For Quick Alerts
ALLOW NOTIFICATIONS  
For Daily Alerts

ಹೆಲ್ತಿ ಮಶ್ರೂಮ್ ಸ್ಯಾಂಡ್ ವಿಚ್

|

ಅಣಬೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ರುಚಿಯಾದ ಸ್ಯಾಂಡ್ ವಿಚ್ ತಯಾರಿಸಬಹುದು. ಆದರೆ ಹೀಗೆ ಸ್ಯಾಂಡ್ ವಿಚ್ ತಯಾರಿಸುವಾಗ ಗೋಧಿ ಬ್ರೆಡ್ ಬಳಸಿದರೆ ಆರೋಗ್ಯಕರ.

ಸಂಜೆ ಸ್ನ್ಯಾಕ್ಸ್ ಆಗಿಯೂ ಇದನ್ನು ತಯಾರಿಸಬಹುದು ಅಥವಾ ಬ್ರೇಕ್ ಫಾಸ್ಟ್ ಗೂ ಇದನ್ನು ತಯಾರಿಸಬಹುದು. ಬನ್ನಿ ಈ ಸ್ಯಾಂಡ್ ವಿಚ್ ಮಾಡುವುದು ಹೇಗೆ ಎಂದು ನೋಡೋಣ:

Mushroom Sandwitch Recipe

ಬೇಕಾಗುವ ಸಾಮಾಗ್ರಿಗಳು
ಅಣಬೆ 1 ಪ್ಯಾಕ್
ಬ್ರೆಡ್ ಚೂರುಗಳು 8
ಎಣ್ಣೆ 1 ಚಮಚ ಬೆಳ್ಳುಳ್ಳಿ 2(ಚಿಕ್ಕದಾಗಿ ಕತ್ತರಿಸಿದ್ದು)
ಈರುಳ್ಳಿ1/2 (ಕತ್ತರಿಸಿದ್ದು)
ಗರಂ ಮಸಾಲ
ಖಾರದ ಪುಡಿ
ರುಚಿಗೆ ತಕ್ಕ ಉಪ್ಪು
ಬೆಣ್ಣೆ 1 ಚಮಚ
ತುರಿದ ಚೀಸ್ 2 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

* ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಈರುಳ್ಳಿ ಬೆಳ್ಳುಳ್ಳಿ ಹಾಕಿ ಹಾಕಿ ಕಂದು ಬಣ್ಣ ಬರುವವರಗೆ ಹುರಿಯಿರಿ. ನಂತರ ಅಣಬೆ ಹಾಕಿ, ಗರಂ ಮಸಾಲ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಚೆನ್ನಾಗಿ ಫ್ರೈ ಮಾಡಿ, ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಅಣಬೆಯನ್ನು ಒಂದು ಪಾತ್ರೆಯಲ್ಲಿ ಹಾಕಿಡಿ.

* ಈಗ ತವಾವನ್ನು ಬಿಸಿ ಮಾಡಿ ಅದರಲ್ಲಿ ಬೆಣ್ಣೆ ಹಾಕಿ ಟೋಸ್ಟ್ ಮಾಡಿ. ಈಗ ಒಂದು ಬ್ರೆಡ್ ಮಧ್ಯೆ ಅಣಬೆ ಹಾಕಿ, ತುರಿದ ಚೀಸ್ ಹಾಕಿ ಅದನ್ನು ಮತ್ತೊಂದು ಬ್ರೆಡ್ ನಿಂದ ಮುಚ್ಚಿ, ತವಾದಲ್ಲಿ ಒಮ್ಮೆ ಮಗುಚಿ ಹಾಕಿ ತೆಗೆದರೆ ಮಶ್ರೂಮ್ ಸ್ಯಾಂಡ್ ವಿಚ್ ರೆಡಿ.

English summary

Mushroom Sandwitch Recipe

This is one of the most healthy sandwiches to have in your meals.You need to keep in mind that you use whole wheat bread only as they are healthier. This is one of the most healthy snacks as you get to have lots of proteins and fibre in one go.
X
Desktop Bottom Promotion