For Quick Alerts
ALLOW NOTIFICATIONS  
For Daily Alerts

ರುಚಿ ರುಚಿಯಾದ ನೂಡಲ್ಸ್ ಕಟ್ಲೇಟ್ ಖಾದ್ಯ

|

ಈ ಜಗತ್ತಿನಲ್ಲೇ ಅತ್ಯಂತ ರುಚಿರವಾದ ತಿನಿಸನ್ನು ನಾವು ಈ ಬಾರಿ ಪ್ರಯತ್ನಿಸೋಣ. ನೂಡಲ್ಸ್ ಕಟ್ಲೇಟ್ ಬಗ್ಗೆ ನಿಮಗೆ ಗೊತ್ತಿದೆಯೇ? ಗೊತ್ತಿಲ್ಲದಿದ್ದಲ್ಲಿ, ಈ ಖಾದ್ಯ ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುವುದು ಖಂಡಿತ. ಈ ನೂಡಲ್ ಕಟ್ಲೇಟ್ ಖಾದ್ಯ ಮಾಡಲು ತುಂಬಾ ಸುಲಭವಾಗಿದ್ದು ಹೆಚ್ಚಿನ ಸಮಯವನ್ನು ಇದು ತೆಗೆದುಕೊಳ್ಳುವುದಿಲ್ಲ.

ಮಕ್ಕಳಿಗಂತೂ ನೂಡಲ್ಸ್ ಅಂದರೆ ಪಂಚಪ್ರಾಣ ಅಲ್ಲವೇ ಅದರಲ್ಲೂ ನೀವಿದನ್ನು ರೌಂಡ್ ಆಕಾರದಲ್ಲಿ ಮಾಡಿದರೆಂದರೆ ಇದು ಅವರಿಗೆ ಸಣ್ಣ ಟಾಟ್ಸ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ತಮ್ಮ ಮಕ್ಕಳಿಗೆ ಸುಲಭವಾಗಿ ಮಾಡುವ ಖಾದ್ಯವಾಗಿದೆ. ಹಾಗಾಗಿ ಕೆಲಸಕ್ಕೆ ಹೋಗುವ ತಾಯಂದಿರು ನೂಡಲ್ಸ್ ಅನ್ನು ಆಯ್ಕೆಮಾಡಿಕೊಳ್ಳುತ್ತಾರೆ.

Noodle Cutlet Recipe For Tiny Tots

ಅದೂ ಮಕ್ಕಳು ಶಾಲೆ ಬಿಟ್ಟು ಬಸವಳಿದು ಬಂದಾಗ ತಮ್ಮ ಸಂಜೆಯ ತಿಂಡಿ ವಿಶೇಷ ಮತ್ತು ಸವಿಯಾಗಿ ಇರಬೇಕೆಂದು ಬಯಸುತ್ತಾರೆ. ಈ ನೂಡಲ್ಸ್ ಕಟ್ಲೇಟ್ ಅವರಿಗೆ ಇಷ್ಟವಾಗುವುದು ಖಂಡಿತ. ಹಾಗಿದ್ದರೆ ನಿಮ್ಮ ಮಕ್ಕಳ ಹಸಿವನ್ನು ತಣಿಸುವ ರುಚಿಕರವಾದ ನೂಡಲ್ಸ್ ಖಾದ್ಯ ಇಲ್ಲಿದೆ. ಈ ಲೇಖನದಲ್ಲಿ ನಾವು ತಯಾರಿ ವಿಧಾನವನ್ನು ನೀಡಿದ್ದು ಮಾಡಲು ತುಂಬಾ ಸರಳವಾಗಿದೆ.

ರುಚಿ ರುಚಿಯಾದ ಕಡ್ಲೆಬೇಳೆ ಆಂಬೋಡೆ ರೆಸಿಪಿ!

