For Quick Alerts
ALLOW NOTIFICATIONS  
For Daily Alerts

ಬಾಯಿ ರುಚಿ ಹೆಚ್ಚಿಸುವ ಖಾರದ ಮೆಣಸಿನ ಪಕೋಡಾ ರೆಸಿಪಿ

|

ಈ ಮಳೆಗಾಲದ ಋತುವಿನಲ್ಲಿ ಗರಿಗರಿ ಪಕೋಡಾ ಮತ್ತು ಬಿಸಿ ಚಹಾದ ರುಚಿಯೊಂದಿಗೆ ಸವಿಯಲು ಬಯಸುತ್ತೀರಾ? ಈ ಮಳೆಗಾಲದ ಸಮಯ ಅಂತೂ ನಿಮಗೆ ಬಾಯಲ್ಲಿ ನೀರೂರಿಸುವ ರುಚಿಯಾದ ಕರಿದ ತಿಂಡಿಗಳನ್ನು ತಿನ್ನುವಂತೆ ಮಾಡುವುದು ಸಹಜ. ಖಾರದ ತಿನಿಸು ಅಥವಾ ಪಕೋಡಾವನ್ನು ಸೇವಿಸಲು ಈ ಸಮಯಲ್ಲಿ ನಮ್ಮ ಮನಸ್ಸು ಬಯಸುವುದು ಸಹಜವೇ ಆಗಿದೆ.

ಪಕೋಡಾಗಳು ಹುರಿದ ತಿನಿಸುಗಳಾಗಿದ್ದು ಇದನ್ನು ಹಲವಾರು ಸಾಮಾಗ್ರಿಗಳಿಂದ ತಯಾರಿಸಲಾಗುತ್ತದೆ. ಪಕೋಡಾವನ್ನು ತಯಾರಿಸಲು ಸಸ್ಯಾಹಾರಿ ಅಥವಾ ಮಾಂಸಾಹಾರಿ ಸಾಮಾಗ್ರಿಗಳನ್ನು ಕೂಡ ಬಳಸಬಹುದಾಗಿದೆ.

ಈರುಳ್ಳಿ ಪಕೋಡಾ, ಗೋಬಿ ಪಕೋಡಾ, ಆಲೂಗಡ್ಡೆ ಪಕೋಡಾ ಹೀಗೆ ಈ ಪಕೋಡಾಗಳನ್ನು ಹೆಚ್ಚಿನ ಮನೆಗಳಲ್ಲಿ ಮಳೆಗಾಲದ ಸಮಯದಲ್ಲಿ ತಯಾರಿಸಲಾಗುತ್ತದೆ. ಆದರೆ ಮೆಣಸಿನ ಪಕೋಡಾದ ಹೆಸರನ್ನು ನೀವು ಕೇಳಿದ್ದೀರಾ?

Mirch Ke Pakode: Spicy Snack Recipe

ಮೆಣಸಿನ ಪಕೋಡಾವನ್ನು ಈ ಮಳೆಗಾಲದ ಸೀಸನ್‌ನಲ್ಲಿ ಬಾಯಿಯಲ್ಲಿ ನೀರು ಬರಿಸುವ ರೀತಿಯಲ್ಲಿ ತಯಾರಿಸಬಹುದಾಗಿದೆ. ಉದ್ದ ಮೆಣಸನ್ನು ಈ ಪಕೋಡಾ ತಯಾರಿಯಲ್ಲಿ ಬಳಸಲಾಗುತ್ತದೆ. ಇದಲ್ಲದೆ ಉದ್ದವಾಗಿರುವ ಕೆಂಪು ಮೆಣಸನ್ನು ಬಳಸಬಹುದಾಗಿದೆ.

ಹಾಗಿದ್ದರೆ ಮೆಣಸಿನ ಪಕೋಡಾ ಖಾದ್ಯವನ್ನು ತಯಾರಿಸುವ ವಿಧಾನವನ್ನು ಕೆಳಗೆ ನಾವು ನೀಡಿದ್ದು ಇದರಿಂದ ಸುಲಭವಾದ ಖಾದ್ಯವನ್ನು ನಿಮಗೆ ತಯಾರಿಸಿಕೊಳ್ಳಬಹುದಾಗಿದೆ.

