For Quick Alerts
ALLOW NOTIFICATIONS  
For Daily Alerts

ಬರೀ 15 ನಿಮಿಷದಲ್ಲಿ ತಯಾರಿಸಿ ಕ್ಯಾಪ್ಸಿಕಂ ಚಿಕನ್ ನೂಡಲ್ಸ್!

By Deepak
|

ನೀವು ಉಪಹಾರಮಂದಿರಕ್ಕೆ ಹೋದಾಗಲೆಲ್ಲ ಮೊದಲು ನೀವು ಮಾಡುವ ಕೆಲಸ ಮೆನು ಕಾರ್ಡ್‌ನಲ್ಲಿ ನಿಮಗೆ ಇಷ್ಟವಾಗಿರುವ ತಿಂಡಿ ತಿನಿಸುಗಳನ್ನು ಹುಡುಕುವುದು ಅಲ್ಲವೇ? ಒಂದು ವೇಳೆ ನೀವು ಚೈನೀಸ್ ಆಹಾರ ಪ್ರಿಯರಾಗಿದ್ದಲ್ಲಿ ನಾವು ನಿಮಗಾಗಿ ಒಂದು ಸರ್‌‍ಪ್ರೈಸ್ ನೀಡುತ್ತಿದ್ದೇವೆ.....! ಆಶ್ಚರ್ಯವಾಯಿತೇ? ಹೌದು ಇಂದು ನಾವು ನಿಮ್ಮೊಂದಿಗೆ ಒಂದು ಸುಲಭವಾಗಿ ತಯಾರಿಸಬಹುದಾದ ಕ್ಯಾಪ್ಸಿಕಂ (ದೊಣ್ಣೆ ಮೆಣಸು) ಚಿಕನ್ ನೂಡಲ್ಸ್ ರೆಸಿಪಿಯನ್ನು ಹಂಚಿಕೊಳ್ಳುತ್ತಿದ್ದೇವೆ...

ಅದರಲ್ಲಿಯೂ ಪ್ರೋಟಿನ್ ಮತ್ತು ವಿಟಮಿನ್‍ ಅಧಿಕವಿರುವ ಕೋಳಿ ಮಾಂಸವನ್ನು ಇದಕ್ಕೆ ಸೇರಿಸುವುದರಿಂದ ಇದರ ರುಚಿಗೆ ನೀವೇ ವಿಸ್ಮಯಗೊಳ್ಳುತ್ತೀರಿ...! ಈ ಕ್ಯಾಪ್ಸಿಕಂ ಚಿಕನ್ ನೂಡಲ್ಸ್ ರೆಸಿಪಿಗೆ ಬಳಸಲಾಗುವ ಒಂದೇ ಒಂದು ಮಸಾಲೆ ಪದಾರ್ಥವೆಂದರೆ, ಅದು ಕರಿ ಮೆಣಸಿನ ಪುಡಿ ಮಾತ್ರ. ಈ ಕರಿ ಮೆಣಸು ಇತರೆ ಪದಾರ್ಥಗಳ ಜೊತೆಗೆ ಸೇರಿ, ಈ ಚಿಕನ್ ನೂಡಲ್ಸ್ ರೆಸಿಪಿಯ ರುಚಿಯನ್ನು ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ...! ಬನ್ನಿ ಇದನ್ನು ತಯಾರಿಸಲು ಅಗತ್ಯವಾಗಿರುವ ಪದಾರ್ಥಗಳತ್ತ ಒಮ್ಮೆ ಗಮನ ಹರಿಸೋಣ: ಫಟಾಫಟ್ ರೆಡಿ ಮಾಡಿ ಈ "ನೂಡಲ್ಸ್ ಮ್ಯಾಜಿಕ್ ರೆಸಿಪಿ"!

Mouthwatering Capsicum Chicken Noodle Recipe

*ಮೂವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 20 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 25 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ನೂಡಲ್ಸ್ - 1 ಕೆ.ಜಿ (ಬೇಯಿಸಿದಂತಹುದು)
*ಕೋಳಿ ಮಾಂಸ - 500 ಗ್ರಾಂಗಳು (ಕತ್ತರಿಸಿದ ಮತ್ತು ಬೇಯಿಸಿದ)
*ದೊಣ್ಣೆ ಮೆಣಸು - 1 (ಕತ್ತರಿಸಿದಂತಹುದು)
*ಹಸಿ ಮೆಣಸು- 1 ( ಕತ್ತರಿಸಿದಂತಹುದು)
*ಸೋಯಾ ಸಾಸ್ - 1 ಟೀ.ಚಮಚ
*ಮೆಣಸಿನ ಪುಡಿ- 2 ಟೀ.ಚಮಚ
*ಬ್ರೊಕ್ಕೊಲಿ - ½ ಕಪ್ ( ಸಣ್ಣಗೆ ಕತ್ತರಿಸಿದಂತಹುದು)
*ಟೊಮೇಟೊ- 1 (ಕತ್ತರಿಸಿದಂತಹುದು)
*ಈರುಳ್ಳಿ - ½ ಕಪ್ (ತುರಿದಂತಹುದು)
*ಹಸಿ ಬಟಾಣಿ - ½ ಕಪ್ (ಫ್ರೋಜೆನ್ ಮಾಡಲಾದುದು)
*ಚಿಕನ್ ತುಂಡನ್ನು ಸಣ್ಣಗೆ ಕತ್ತರಿಸಿರುವಂತಹದು
*ರುಚಿಗೆ ತಕ್ಕಷ್ಟು ಉಪ್ಪು
*ಆಲೀವ್ ಎಣ್ಣೆ- 2 ಟೀ.ಚಮಚ

