For Quick Alerts
ALLOW NOTIFICATIONS  
For Daily Alerts

ಬಿಸಿ-ಬಿಸಿ ಟೀ ಜೊತೆ ಸವಿಯಿರಿ ಹೆಸರುಕಾಳಿನ ಪಕೋಡ

|

ಹೆಸರುಕಾಳು ಬಳಸಿ ಮಾಡುವ ಪಕೋಡವನ್ನು ಬಿಸಿ-ಬಿಸಿಯಾದ ಕಾಫಿ/ಟೀ ಜೊತೆ ತಿನ್ನಲು ಚೆನ್ನ. ಈ ಪಕೋಡವನ್ನು ಇತರ ಪಕೋಡಗಳಿಗೆ ಹೋಲಿಸಿದರೆ ಸ್ವಲ್ಪ ಮೃದುವಾಗಿರುತ್ತದೆ. ಆದ್ದರಿಂದ ತಣಿದ ಮೇಲೂ ಇದನ್ನು ತಿನ್ನಲು ರುಚಿಕರವಾಗಿರುತ್ತದೆ.

ಈ ಸಂಜೆ ತಿಂಡಿಗೆ ಹೆಸರುಕಾಳಿನ ಪಕೋಡ ಮಾಡಬಯಸುವುದಾದರೆ ಸರಳವಾದ ರೆಸಿಪಿ ನೋಡಿ ಇಲ್ಲಿದೆ:

Moong Dal Pakora

ಬೇಕಾಗುವ ಸಾಮಗ್ರಿಗಳು
* 2 ಕಪ್ ಹೆಸರು ಕಾಳು ( ಎರಡು ಭಾಗವಾಗಿರುವಂತಹ ಹೆಸರು ಬೇಳೆ)
* 1 ಕಪ್ ಈರುಳ್ಳಿ
* ಹಸಿ ಮೆಣಸಿನಕಾಯಿ 2 (ಚಿಕ್ಕದಾಗಿ ಕತ್ತರಿಸಿದ್ದು)
* ಸ್ವಲ್ಪ ಶುಂಠಿ (ತುಂಬಾ ಚಿಕ್ಕದಾಗಿ ಕತ್ತರಿಸಿರಬೇಕು)
* ಅರ್ಧ ಚಮಚ ಮೆಂತೆ
* ಅರ್ಧ ಚಮಚ ಜೀರಿಗೆ
* ಸ್ವಲ್ಪ ಕೊತ್ತಂಬರಿ ಪುಡಿ
* ನಿಂಬೆ ರಸ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
* ಕಡಲೆ ಹಿಟ್ಟು ಅರ್ಧ ಕಪ್

ತಯಾರಿಸುವ ವಿಧಾನ:

* 4 ಗಂಟೆಗಳ ಕಾಲ ಹೆಸರು ಬೇಳೆಯನ್ನು ನೆನೆ ಹಾಕಿರಬೇಕು. ನಂತರ ಅವುಗಳನ್ನು ತೊಳೆದು ಮಿಕ್ಸಿಗೆ ಹಾಕಿ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು.

* ಈಗ ರುಬ್ಬಿದ ಮಿಶ್ರಣಕ್ಕೆ ಎಣ್ಣೆ ಮತತ್ಉ ಕಡಲೆ ಹಿಟ್ಟು ಬಿಟ್ಟು ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ ಉಂಡೆ ಕಟ್ಟಿ.

* ನಂತರ ಕಡಲೆ ಹಿಟ್ಟನ್ನು ಸ್ವಲ್ಪ ಗಟ್ಟಿಯಾಗಿ ಕಲೆಸಿ. ಈಗ ಬಾಣಲೆಗೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ.

* ಈಗ ಉಂಡೆಯನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ರುಚಿಯಾದ ಹೆಸರುಕಾಳಿನ ಪಕೋಡ ರೆಡಿ.

English summary

Moong Dal Pakora | Variety Of Pakoda Recipe | ಹೆಸರು ಕಾಳಿನ ಪಕೋಡ ರೆಸಿಪಿ | ಅನೇಕ ಬಗೆಯ ಪಕೋಡ ರೆಸಿಪಿ

Moong Dal Pakoras are the best snacks to have with steaming cups of tea. Check out the moong dal pakora recipe
X
Desktop Bottom Promotion