For Quick Alerts
ALLOW NOTIFICATIONS  
For Daily Alerts

ಮಳೆಗಾಲದ ಸಂಗಾತಿ ನೀರೂರಿಸುವ ಅವಲಕ್ಕಿ ಮಿಕ್ಸರ್

|

ಮಳೆಗಾಲದ ಒದ್ದೆ ಒದ್ದೆ ನೆಲ, ತಂಪಿನ ವಾತಾವರಣ ಪ್ರಕೃತಿಗೆ ಹೊಸ ಜೀವಂತಿಕೆಯನ್ನು ನೀಡುತ್ತದೆ. ನಿಸರ್ಗ ಮಾತೆ ಹೊಚ್ಚ ಹೊಸ ಧಿರಿಸನ್ನು ತೊಟ್ಟು ವಸಂತ ಮಾಸದ ಆಗಮನಕ್ಕೆ ಸಂಭ್ರಮದಿಂದ ಸಿದ್ಧಳಾದಂತೆ ಕಾಣುತ್ತಿದ್ದಾಳೆ.

ಪ್ರಕೃತಿಯ ಈ ಹೊಳಪು ನಮ್ಮ ಕಣ್ಣಿಗೂ ಹಬ್ಬವಾಗುವುದು ನಿಜ ತಾನೇ. ಹೊರಗೆ ಭೋರೆಂದು ಸುರಿಯವ ಮಳೆ ಬರುತ್ತಿದ್ದರೆ ಏನಾದರೂ ಬೆಚ್ಚಗೆ ಕುರುಕುರು ತಿಂಡಿಯನ್ನು ಸವಿಯಬೇಕೆಂಬ ಆಸೆ ಮನದಲ್ಲಿ ಉಂಟಾಗುವುದು ಸಹಜವೇ. ಬಿಸಿ ಬಿಸಿ ಕಾಫಿ ಅಥವಾ ಟೀ ಜತೆಗೆ ಮೆಲ್ಲಲು ಮನೆಯಲ್ಲೇ ತಯಾರಿಸಿದ ಕುರುಕಲು ಉತ್ತಮ ಅಲ್ಲವೇ?

ಹೊರಗಿನ ದೇವರ ಕಾಣಿಕೆಯಾದ ವರ್ಷಧಾರೆಯನ್ನು ಆಸ್ವಾದಿಸುತ್ತಾ ಕಡಿಮೆ ಕ್ಯಾಲೋರಿ ಇರುವ ಆಹಾರವನ್ನು ಸೇವಿಸುವ ಮಜ ಅದನ್ನು ತಿಂದೇ ಸವಿಯಬೇಕು. ಇಂದಿನ ಲೇಖನದಲ್ಲಿ ಕೂಡ ನಮ್ಮ ಓದುಗರಿಗೆ ಇಷ್ಟವಾಗುವ ಕಡಿಮೆ ಕ್ಯಾಲೋರಿ ತಿಂಡಿಯೊಂದಿಗೆ ನಾವು ಬಂದಿದ್ದೇವೆ. ಇದು ಬಾಯಿಗೆ ರುಚಿಯನ್ನು ನೀಡುವುದರೊಂದಿಗೆ ಆರೋಗ್ಯಕ್ಕೂ ಉತ್ತಮವಾಗಿದೆ. ಅವಲಕ್ಕಿ, ಮಂಡಕ್ಕಿ, ಕಡಲೆಕಾಳು ಬೆರೆತ ಸುವಾಸಿತ ಅವಲಕ್ಕಿ ಕುರುಕಲು ತಿಂದಷ್ಟೂ ಮತ್ತೂ ತಿನ್ನಬೇಕೆಂಬ ಹಂಬಲವನ್ನು ಮನದಲ್ಲಿ ಮೂಡಿಸುತ್ತದೆ.

Mouth watering Poha mixture recipe

ಹಾಗಿದ್ದರೆ ಇಂದಿನ ಪಾಕ ವೈವಿಧ್ಯದಲ್ಲಿ ವಿಶೇಷವಾಗಿ ತಯಾರಿಸುವ ಅವಲಕ್ಕಿ ಕುರುಕಲು ಖಾದ್ಯವನ್ನು ಮೆಲ್ಲಲು ತಯಾರಾಗಿ. ಸರಳವಾಗಿರುವ ಈ ಅವಲಕ್ಕಿ ಮಿಕ್ಸರ್ ರೆಸಿಪಿ ಮಳೆಗಾಲದ ಖಾದ್ಯಕ್ಕೆ ದಿ ಬೆಸ್ಟ್ ಎಂದೇ ಹೇಳಬಹುದು. ಇದನ್ನು ತಯಾರಿಸಿ ಗಾಳಿಯಾಡದ ಡಬ್ಬದಲ್ಲಿ ಕೂಡ ಸಂಗ್ರಹಿಸಿಡಬಹುದಾಗಿದೆ.

