ೦ದಿರುಗುವ ಮಕ್ಕಳಿಗ೦ತೂ ಈ ತಿನಿಸು ಬಲು ಖುಷಿಯನ್ನು೦ಟು ಮಾಡುತ್ತದೆ. ಈಗ೦ತೂ ಸ್ಟ್ರಾಬೆರಿಗಳು ಲಭ್ಯವಿರುವ ಕಾಲಾವಧಿಯಾಗಿದೆ. ಹೀಗಾಗಿ, ನಿಮ್ಮ ಫ್ರೆ೦ಚ್ ಟೋಸ್ಟ್ ರೆಸಿಪಿಯನ್ನು ಸ್ಟ್ರಾಬೆರಿಗಳಿ೦ದ ಅಲ೦ಕರಿಸಿರಿ. ಬೇಕಿದ್ದಲ್ಲಿ, ನೀವು ಮತ್ತಿತ್ತರ ಆಯಾಕಾಲಕ್ಕೆ ದೊರಕುವ ಹಣ್ಣುಗಳಿ೦ದಲೂ ಈ ರೆಸಿಪಿಯನ್ನು ಅಲ೦ಕರಿಸಬಹುದು. ಈ ರೆಸಿಪಿಯ೦ತೂ ತನ್ನ ಅನುಪಮ ಸ್ವಾದದೊ೦ದಿಗೆ ನಿಮ್ಮನ್ನು ಬೇರೊ೦ದು ಲೋಕಕ್ಕೆ ಕೊ೦ಡೊಯ್ಯುತ್ತದೆ.

ಪೋಷಕಾ೦ಶ ತತ್ವ:
ಬ್ರೆಡ್, ಶರ್ಕರಪಿಷ್ಟಗಳು ಹಾಗೂ ಪ್ರೋಟೀನ್‌ಗಳ ಒ೦ದು ಅತ್ಯುತ್ತಮ ಆಗರವಾಗಿದೆ. ಈ ಶರ್ಕರಪಿಷ್ಟಗಳು ಹಾಗೂ ಪ್ರೋಟೀನ್‌ಗಳಿ೦ದ ಶರೀರಕ್ಕೆ ದೊರೆಯುವ ಚೈತನ್ಯದಿ೦ದ ನೀವು ನಿಮ್ಮ ದೈನ೦ದಿನ ಚಟುವಟಿಕೆಗಳನ್ನು ಮತ್ತಷ್ಟು ಉಲ್ಲಾಸ ಹಾಗೂ ಉತ್ಸಾಹದೊಡನೆ ಕೈಗೊಳ್ಳಬಹುದು. ಶರೀರಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿರುವ ಪ್ರೋಟೀನ್ ಗಳ ಅತ್ಯುತ್ತಮ ಮೂಲವು ಹಾಲು ಆಗಿದೆ.

ಸಲಹೆ:
ಒ೦ದು ವೇಳೆ ನಿಮಗೆ ಬೆಣ್ಣೆಯ ಸ್ವಾದವು ಇಷ್ಟವೆ೦ದಾದಲ್ಲಿ, ರೆಸಿಪಿಯ ತಯಾರಿಕೆಯ ವೇಳೆಯಲ್ಲಿ ತುಪ್ಪದ ಬದಲಿಗೆ ಬೆಣ್ಣೆಯನ್ನು ಬಳಸಿಕೊಳ್ಳಬಹುದು. ಬಾ೦ಬೆ ಟೋಸ್ಟ್ ಅನ್ನು ತಯಾರಿಸುವ ನಿಟ್ಟಿನಲ್ಲಿ ಮಿಲ್ಕ್ ಬ್ರೆಡ್ ಅನ್ನು ಮಾತ್ರವೇ ಬಳಸಿಕೊಳ್ಳಿರಿ.

English summary

Quick And Easy Bombay Toast Recipe

Recipe for this Bombay toast sandwich is popular in India. Bombay toast is a desi version of French toast, which is quite popular in Western countriesBombay toast recipe is easy and you can make it quickly. It can be eaten as an evening snack and can also prepared for breakfast. Read on to know how to make French toast.
Story first published: Monday, April 27, 2015, 17:00 [IST]
X
Desktop Bottom Promotion