For Quick Alerts
ALLOW NOTIFICATIONS  
For Daily Alerts

ಈ ಪನ್ನೀರ್ ಕಟ್ಲೇಟ್ ಮೈ ತೂಕ ಹೆಚ್ಚಿಸುವುದಿಲ್ಲ

|

ಮಳೆಗಾಲದಲ್ಲಿ ಕ್ರಿಸ್ಪಿ ತಿಂಡಿಗಳನ್ನು ತಿನ್ನಬೇಕೆನಿಸುವುದು ಸಹಜ. ಆದರೆ ಕರಿದ ಪದಾರ್ಥಗಳನ್ನು ತಿನ್ನುತ್ತಿದ್ದರೆ ಮಳೆಗಾಲ ಕಳೆಯುವಷ್ಟರಲ್ಲಿ ನಮ್ಮ ಸೈಜ್ ಡಬಲ್ ಆಗಿರುತ್ತದೆ ಅಷ್ಟೇ. ಆದ್ದರಿಂದ ಇಲ್ಲಿ ನಾವು ಎಣ್ಣೆ ಕಮ್ಮಿ ಹಾಕಿ ಮಾಡುವ ಕಟ್ಲೇಟ್ ರೆಸಿಪಿ ನೀಡಿದ್ದೇವೆ. ಆದರೆ ಇದನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿಯೂ ಮಾಡಬಹುದು.

ಮೈ ತೂಕದ ಬಗ್ಗೆ ಗಮನ ಕೊಡುವವರು ನೀವಾದರೆ ಈ ಖಾದ್ಯ ನಿಮಗೆ ಬೆಸ್ಟ್.

ಬೇಕಾಗುವ ಸಾಮಾಗ್ರಿಗಳು
ಪನ್ನೀರ್ 250 ಗ್ರಾಂ
ಬ್ರೆಡ್ ತುಂಡು 2
ಶುಂಠಿ ಮತ್ತು ಬೆಳ್ಳುಳ್ಳಿ 1 ಚಮಚ
ಹಸಿ ಮೆಣಸಿನ ಕಾಯಿ 2
ಚಾಟ್ ಮಸಾಲ 1 ಚಮಚ
ಕರಿ ಮೆಣಸಿನ ಪುಡಿ ಅರ್ಧ ಚಮಚ
ಪುದೀನಾ ಎಲೆ 2 ಚಮಚ
ರಸ್ಕ್ ಅಥವಾ ಬ್ರೆಡ್ ಚೂರು 1 ಕಪ್
ಮೈದಾ 2 ಚಮಚ
ಎಣ್ಣೆ 3 ಚಮಚ
ನೀರು

ತಯಾರಿಸುವ ವಿಧಾನ
* ಬ್ರೆಡ್ ಅನ್ನು ನೀರಿನಲ್ಲಿ ಅದ್ದಿ, ನಂತರ ತೆಗೆದು ಅದರಿಂದ ನೀರಿನ್ನು ಹಿಂಡಿ ತೆಗೆಯಿರಿ.
* ನಂತರ ಬ್ರೆಡ್ ಚೂರನ್ನು ಒಂದು ಬಟ್ಟಲಿಗೆ ಹಾಕಿ, ಅದರಲ್ಲಿ ಪನ್ನೀರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಈರುಳ್ಳಿ, ಹಸಿ ಮೆಣಸಿನಕಾಯಿ, ಅರಿಶಿಣ ಪುಡಿ, ಚಾಟ್ಸ್, ಕರಿ ಮೆಣಸಿನ ಪುಡಿ, ಪುದೀನಾ ಎಲೆ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ, ಉಂಡೆ ಕಟ್ಟಿ.
* ನಂತರ ಕಟ್ಲೇಟ್ ನ ಶೇಪ್ ಗೆ ತಟ್ಟಿ.
* ತವಾವನ್ನು ಬಿಸಿ ಮಾಡಲು ಇಡಿ.
* ಮೈದಾಕ್ಕೆ ಸ್ವಲ್ಪ ನೀರು ಹಾಕಿ ಕಲೆಸಿ. ಈಗ ತಟ್ಟಿದ ಕಟ್ಲೇಟ್ ಅನ್ನು ಒಮ್ಮೆ ಮೈದಾ ಹಿಟ್ಟಿನಲ್ಲಿ ಅದ್ದಿ, ನಂತರ ಬ್ರೆಡ್ ಚೂರಿನಲ್ಲಿ ಹೊರಳಾಡಿಸಿ ತವಾಕ್ಕೆ ಎಣ್ಣೆ ಸವರಿ ಅದಕ್ಕೆ ಹಾಕಿ ಎರಡೂ ಬದಿ ಕಂದು ಬಣ್ಣ ಬರುವವರೆಗೆ ಬೇಯಿಸಿದರೆ ಪನ್ನೀರ್ ಕಟ್ಲೇಟ್ ರೆಡಿ.

English summary

Paneer Cutlet Recipe

Paneer is a favourite among vegetarians and non-vegetarians alike. So, here is a spicy and a mouthwatering paneer cutlet recipe.
X
Desktop Bottom Promotion