For Quick Alerts
ALLOW NOTIFICATIONS  
For Daily Alerts

ಶಿವರಾತ್ರಿ ಸ್ಪೆಶಲ್: ರುಚಿಕರವಾಗಿರುವ ಸಾಬಕ್ಕಿ ರೆಸಿಪಿ

|

ಶಿವರಾತ್ರಿ ಮಹಾಶಿವನ ಹಬ್ಬವಾಗಿದೆ. ಹಿಂದೂ ನಂಬಿಕೆಯಂತೆ ಈ ದಿನದಂದು ಮಾಡಿದ ವ್ರತ ಉಪವಾಸಗಳು ಕೈಗೂಡಿ ಶಿವತ್ಕಾರವಾದಂತೆ ಎಂಬ ಮಾತಿದೆ. ಮಹಾಶಿವನು ಶಿವರಾತ್ರಿಯಂದು ಧರೆಗಿಳಿದು ಬಂದು ಭಕ್ತರ ಪೂಜೆ ಪುನಸ್ಕಾರಗಳನ್ನು ಸ್ವತಃ ಸ್ವೀಕರಿಸುತ್ತಾನೆ ಎಂಬ ಪ್ರತೀತಿ ಇದೆ.

ಶಿವರಾತ್ರಿಯಂದು ವಿಶೇಷತೆ ಇರುವುದು ಅಂದು ಮಾಡುವ ಜಾಗರಣೆ. ಎಲ್ಲವನ್ನೂ ಶಿವಾರ್ಪಣಗೊಳಿಸಿ ಕೈಲಾಸ ನಾಥನನ್ನು ಮೈ ಮನಗಳಲ್ಲಿ ತುಂಬಿಕೊಂಡು ಭಕ್ತಿ ಶ್ರದ್ಧೆಯಿಂದ ಶಿವ ಧ್ಯಾನ ಮಾಡಬೇಕು. ನಿದ್ದೆ, ಹಸಿವು, ಬಾಯಾರಿಕೆ ಮುಂತಾದ ಅರಿಷಡ್ವರ್ಗಗಳನ್ನು ತ್ಯಜಿಸಿ ಶಿವನ ಓಂಕಾರ ಸ್ಮರಣೆಯಿಂದ ಮಾತ್ರವೇ ಶಿವರಾತ್ರಿ ಸಂಪನ್ನಗೊಳ್ಳುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸವಿರುಚಿಯ ಸಿಹಿಕುಂಬಳಕಾಯಿಯ ಪಾಯಸ

ಹಿಂದೂಗಳಲ್ಲಿ ಧಾರ್ಮಿಕ ಆಚರಣೆಗಳು ನಂಬಿಕೆಗಳು ಹೇಗೆ ಚ್ಯುತಿ ಇಲ್ಲದೆ ನಡೆದುಕೊಂಡು ಬರುತ್ತದೋ ಅದೇ ರೀತಿ ದೇವರನ್ನು ಸಂತೃಪ್ತಗೊಳಿಸುವ ತಿನಿಸು, ನೈವೇದ್ಯ ಕೂಡ ಶಿಸ್ತು, ಶುಚಿ, ರುಚಿಯ ವೈವಿಧ್ಯತೆಯಾಗಿರುತ್ತದೆ. ಪ್ರತಿಯೊಂದು ಹಬ್ಬಕ್ಕೂ ಮಾಡುವ ತಿಂಡಿ ತಿನಿಸುಗಳು ಅಷ್ಟೇ ಪ್ರೀತಿ ಭಯ ಭಕ್ತಿಯಿಂದ ಮಾಡಲ್ಪಟ್ಟಿರುತ್ತದೆ. ಮಹಾ ಶಿವರಾತ್ರಿಯಂದು ಮಾಡುವ ತಿನಿಸು ಕೂಡ ಭಕ್ತಿ ಪ್ರಧಾನದಿಂದ ಕೂಡಿರುತ್ತದೆ. ಹೌದು ನಿಮ್ಮ ಭಕ್ತಿಗೆ ಶಕ್ತಿಯಾಗಿ ಇಂದು ನಾವು ಕೂಡ ನಿಮ್ಮೊಂದಿಗೆ ಕೈ ಜೋಡಿಸುತ್ತಿದ್ದೇವೆ.

ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಶಿವರಾತ್ರಿಯ ಸ್ಪೆಷಲ್ ಪಾಕವನ್ನು ಸಿದ್ಧಗೊಳಿಸಲು ನೆರವಾಗುತ್ತಿದೆ. ಶಿವರಾತ್ರಿಯ ಉಪವಾಸಕ್ಕೆ ತಕ್ಕಂತಿರುವ ಈ ಡಿಶ್ ನಿಮ್ಮ ಉಪವಾಸವನ್ನು ಭಕ್ತಿ ಶ್ರದ್ಧೆಯಿಂದ ಮಾಡಲು ನೆರವಾಗುತ್ತದೆ.