ಮಾಡುವ ವಿಧಾನ
*ವೊಕ್‌ಗೆ ( ಚೈನೀಸ್ ಖಾದ್ಯ ತಯಾರಿಸುವ ಬಾಣಲೆ) ಆಲೀವ್ ಎಣ್ಣೆಯನ್ನು ಹಾಕಿ
*ಬಿಸಿಯಾದ ಮೇಲೆ, ಅದಕ್ಕೆ ತುರಿದ ಈರುಳ್ಳಿಯನ್ನು ಹಾಕಿ ಮತ್ತು ಇದು ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ.
*ವೊಕ್‌ಗೆ ಸಣ್ಣಗೆ ಕತ್ತರಿಸಿರುವ ಚಿಕನ್ ತುಂಡುಗಳನ್ನು ಹಾಕಿ, ನಂತರ ಅದನ್ನು ಕಡಿಮೆ ಗಾತ್ರದ ಉರಿಯಲ್ಲಿ ಹುರಿಯಿರಿ.
*ಈಗ ಇದಕ್ಕೆ ಕತ್ತರಿಸಿದ ಟೊಮೇಟೊ, ಬ್ರೊಕ್ಕೊಲಿ, ದೊಡ್ಡಮೆಣಸು, ಹಸಿರು ಮೆಣಸು ಹಾಕಿ 3 ನಿಮಿಷಗಳಷ್ಟು ಕಾಲ ಹುರಿಯಿರಿ.
*ಇದರಲ್ಲಿ ಫ್ರೋಜನ್ ಮಾಡಲಾದ ಹಸಿ ಬಟಾಣಿಗಳನ್ನು ಹಾಕಿ ಮತ್ತು ಚೆನ್ನಾಗಿ ಕಲೆಸಿಕೊಡಿ.
*ನಂತರ ಮೆಣಸಿನ ಪುಡಿ ಮತ್ತು ಉಪ್ಪನ್ನು ಬೆರೆಸಿ, ವೊಕ್‍ನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ.
*ಇದಕ್ಕೆ ಕತ್ತರಿಸಿದ ಕೋಳಿ ಮಾಂಸವನ್ನು ಬೆರೆಸಿ, ಕಲೆಸಿಕೊಡಿ. ವೊಕ್ ಮೇಲೆ ಮುಚ್ಚಳವನ್ನು ಮುಚ್ಚಿ, ಮಧ್ಯಮ ಗಾತ್ರದ ಉರಿಯಲ್ಲಿ, 5 ನಿಮಿಷಗಳ ಕಾಲ ಬೇಯಲು ಬಿಡಿ.
*ಇದು ಮುಗಿದ ಮೇಲೆ, ಇದಕ್ಕೆ ನೂಡಲ್ಸ್ ಬೆರೆಸಿ, ಕೊನೆ ಬಾರಿ ಕಲೆಸಿಕೊಡಿ.
*ನೂಡಲ್ಸ್ ಮೇಲೆ ಸ್ವಲ್ಪ ಸೋಯಾ ಸಾಸ್ ಚಿಮುಕಿಸಿ. ನಂತರ ಸಿಮ್ಮರಿನಲ್ಲಿ ಸ್ವಲ್ಪ ಸಮಯ ಬಿಡಿ.
*15 ನಿಮಿಷಗಳ ನಂತರ ಉರಿಯನ್ನು ಆರಿಸಿ.

ಪೋಷಕಾಂಶದ ಸಲಹೆ
ಈ ಖಾದ್ಯದಲ್ಲಿ ಕೋಳಿ ಮಾಂಸ ಇರುವುದರಿಂದ ಮತ್ತು ಅದರಲ್ಲಿ ಪ್ರೋಟಿನ್‍ಗಳು ಅಧಿಕವಾಗಿರುತ್ತವೆ. ಜೊತೆಗೆ ಇದು ತೂಕದ ಬಗ್ಗೆ ಕಾಳಜಿಯುಳ್ಳವರಿಗು ಸಹ ಒಳ್ಳೆಯದು.

ಸಲಹೆ
ನೂಡಲ್ಸ್‌ಗಳನ್ನು ನೀರಿನಲ್ಲಿ ಬೇಯಿಸುವ ಮುನ್ನ ಒಂದು ಚಮಚ ಆಲೀವ್ ಎಣ್ಣೆಯಲ್ಲಿ ಬೆರೆಸಿ

English summary

Mouthwatering Capsicum Chicken Noodle Recipe

Red capsicum chicken noodles recipe sounds like a great treat. It also tastes yummy since it has a ton of veggies added to it. More importantly, this noodle recipe has chicken - a lean meat, rich in protein and other vitamins. It is best to use breast chicken for this noodle recipe as it is tender and juicy...
X
Desktop Bottom Promotion