For Quick Alerts
ALLOW NOTIFICATIONS  
For Daily Alerts

ಚೀಸ್ ಹಾಕಿ ಮಾಡಿ ನೋಡಿ ಈ ಮಶ್ರೂಮ್ ಆಮ್ಲೇಟ್

|

ಆಮ್ಲೇಟ್ ಅನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಇಲ್ಲಿ ನಾವು ಮಶ್ರೂಮ್ ಆಮ್ಲೇಟ್ ಬಗ್ಗೆ ಹೇಳಿದ್ದೇವೆ. ರೆಸ್ಟೋರೆಂಟ್ ಗಳಲ್ಲಿ ದೊರೆಯುವ ಈ ಆಮ್ಲೇಟ್ ಅನ್ನು ಹೆಚ್ಚಿನ ಪರಿಶ್ರಮವಿಲ್ಲದೆ ನಾವೇ ತಯಾರಿಸಬಹುದು. ಚೀಸ್ ಮತ್ತು ಬೆಣ್ಣೆ ಹಾಕಿ ತಯಾರಿಸುವ ಈ ಆಮ್ಲೇಟ್ ಮೊಟ್ಟೆ ಪ್ರಿಯರ ಮನ ಗೆಲ್ಲುವಂತಿದೆ.

ಸವಿರುಚಿಯ ಈ ಮಶ್ರೂಮ್ ಆಮ್ಲೇಟ್ ಹೇಗೆ ಮಾಡುವುದು ಎಂದು ನೋಡೋಣ ಬನ್ನಿ:

Mushroom Omelette Recipe

ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ 4
ಅಣಬೆ 1 ಪ್ಯಾಕೆಟ್
ಚಿಟಿಕೆಯಷ್ಟು ಗರಂ ಮಸಾಲ
ರುಚಿಗೆ ತಕ್ಕ ಉಪ್ಪು
ಈರುಳ್ಳಿ 1
ಕಾಳು ಮೆಣಸಿನ ಪುಡಿ 1 ಚಮಚ
ಚೀಸ್ 1 ತುಂಡು
ಬೆಣ್ಣೆ 2 ಚಮಚ

ತಯಾರಿಸುವ ವಿಧಾನ

* ಪಾತ್ರೆಗೆ 1 ಚಮಚ ಬೆಣ್ಣೆ ಹಾಕಿ ಉರಿಯಲ್ಲಿಡಿ. ಬೆಣ್ಣೆ ಬಿಸಿಯಾದಾಗ ಅದಕ್ಕೆ ಶುಚಿ ಮಾಡಿದ ಅಣಬೆಯನ್ನು ಹಾಕಿ, ರುಚಿಗೆ ತಕ್ಕ ಉಪ್ಪು ಮತ್ತು ಗರಂ ಮಸಾಲ ಹಾಕಿ ಚೆನ್ನಾಗಿ ಬೇಯಿಸಬೇಕು.

* ಮೊಟ್ಟೆಗೆ ಸ್ವಲ್ಪ ಉಪ್ಪು ಮತ್ತು ಕರಿ ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕದಡಬೇಕು.

* ನಂತರ ತವಾವನ್ನು ಗ್ಯಾಸ್ ಮೇಲೆಟ್ಟು ಸ್ವಲ್ಪ 2 ಚಮಚ ಎಣ್ಣೆ ಹಾಕಿ ಕದಡಿದ ಮೊಟ್ಟೆ ಹಾಕಿ , ಮೊಟ್ಟೆ ಸ್ವಲ್ಪ ಬೇಯುವಾಗ ಫ್ರೈ ಮಾಡಿದ ಅಣಬೆಯನ್ನು ಹಾಕಿ, ಅದರ ಮೇಲೆ ಚೀಸ್ ಹಾಕಿ ನಂತರ ತೆಗೆದರೆ ರುಚಿ-ರುಚಿಯಾದ ಮಶ್ರೂಮ್ ಆಮ್ಲೇಟ್ ರೆಡಿ.

English summary

Mushroom Omelette Recipe | Variety Of Omelette Recipe | ಮಶ್ರೂಮ್ ಆಮ್ಲೇಟ್ ರೆಸಿಪಿ | ಅನೇಕ ಬಗೆಯ ಆಮ್ಲೇಟ್ ರೆಸಿಪಿ

Have you tried the mushroom and onion filled omelette yet? As it is a weekend, you can try this egg recipe for your breakfast. Check out the recipe.
X
Desktop Bottom Promotion