ಶಿವರಾತ್ರಿಯ ಆಚರಣೆಗೆ ತಕ್ಕಂತೆ ವೃತವನ್ನು ಕೈಗೊಳ್ಳಲಿರುವವರಿಗೆ ಈ ನಳಪಾಕಕ್ಕೆ ಖಂಡಿತ ಸಹಕಾರಿ. ಬನ್ನಿ ಹಾಗಾದರೆ ಶಿವರಾತ್ರಿಯ ಸ್ಪೆಷಲ್ ವೈವಿಧ್ಯಮಯ ಪಾಕ ಉಪ್ಪಿಲ್ಲದ ಸಾಬಕ್ಕಿ ಡಿಶ್ ಮಾಡುವ ವಿಧಾನ ಇದೋ ನಿಮಗಾಗಿ. ದಿನವಿಡೀ ವೃತ ಕೈಗೊಂಡು ಉಪವಾಸ ಮಾಡುವವರಿಗೆ ಶಕ್ತಿ ತುಂಬಲು ಈ ಹಿಸುಕಿದ ಸಾಬಕ್ಕಿ ಡಶ್ ನೆರವಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವರಾತ್ರಿಗೆ ಸ್ಪೆಷಲ್ ಅಡುಗೆ ಈ ಪ್ಯಾನ್ ಕೇಕ್

Mashed Sabudana For Maha Shivratri

ಪ್ರಮಾಣ: 2 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 20 ನಿಮಿಷಗಳು
ಸಾಮಾಗ್ರಿಗಳು
.ಸಾಬಕ್ಕಿ (ನೆನೆಸಿದ್ದು) - 3 ಕಪ್‌ಗಳು
.ಹಾಲು - 1 ಕಪ್
.ತುರಿದ ತೆಂಗಿನ ತುರಿ - 1 ಕಪ್
.ಸಕ್ಕರೆ - 1ಟೇಸ್ಪೂನ್
.ಬಾಳೆಹಣ್ಣು - 2
.ಬಂಗಾಳ ಶ್ರೀಫಲ - 1 (ಹೆಚ್ಚಿದ್ದು)
.ದಾಳಿಂಬೆ ಬೀಜಗಳು - 2 ಟೇಸ್ಪೂನ್
.ಸೇಬು -1/2 (ಕತ್ತರಿಸಿದ್ದು)
.ದ್ರಾಕ್ಷಿ - 10

ಮಾಡುವ ವಿಧಾನ
1.ಶಿವರಾತ್ರಿಯ ಹಿಂದಿನ ದಿನ ಸಾಬಕ್ಕಿಯನ್ನು 8 ರಿಂದ 10 ಗಂಟೆಗಳವರೆಗೆ ನೆನೆಸಿಡಿ

2.ಪ್ಯಾನ್‌ನಲ್ಲಿ ಸಣ್ಣ ಉರಿಯಲ್ಲಿ ಹಾಲು ಹಾಕಿ ಬೆಚ್ಚಗೆ ಮಾಡಿ; ಹಾಲು ಗುಳ್ಳೆ ಬರುತ್ತಿದ್ದಂತೆ ಸಾಬಕ್ಕಿಯನ್ನು ಹಾಲಿಗೆ ಸೇರಿಸಿ.

3.ಹಾಲು ಮತ್ತು ಸಾಬಕ್ಕಿಯನ್ನು 5 ನಿಮಿಷಗಳವರೆಗೆ ಬೇಯಿಸಿ.

4.ಪ್ಯಾನ್ ಅನ್ನು ಉರಿಯಿಂದ ತೆಗೆದು ಕೆಳಗಿರಿಸಿ ಮತ್ತು ಪಾತ್ರಗೆ ಅದನ್ನು ಹಾಕಿ.

5.ಈ ಮಿಶ್ರಣ ಸ್ವಲ್ಪ ಆರಲು ಬಿಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಹಾಶಿವರಾತ್ರಿಗೆ 5 ಸ್ಪೆಷೆಲ್ ರೆಸಿಪಿ

6.ಸಕ್ಕರೆ, ಕತ್ತರಿಸಿದ ಬಾಳೆಹಣ್ಣು, ಶ್ರೀಫಲ, ಮತ್ತು ತುರಿದ ತೆಂಗಿನ ಕಾಯಿಯನ್ನು ಮಿಶ್ರಣಕ್ಕೆ ಸೇರಿಸಿ.

7.ಬಿಡಿ ಬಿಡಿಯಾಗುವಂತೆ ಮಿಶ್ರಣವನ್ನು ನಿಮ್ಮ ಬೆರಳುಗಳಲ್ಲಿ ಹಿಸುಕಿ.

8.ಕೊನೆಯದಾಗಿ ಹಣ್ಣುಗಳನ್ನು ಸೇರಿಸಿ, ಸೇಬು, ದ್ರಾಕ್ಷಿಗಳು ಮತ್ತು ದಾಳಿಂಬೆ ಬೀಜವನ್ನು ಸಾಬಕ್ಕಿ ಮಿಶ್ರಣಕ್ಕೆ ಸೇರಿಸಿ.

9.ನಿಮ್ಮ ಉಪವಾಸವನ್ನು ಹಿಸುಕಿದ ಸಾಬಕ್ಕಿ ಸ್ಪೆಸಲ್ ಡಿಶ್‌ನೊಂದಿಗೆ ಆಚರಿಸಿ.

English summary

Mashed Sabudana For Maha Shivratri

The festival of Lord Shiva is just a week away and devotees have already started their preparation. It is believed that on the night of Maha Shivratri, Lord Shiva married Parvati. To commemorate this day, the devotees of Lord Shiva fast on Shivratri.
Story first published: Friday, February 21, 2014, 12:08 [IST]
X
Desktop Bottom Promotion