ಪ್ರಮಾಣ:3
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು
*ನೂಡಲ್ಸ್ - 150 ಗ್ರಾಮ್ಸ್
*ಬೇಯಿಸಿದ ತರಕಾರಿ - 1/2 ಕಪ್ (ನಿಮ್ಮ ಆಯ್ಕೆಯದ್ದು)
*ಬಟಾಣಿ - 1/4 ಕಪ್ (ಬೇಯಿಸಿದ್ದು)
*ಸ್ಪ್ರಿಂಗ್ ಈರುಳ್ಳಿ - 1/4 ಕಪ್ (ಕತ್ತರಿಸಿದ್ದು)
*ಸ್ಪ್ರಿಂಗ್ ಈರುಳ್ಳಿ ಗ್ರೀನ್ಸ್ - 1/2 ಕಪ್ (ಕತ್ತರಿಸಿದ್ದು)
*ಹಸಿಮೆಣಸು - 1/2 ಚಮಚ (ಕತ್ತರಿಸಿದ್ದು)
*ಕೊತ್ತಂಬರಿ ಸೊಪ್ಪು - 1/2 ಕಪ್ (ಕತ್ತರಿಸಿದ್ದು)
*ಚಾಟ್ ಮಸಾಲಾ - 1/2 ಚಮಚ
*ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ
1.ಕುದಿಯುತ್ತಿರುವ ನೀರಿನಲ್ಲಿ ನೂಡಲ್ಸ್ ಅನ್ನು ಬೇಯಿಸುವುದರೊಂದಿಗೆ ಮೊದಲು ಪ್ರಾರಂಭಿಸಿ
2.ಪಾತ್ರೆಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಜೊತೆಗೆ ನೂಡಲ್ಸ್ ಅನ್ನು ಕೂಡ ಮಿಶ್ರ ಮಾಡಿಕೊಳ್ಳಿ. ನಿಮ್ಮ ಕೈಗಳನ್ನು ಬಳಸಿಕೊಂಡು, ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
3.ಈಗ ಈ ಮಿಶ್ರಣವನ್ನು ಹತ್ತು ಸಮ ಪಾಲುಗಳನ್ನಾಗಿ ಮಾಡಿಕೊಳ್ಳಿ. ನಿಮ್ಮ ಹಸ್ತವನ್ನು ಬಳಸಿಕೊಂಡು ಕಟ್ಲೇಟ್ ಆಕಾರವನ್ನು ನೂಡಲ್ಸ್‌ ಅನ್ನು ಮಾಡಿಕೊಳ್ಳಿ. ಇದನ್ನು ಚಪ್ಪಟೆ ಆಕಾರದಲ್ಲಿ ತಟ್ಟಿಕೊಳ್ಳಿ.
4.ಇದು ಸಿದ್ಧವಾದಾಗ, ನಿಮ್ಮ ಹಸ್ತಗಳಿಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಂಡು ಬಿಸಿ ಎಣ್ಣೆಗೆ ನೂಡಲ್ ಕಟ್ಲೇಟ್ ಅನ್ನು ಹಾಕಿ.
5.ಕಟ್ಲೇಟ್ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಇದನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ.
6.ಇದು ಸಂಪೂರ್ಣಗೊಂಡಾಗ, ಇನ್ನೊಂದು ಕಟ್ಲೇಟ್ ಅನ್ನು ಎಣ್ಣೆಯಲ್ಲಿ ಹಾಕಿ. ಉರಿ ದೊಡ್ಡ ಗಾತ್ರದಲ್ಲಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಇಲ್ಲದಿದ್ದಲ್ಲಿ ಕಟ್ಲೇಟ್ ಹೆಚ್ಚು ಬೆಂದುಹೋಗಬಹುದು.

ಕಟ್ಲೇಟ್ ಅನ್ನು ಕಾಗದದ (ಟಿಶ್ಯೂ ಪೇಪರ್) ಮೇಲೆ ಇರಿಸಿ ಇದರಿಂದ ಹೆಚ್ಚುವರಿ ಎಣ್ಣೆ ನೀಗಬಹುದಾಗಿದೆ. ನಿಮ್ಮ ನೂಡಲ್ಸ್ ಕಟ್ಲೇಟ್ ಸವಿಯಲು ಸಿದ್ಧವಾಗಿದೆ. ಟೊಮೇಟೊ ಸಾಸ್ ಅನ್ನು ಬಳಸಿಕೊಂಡು ಈ ಆರೋಗ್ಯಕರ ಹಾಗೂ ರುಚಿಕರವಾದ ಖಾದ್ಯವನ್ನು ಸವಿಯಿರಿ.

X
Desktop Bottom Promotion