For Quick Alerts
ALLOW NOTIFICATIONS  
For Daily Alerts

ಗರಿಗರಿಯಾದ ಆಲೂ ಕುರುಕುರೆ ರೆಸಿಪಿ

|

ಕಡಿಮೆ ಸಮಯದಲ್ಲಿ ರುಚಿಯಾದುದನ್ನು ತಯಾರಿಸುವ ಆಸೆ ನಿಮ್ಮಲ್ಲಿದೆಯೇ? ಹಾಗಿದ್ದರೆ ನಿಮಗಾಗಿ ನಾವಿಂದು ಅದ್ಭುತವಾದ ಸರಳ ರೆಸಿಪಿಯನ್ನು ಮುಂದಿರಿಸಲಿದ್ದು ನೀವದನ್ನು ಖಂಡಿತವಾಗಿಯೂ ಪ್ರಯತ್ನಿಸಲೇಬೇಕು.

ಆಲೂ ಕುರುಕುರೆ ರೆಸಿಪಿ ನಿಮ್ಮ ಸಂಜೆಯ ಚಹಾ ಅಥವಾ ಕಾಫಿಯ ರುಚಿಯನ್ನು ಹೆಚ್ಚಿಸುವುದು ಖಂಡಿತ. ಹಾಗಿದ್ದರೆ ಇನ್ನೇಕೆ ತಡ ಈ ರುಚಿಯಾದ ಸ್ನ್ಯಾಕ್ಸ್ ಮಾಡಲು ನೀವೂ ಪ್ರಯತ್ನಿಸಿ.

Quick & Easy Aloo Kurkure Recipe (Watch Video)

ಆರೋಗ್ಯಕರ ವೆಜಿಟೇಬಲ್ ಮಯೋನೈಸ್ ಸ್ಯಾಂಡ್‌ವಿಚ್!

ಪ್ರಮಾಣ:3
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 5 ನಿಮಿಷಗಳು

ಸಾಮಾಗ್ರಿಗಳು:
*ಆಲೂಗಡ್ಡೆ - 1 ಕಪ್ (ಬೇಯಿಸಿ ಹಿಸುಕಿದ್ದು)
*ಪುದೀನಾ ಎಲೆಗಳು - 1/2 ಕಪ್ (ಕತ್ತರಿಸಿದ್ದು)
*ಹಸಿಮೆಣಸು - 1/2 ಸ್ಪೂನ್ (ಸಣ್ಣಗೆ ಕತ್ತರಿಸಿದ್ದು)
*ಹುರಿದ ಜೀರಿಗೆ ಹುಡಿ - 1/2 ಸ್ಪೂನ್
*ಲಿಂಬೆ ರಸ - 1/2 ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು
*ಮೈದಾ - 1/2 ಕಪ್
*ಅವಲಕ್ಕಿ - 1/2 ಕಪ್ (ಚೆನ್ನಾಗಿ ಅರೆದದ್ದು)
*ನೀರು - 1/2 ಕಪ್
*ಎಣ್ಣೆ - ಹುರಿಯಲು

ಮೊಳಕೆ ಬರಿಸಿದ ಹೆಸರುಕಾಳಿನ ಸಲಾಡ್

ಮಾಡುವ ವಿಧಾನ:
1.ಹಿಸುಕಿದ ಆಲೂಗಡ್ಡೆ, ಕತ್ತರಿಸಿದ ಪುದೀನಾ, ಹಸಿಮೆಣಸು, ಹುರಿದ ಜೀರಿಗೆ ಹುಡಿ, ಉಪ್ಪು ಮತ್ತು ಲಿಂಬೆ ರಸವನ್ನು ಒಂದು ಬೌಲ್‌ನಲ್ಲಿ ಮಿಶ್ರ ಮಾಡಿಕೊಳ್ಳಿ.
2.ಈ ಮಿಶ್ರಣದಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಪಕ್ಕದಲ್ಲಿಡಿ.
3.ಮೈದಾಕ್ಕೆ ಸ್ವಲ್ಪ ನೀರು ಹಾಕಿಕೊಂಡು ಅದನ್ನು ಚೆನ್ನಾಗಿ ಕಲಿಸಿಕೊಳ್ಳಿ.
4.ಹುಡಿ ಮಾಡಿದ ಅವಲಕ್ಕಿಯನ್ನು ಪ್ಲೇಟ್‌ನಲ್ಲಿ ಸುತ್ತಲೂ ಹರಡಿ.
5.ಈಗ ಆಲೂಗಡ್ಡೆ ಉಂಡೆಗಳನ್ನು ಮೈದಾ ಹಿಟ್ಟಿನಲ್ಲಿ ಅದ್ದಿ ನಂತರ ಅವಲಕ್ಕಿ ಮಿಶ್ರಣದಲ್ಲಿ ಉರುಳಿಸಿ.
6.ಉಂಡೆಯ ಎಲ್ಲಾ ಬದಿಯು ಚೆನ್ನಾಗಿ ಕೋಟ್ ಆಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
7.ಕಡಾಯಿಯಲ್ಲಿ ಕಾಯಲು ಎಣ್ಣೆ ಇರಿಸಿ.
8.ಎಣ್ಣೆ ಬಿಸಿಯಾದೊಡನೆ, ಆಲೂಗಡ್ಡೆ ಉಂಡೆಗಳನ್ನು ಎಣ್ಣೆಗೆ ಹಾಕಿ ಮತ್ತು ಚೆನ್ನಾಗಿ ಹುರಿಯಿರಿ.
9.ಚಿನ್ನದ ಬಣ್ಣಕ್ಕೆ ಈ ಉಂಡೆ ತಿರುಗವವರೆಗೆ ಕಾಯಿರಿ.
10.ಪೂರ್ತಿ ಆದ ನಂತರ ಉಂಡೆಯನ್ನು ಎಣ್ಣೆಯಿಂದ ಹೊರತೆಗೆದು ಪ್ಲೇಟ್‌ನಲ್ಲಿ ಇರಿಸಿ.
11.ಉಳಿದ ಉಂಡೆಗಳನ್ನು ಈ ವಿಧಾನವನ್ನು ಅನುಸರಿಸಿಕೊಂಡು ತಯಾರಿಸಿ.

ಈ ರುಚಿಯಾದ ಆಲೂಗಡ್ಡೆ ಉಂಡೆಯನ್ನು ಬಿಸಿಬಿಸಿಯಾಗಿ ಚಟ್ನಿ ಅಥವಾ ಸಾಸ್‌ನೊಂದಿಗೆ ಸೇವಿಸಿ.

X
Desktop Bottom Promotion