For Quick Alerts
ALLOW NOTIFICATIONS  
For Daily Alerts

ಚಿತ್ರ ಮಾಹಿತಿ:ಪನ್ನೀರ್ ಕ್ಯಾಪ್ಸಿಕಂ ಪೆಪ್ಪರ್ ಡ್ರೈ

|

ಪನ್ನೀರ್ ನಲ್ಲಿ ಸ್ವಲ್ಪ ಖಾರದ ಸ್ಟಾಟರ್ಸ್ ತಿನ್ನಬಯಸುವುದಾದರೆ ಈ ಪನ್ನೀರ್ ಕ್ಯಾಪ್ಸಿಕಂ ಡ್ರೈ ಟ್ರೈ ಮಾಡಬಹುದು. ಈ ಸ್ಟಾಟರ್ಸ್ ಅನ್ನು ಮಾಡುವ ವಿಧಾನ ಸುಲಭವಾಗಿದ್ದು ರೆಸಿಪಿಯನ್ನು ಸ್ಟೆಪ್ ಬೈ ಸ್ಟೆಪ್ ನಲ್ಲಿ ನೀಡಲಾಗಿದೆ ನೋಡಿ.

ಬೇಕಾಗುವ ಸಾಮಾಗ್ರಿಗಳು

ಪನ್ನಿರ್ 500 ಗ್ರಾಂ
ಹಸಿ ಮೆಣಸಿನ ಕಾಯಿ 1-2
ದುಂಡು ಮೆಣಸಿನ ಕಾಯಿ 1
ಈರುಳ್ಳಿ 1
ಕರಿಮೆಣಸಿನ ಪುಡಿ ಒಂದು ಚಮಚ( ಖಾರಕ್ಕೆ ತಕ್ಕಷ್ಟು)
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಇಂಗು ಹಾಗೂ ಮೆಂತೆ ಬೀಜ
ಸ್ವಲ್ಪ ಕರಿಬೇವಿನ ಎಲೆ
ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಮಾಡುವ ವಿಧಾನವನ್ನು ಸ್ಲೈಡ್ ನಲ್ಲಿ ನೀಡಲಾಗಿದೆ ನೋಡಿ:

ಸ್ಟೆಪ್ 1

ಸ್ಟೆಪ್ 1

ಸಾಮಾಗ್ರಿಗಳಲ್ಲಿ ಈರುಳ್ಳಿ, ಪನ್ನೀರ್, ಕ್ಯಾಪ್ಸಿಕಂ ಇವುಗಳನ್ನು ಕತ್ತರಿಸಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿ ಮೆಣಸಿನ ಪುಡಿ, ಹಸಿ ಮೆಣಸು, ಉಪ್ಪು, ಮೆಂತೆ, ಹಿಂಗು ಇವುಗಳನ್ನು ಜೋಡಿಸಿ ಇಡಿ.

ಸ್ಟೆಪ್ 2

ಸ್ಟೆಪ್ 2

ಈಗ ಬಾಣಲೆಯನ್ನು ಉರಿಯಲ್ಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕತ್ತರಿಸಿದ ಪನ್ನೀರ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ.

ಸ್ಟೆಪ್ 3

ಸ್ಟೆಪ್ 3

ಈಗ ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಮೆಂತೆ ಹಾಕಿ , ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 2-3 ನಿಮಿಷ ಹುರಿಯಿರಿ.

ಸ್ಟೆಪ್ 4

ಸ್ಟೆಪ್ 4

ಸ್ವಲ್ಪ ಕರಿ ಬೇವಿನ ಎಲೆ, ಈರುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

ಸ್ಟೆಪ್ 5

ಸ್ಟೆಪ್ 5

ಈಗ, ಫ್ರೈ ಮಾಡಿದ ಪನ್ನೀರ್ ಹಾಗೂ ಕರಿ ಮೆಣಸಿನ ಪುಡಿ ಹಾಕಿ.

ಸ್ಟೆಪ್ 6

ಸ್ಟೆಪ್ 6

ನಂತರ ದುಂಡು ಮೆಣಸಿನಕಾಯಿ ಹಾಕಿ, ಕರಿ ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿದರೆ ಪನ್ನೀರ್ ಕ್ಯಾಪ್ಸಿಕಂ ಪೆಪ್ಪರ್ ಡ್ರೈ ರೆಡಿ. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಸ್ಟೆಪ್ 7

ಸ್ಟೆಪ್ 7

ಈಗ ರೆಡಿಯಾದ ಕ್ಯಾಪ್ಸಿಕಂ ಅನ್ನು ಬಟ್ಟಲಿನಲ್ಲಿ ಹಾಕಿ ಮನೆಯವರಿಗೆ ಸವಿಯಲು ಕೊಡಿ.

Image courtesy: Abhinaya Prabhu

English summary

Paneer Capsicum Pepper Dry | Paneer Starters Recipe | ಪನ್ನೀರ್ ಕ್ಯಾಪ್ಸಿಕಂ ಪೆಪ್ಪರ್ ಡ್ರೈ | ಪನ್ನೀರ್ ಸ್ಟಾಟರ್ಸ್ ರೆಸಿಪಿ

If you want to prepare paneer in bit of spicy you can go for cpaneer capsicum pepper dry. Here we have given the easy recipe of paneer capsicum pepper dry.
X
Desktop Bottom Promotion