For Quick Alerts
ALLOW NOTIFICATIONS  
For Daily Alerts

ಅನ್ನ-ಮೆಂತೆ ಸೊಪ್ಪಿನ ಗರಿಗರಿಯಾದ ಪಕೋಡ

|

ಸಾಮಾನ್ಯವಾಗಿ ಪಕೋಡವನ್ನು ಕಡಲೆ ಹಿಟ್ಟು ಬಳಸಿ ಮಾಡಿದರೆ, ಈ ಪಕೋಡವನ್ನು ಅನ್ನದಿಂದ ಮಾಡಲಾಗುವುದು. ಅನ್ನಕ್ಕೆ ಮೆಂತೆ ಸೊಪ್ಪು ಮತ್ತು ಇತರ ಪಕೋಡ ಪದಾರ್ಥಗಳನ್ನು ಹಾಕಿ ಎಣ್ಣೆಯಲ್ಲಿ ಕರಿದರೆ ರುಚಿಯಾದ ಅನ್ನ-ಮೆಂತೆ ಸೊಪ್ಪಿನ ಪಕೋಡ ರೆಡಿಯಾಗುವುದು.

ಬನ್ನಿ ಈ ಪಕೋಡ ಮಾಡುವುದು ಹೇಗೆ ಎಂದು ನೋಡೋಣ:

Methi Pakoda Recipe

ಬೇಕಾಗುವ ಸಾಮಾಗ್ರಿಗಳು
ಮೆಂತೆ ಸೊಪ್ಪು 2 ಕಟ್ಟು(ಚಿಕ್ಕದಾಗಿ ಕತ್ತರಿಸಿದ್ದು)
ಅನ್ನ 1 ಕಪ್
ಹಸಿ ಮೆಣಸಿನ ಕಾಯಿ 1-2
ಸಾಧಾರಣ ಗಾತ್ರದ ಈರುಳ್ಳಿ 1(ಕತ್ತರಿಸಿದ್ದು)
ರುಚಿಗೆ ತಕ್ಕ ಉಪ್ಪು
ಖಾರದ ಪುಡಿ 1 ಚಮಚ
ಚಿಟಕಿಯಷ್ಟು ಇಂಗು
ಕಡಲೆ ಹಿಟ್ಟು 3 ಚಮಚ
ಎಣ್ಣೆ(ಡೀಪ್ ಫ್ರೈ ಮಾಡಲು)

ತಯಾರಿಸುವ ವಿಧಾನ:

* ಎಣ್ಣೆ ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳನ್ನು ಇಂದು ಬಟ್ಟಲಿನಲ್ಲಿ ಹಾಕಿ ಮ್ಯಾಶ್ ಮಾಡಿ, ಚೆನ್ನಾಗಿ ಮಿಕ್ಸ್ ಮಾಡಿ.

* ನಂತರ ಇವುಗಳಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಕಟ್ಟಿ.

* ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ, ಈಗ ಕಾದ ಎಣ್ಣೆಗೆ ಈ ಉಂಟೆಗಳನ್ನು ಹಾಕಿ ಸ್ವಲ್ಪ ಕಂದು ಬಣ್ಣ ಬರುವಾಗ ತೆಗೆದರೆ ಅನ್ನ-ಮೆಂತೆ ಸೊಪ್ಪಿನ ಪಕೋಡ ರೆಡಿ.

English summary

Methi Pakoda Recipe

Fresh fenugreek and rice mix together with masalas to make crisp pakoda. here is the recipe.
X
Desktop Bottom Promotion