ಬಾಯಿ ರುಚಿ ಹೆಚ್ಚಿಸುವ ಖಾರದ ಮೆಣಸಿನ ಪಕೋಡಾ ರೆಸಿಪಿ

ಪ್ರಮಾಣ: 4
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು
*ಅವಲಕ್ಕಿ - 5 ಕಪ್‌ಗಳು
*ಅವರೆಕಾಳು - 1 ಕಪ್
*ಕಡಲೆಕಾಳು - 2 ಚಮಚ
*ಬಟಾಣಿ - 3 ಚಮಚ
*ಉದ್ದಿನ ಬೇಳೆ - 3 ಚಮಚ
*ಸಾಸಿವೆ- 3 ಚಮಚ
*ಅರಶಿನ ಹುಡಿ - 1 ಚಮಚ
*ಕರಿಬೇವಿನೆಲೆ - 8-10 ಎಸಳು
*ಮುರಿದ ಕೆಂಪು ಮೆಣಸು - 4-5
*ಇಂಗಿನ ಹುಡಿ - 1 ಚಮಚ
*ಕೊಬ್ಬರಿ -ಸಣ್ಣ ತುಂಡು
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ- 2 ಚಮಚ

ಮಾಡುವ ವಿಧಾನ
1. ಅವರೆಕಾಳನ್ನು ಮೊದಲಿಗೆ ಸಿಪ್ಪೆಯಿಂದ ಬೇರ್ಪಡಿಸಿ ಇದನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ.
2. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅವರೆಕಾಳು ಅನ್ನು ಎಣ್ಣೆಗೆ ಹಾಕಿ ಮತ್ತು ಅದು ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಇದೇ ಸಮಯದಲ್ಲಿ ಅವಲಕ್ಕಿಯನ್ನು ಹುರಿದುಕೊಳ್ಳಿ. ಕೊಬ್ಬರಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ.
3. ಕಡಲೆಕಾಳು, ಕೊಬ್ಬರಿ ತುಂಡನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದುಕೊಳ್ಳಿ. ಇದು ಚಿನ್ನದ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಇದಕ್ಕೆ ಕರಿಬೇವಿನೆಲೆ, ಮೆಣಸು, ಸಾಸಿವೆ, ಉದ್ದಿನ ಬೇಳೆಯನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ.
ನಂತರ ಇದಕ್ಕೆ ಅರಶಿನ ಹುಡಿ, ಇಂಗು, ಉಪ್ಪು ಹಾಕಿ 30 ಸೆಕೆಂಡುಗಳಷ್ಟು ಹುರಿದುಕೊಳ್ಳಿ. ತದನಂತರ ಇದಕ್ಕೆ ಮೆಣಸಿನ ಹುಡಿ ಹಾಕಿ 15 ಸೆಕೆಂಡು ಹುರಿಯಿರಿ.
4. ಇನ್ನು ಇದಕ್ಕೆ ಅವರೆಕಾಳು ಹಾಗೂ ಹುರಿದ ಅವಲಕ್ಕಿಯನ್ನು ಸೇರಿಸಿ. ಉರಿಯನ್ನು ಕಡಿಮೆ ಮಾಡಿಕೊಳ್ಳಿ. ಇದು ತಣ್ಣಗಾಗುತ್ತಿದ್ದಂತೆ ಗಟ್ಟಿ ಮುಚ್ಚಳವಿರುವ ಪಾತ್ರೆಯಲ್ಲಿ ತೆಗೆದಿಡಿ.

ಸಂಜೆಯ ಚಹಾ ಅಥವಾ ಕಾಫಿಯ ಜತೆಗೆ ಸವಿಯಲು ಈ ಹುರಿದ ಅವಲಕ್ಕಿ ಉತ್ತಮ ಕಾಂಬಿನೇಶನ್ ಆಗಿದೆ.

English summary

Mouth watering Poha mixture recipe

Poha Mixture or Aval Mixture is a delicious Indian snack dish made with Poha (rice flakes) and dry fruits and tempered with cumin and chillies. For making it in a perfect style, you really need to fry everything. Because the frying make everything crispy, crunchy and very tasty.
Story first published: Wednesday, July 16, 2014, 15:53 [IST]
X
Desktop Bottom Promotion