For Quick Alerts
ALLOW NOTIFICATIONS  
For Daily Alerts

ಗರಿಗರಿಯಾದ ಮೆಂತ್ಯೆಸೊಪ್ಪಿನ ಪಕೋಡ

|

ಡಿಸೆಂಬರ್ ಚಳಿಯಲ್ಲಿ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದಂತೆ ಮನಸ್ಸು ಏನಾದ್ರೂ ಖಾರವಾಗಿ, ಗರಿಗರಿಯಾಗಿ ಕಾಫಿ/ಟೀ ಜೊತೆ ತಿನ್ನಲು ಇದ್ದರೆ ಎಷ್ಟು ಚೆನ್ನ ಅಂತ ಅಂದುಕೊಳ್ಳುತ್ತೆ ಅಲ್ವಾ? ನೀವು ಈರುಳ್ಳಿ ಪಕೋಡ ರುಚಿಯಂತು ಗೊತ್ತು ಆದರೆ ಮೆಂತ್ಯೆ ಸೊಪ್ಪಿನ ಪಕೋಡ ಟ್ರೈಮಾಡಿದೀರಾ?
ಚಳಿಗಾಲದ ಸಂಜೆಗಳಿಗೆ ಒಳ್ಳೆಯ ಸಾಥ್ ಈ ಕುರುಕು ತಿಂಡಿ. ಮೆಂತ್ಯೆ ಸೊಪ್ಪಂತೂ ಈಗ ಬೇಕಾದಷ್ಟು ಮಾರುಕಟ್ಟೆಯಲ್ಲಿ ಸಿಗುತ್ತೆ. ಆರೋಗ್ಯಕ್ಕೂ ಒಳ್ಳೆಯದು ತಂದು ಈ ಪಕೋಡ ಮಾಡಿ ರುಚಿ ನೋಡಿ. ಮೆಂತ್ಯೆ ಪಕೋಡ ಮಾಡೋದು ಹೇಗೆ ಅಂತ ಹೇಳಿಕೊಡ್ತೀವಿ.

Methi Pakora: Sumptuous Snack Recipe

ಬೇಕಾಗುವ ಸಾಮಗ್ರಿಗಳು
1. ಮೆಂತ್ಯೆ ಸೊಪ್ಪು- 3 ಕಪ್ (ಕತ್ತರಿಸಿಕೊಳ್ಳಿ)
2. ಅನ್ನ- 1 ಕಪ್
3. ಹಸಿಮೆಣಸಿನಕಾಯಿ- 2 (ಕತ್ತರಿಸಿಕೊಳ್ಳಿ)
4. ಈರುಳ್ಳಿ- 1 (ಕತ್ತರಿಸಿಕೊಳ್ಳಿ)
5. ಇಂಗು- ಒಂದು ಚಿಟಿಕೆ
6. ಅಚ್ಚಖಾರದ ಪುಡಿ- 1 ಟೀಚಮಚ
7. ಕಡಲೆಹಿಟ್ಟು- 3 ಟೀಚಮಚ
8. ಉಪ್ಪು- ರುಚಿಗೆ ತಕ್ಕಷ್ಟು
9. ಎಣ್ಣೆ

ಮಾಡುವ ವಿಧಾನ
1. ಅನ್ನ, ಕಡಲೆಹಿಟ್ಟು, ಮೆಂತ್ಯೆ ಸೊಪ್ಪು, ಹಸಿಮೆಣಸಿನಕಾಯಿ, ಈರುಳ್ಳಿ, ಇಂಗು, ಖಾರದ ಪುಡಿ, ಉಪ್ಪನ್ನು ಒಂದು ಪಾತ್ರೆಗೆ ಹಾಕಿ ಕಲಸಿಕೊಳ್ಳಿ.
2. ಪಕೋಡ ಮಾಡುವ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಲು ಅವಶ್ಯವಿರುವಷ್ಟು ನೀರು ಹಾಕಿ ಹಿಟ್ಟನ್ನು ಕಲಸಿಕೊಳ್ಳಿ.
3. ಇವುಗಳನ್ನು ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.
4. ಬಾಣಲಿಯಲ್ಲಿ ಎಣ್ಣೆ ಕಾಯಿಸಿಕೊಳ್ಳಿ.
5. ಎಣ್ಣೆ ಕಾದ ನಂತರ ಉಂಡೆಗಳನ್ನು ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.
6. ನಂತರ ಅವುಗಳನ್ನು ಎಣ್ಣೆ ಸೋಸಿ ತಟ್ಟೆಗೆ ಹಾಕಿ.

ಮೆಂತ್ಯೆ ಪಕೋಡಗಳನ್ನು ಪುದೀನ ಚಟ್ನಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

English summary

Methi Pakora: Sumptuous Snack Recipe

The chilly evenings of December only brings one thing in mind: a steaming cup of tea and hot, crispy pakoras to go with it. Most of us have eaten onion pakoras, aloo pakoras and the like. But have you ever tried methi pakoras?
Story first published: Saturday, December 7, 2013, 12:50 [IST]
X
Desktop Bottom Promotion