ರುಚಿ ರುಚಿಯಾದ ಕಡ್ಲೆಬೇಳೆ ಆಂಬೋಡೆ ರೆಸಿಪಿ!

ಪ್ರಮಾಣ: 2
*ಸಿದ್ಧತಾ ಸಮಯ: 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು

ಸಾಮಾಗ್ರಿಗಳು
*ದೊಡ್ಡ ಹಸಿ ಮೆಣಸುಗಳು - 10
*ಕಡಲೆ ಹುಡಿ - 1 ಕಪ್
*ಕೆಂಪು ಮೆಣಸಿನ ಹುಡಿ - 1 ಚಮಚ
*ಚಾಟ್ ಮಸಾಲಾ - 3 ಚಮಚ
*ಜೀರಿಗೆ - 1 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಅರಶಿನ ಹುಡಿ - 1/2 ಚಮಚ
*ಎಣ್ಣೆ - ಚೆನ್ನಾಗಿ ಕರಿಯಲು

ಮಾಡುವ ವಿಧಾನ
1. ಕಡಲೆ ಹಿಟ್ಟು, ಅರಶಿನ ಹುಡಿ, ಮೆಣಸಿನ ಹುಡಿ, ಉಪ್ಪು, ಜೀರಿಗೆ ಮತ್ತು ಚಾಟ್ ಮಸಾಲಾವನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಚಿನ್ನಾಗಿ ಮಿಶ್ರ ಮಾಡಿಕೊಳ್ಳಿ.
2. ಇದನ್ನು ದಪ್ಪ ಹಿಟ್ಟನ್ನಾಗಿ ಮಾಡಿಕೊಳ್ಳಲು ಇದಕ್ಕೆ ಕಪ್‌ನಷ್ಟು ನೀರನ್ನು ಸೇರಿಸಿ.
3. ಅಡಿಗೆ ಮನೆಯ ಬಟ್ಟೆಯನ್ನು ತೆಗೆದುಕೊಂಡು ತೊಳೆದ ಹಸಿಮೆಣಸಿನ ನೀರನ್ನು ಚೆನ್ನಾಗಿ ತೆಗೆಯಿರಿ.
4. ಇನ್ನು ಮೆಣಸಿನ ಮಧ್ಯಭಾಗವನ್ನು ಸೀಳಿ ಮತ್ತು ಈ ಹಿಟ್ಟನ್ನು ಎಲ್ಲಾ ಭಾಗಕ್ಕೂ ಚೆನ್ನಾಗಿ ಹೀರುವಂತೆ ಮಾಡಿ.
5. ತದನಂತರ ಮೆಣಸನ್ನು ಕಡಲೆಹಿಟ್ಟಿಗೆ ಮುಳುಗಿಸಿ ಮತ್ತು ಎಲ್ಲಾ ಭಾಗವನ್ನು ಹಿಟ್ಟು ಚೆನ್ನಾಗಿ ಹೀರಿಕೊಳ್ಳಲಿ.
6. ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.
7. ಮೆಣಸು ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಇದನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿದುಕೊಳ್ಳಿ.
8. ಪೂರ್ತಿ ಆದ ನಂತರ, ಪಕೋಡಾವನ್ನು ತಟ್ಟೆಗೆ ವರ್ಗಾಯಿಸಿ.
ನಿಮ್ಮ ಮೆಣಸಿನ ಪಕೋಡಾ ರೆಸಿಪಿ ಸವಿಯಲು ಸಿದ್ಧವಾಗಿದೆ. ಈ ರುಚಿರುಚಿ ಖಾದ್ಯವನ್ನು ಚಟ್ನಿ ಅಥವಾ ಕೆಚಪ್‌ನೊಂದಿಗೆ ಸವಿಯಲು ನೀಡಿ.

English summary

Mirch Ke Pakode: Spicy Snack Recipe

Mirch ke pakode are of the most spicy and lip-smacking snack recipe that you can try in this season. The long green chillies are usually used for this pakora recipe.So, take a look at the recipe of mirchi ke pakode and give it a try.
Story first published: Saturday, July 12, 2014, 14:47 [IST]
X
Desktop Bottom Promotion