For Quick Alerts
ALLOW NOTIFICATIONS  
For Daily Alerts

ರಂಜಾನ್ ಸ್ಪೆಷಲ್: ಫ್ರೆಂಚ್ ಫ್ರೈ ರೆಸಿಪಿ ಮಿಸ್ ಮಾಡಬೇಡಿ!

|

ಪವಿತ್ರವಾದ ರಂಜಾನ್ ಮಾಸದ ಸಮಯದಲ್ಲಿ ಎಣ್ಣೆಯಲ್ಲಿ ಕರಿದ ಮತ್ತು ಹುರಿದ ತಿಂಡಿಗಳಿಗೆ ಬಹಳ ಬೇಡಿಕೆ. ರಸ್ತೆಬದಿಯಲ್ಲಿ ಬೋಂಡಾ, ಸಮೋಸಾ ಮೊದಲಾದ ತಿಂಡಿಗಳ ಮಹಾಪೂರವೇ ಈ ಸಮಯದಲ್ಲಿ ಹರಿಯುತ್ತದೆ. ಆದರೆ ಕೆಲವು ತಿಂಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಯಿರುವುದು ಮತ್ತು ಪಾಮ್ ಎಣ್ಣೆಯಂತಹ ಆರೋಗ್ಯಕ್ಕೆ ಮಾರಕವಾದ ಎಣ್ಣೆಯಲ್ಲಿ ಕರಿದಿರುವುದು ಈ ತಿಂಡಿಗಳನ್ನು ಖರೀದಿಸುವ ಆಯ್ಕೆಯನ್ನು ಕಡಿಮೆಗೊಳಿಸುತ್ತವೆ.

ಇದಕ್ಕಿಂತಲೂ ರುಚಿಯಾದ ಮತ್ತು ಕಡಿಮೆ ಎಣ್ಣೆ ಹೀರುವ, ಉತ್ತಮ ಗುಣಮಟ್ಟದ ಎಣ್ಣೆ ಬಳಸಿರುವ ಆಲೂಗಡ್ಡೆಯ ಉದ್ದನೆಯ ತುಣುಕುಗಳನ್ನು ಹುರಿದು ಸ್ವಾದಿಷ್ಟವಾದ ಫ್ರೆಂಚ್ ಫ್ರೈ ತಯಾರಿಸಿಕೊಳ್ಳಬಹುದು. ಇಫ್ತಾರ್ ಹೊತ್ತಿನಲ್ಲಿ ದೇಹಕ್ಕೆ ಕೊಂಚ ನಿಧಾನವಾಗಿ ಹೆಚ್ಚಿನ ಶಕ್ತಿಯನ್ನು ನೀಡಬಲ್ಲ ಆಹಾರಗಳು ಅಗತ್ಯವಾಗಿದ್ದು ಫ್ರೆಂಚ್ ಫ್ರೈ ಉತ್ತಮ ಆಯ್ಕೆಯಾಗಿದೆ. ಇದು ಹಸಿವನ್ನು ತಣಿಸುವುದರ ಜೊತೆಗೇ ಇಫ್ತಾರ್ ಗಾಗಿ ತಯಾರಿಸಿದ್ದ ಇತರ ಪ್ರಮುಖ ಖಾದ್ಯಗಳ ರುಚಿಯನ್ನೂ ಹೆಚ್ಚಿಸುತ್ತದೆ. ಇದನ್ನು ತಯಾರಿಸುವ ಸರಳ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

Iftaar Snacks: Crispy French Fries

ಅಗತ್ಯವಿರುವ ಸಾಮಾಗ್ರಿಗಳು:
*ಆಲುಗಡ್ಡೆ: 4 (ಮಧ್ಯಮ ಗಾತ್ರದ್ದು, ಸಿಪ್ಪೆ ಸುಲಿದು ಉದ್ದನೆಯ ಚೌಕಾಕಾರದಲ್ಲಿ ಕತ್ತರಿಸಿಟ್ಟಿದ್ದು)
*ಚೀಸ್ - 2 ದೊಡ್ಡ ಚಮಚ (ಚಿಕ್ಕದಾಗಿ ತುರಿದದ್ದು)
*ಥೈಮ್ ಎಲೆಗಳು: ಒಂದು ಚಿಕ್ಕ ಚಮಚ
*ಸಮುದ್ರದ ಉಪ್ಪು : ಒಂದು ಚಿಕ್ಕ ಚಮಚ (ಇದು ಸಾಮಾನ್ಯ ಉಪ್ಪಲ್ಲ, ಹರಳಿನ ರೂಪದಲ್ಲಿರುವ ಉಪ್ಪು)
*ಕೆಂಪು ಮೆಣಸಿನ ಪುಡಿ : ಅರ್ಧ ಚಿಕ್ಕ ಚಮಚ
*ಜೀರಿಗೆ : ಕಾಲು ಚಮಚ
*ಕಾಳು ಮೆಣಸಿನ ಪುಡಿ: ಒಂದು ಚಿಕ್ಕ ಚಮಚ
*ಆಲಿವ್ ಎಣ್ಣೆ: ಎರಡು ದೊಡ್ಡ ಚಮಚ
*ವಿನೆಗಾರ್ (ಶಿರ್ಕಾ) : ಒಂದು ದೊಡ್ಡ ಚಮಚ

ತಯಾರಿಸುವ ವಿಧಾನ:
1) ಆಲುಗಡ್ಡೆಯ ತುಣುಕುಗಳನ್ನು ಒಂದು ಪಾತ್ರೆಯಲ್ಲಿ ಮುಳುಗುವಷ್ಟು ನೀರುಹಾಕಿ ಅದರಲ್ಲಿ ಶಿರ್ಕಾ ಸೇರಿಸಿ ಸುಮಾರು ಅರ್ಧ ಗಂಟೆ ಹಾಗೇ ಬಿಡಿ
2) ಬಳಿಕ ನೀರಿನಿಂದ ಹೊರತೆಗೆದು ಬಸಿಯಿರಿ, ಬಳಿಕ ಕಿಚನ್ ಟವೆಲ್ ಎಂಬ ಕಾಗದ ಅಥವಾ ತೆಳುವಾದ ಹತ್ತಿಯ ಬಟ್ಟೆಯ ಮೇಲೆ ಹರಡಿ ನೀರು ಒಣಗುವಂತೆ ಮಾಡಿ
3) ಮೈಕ್ರೋವೇವ್ ಅವನ್ 200 ಡಿಗ್ರಿ ಸೆಂಟಿಗ್ರೇಡ್ ನಲ್ಲಿ ಕೊಂಚ ಹೊತ್ತು ಬಿಸಿಯಾಗಿಸಿ (preheat)
4) ಆಲುಗಡ್ಡೆಯ ಮೇಲೆ ಆಲಿವ್ ಎಣ್ಣೆ, ಜೀರಿಗೆ, ಮೆಣಸಿನ ಪುಡಿ, ಕಾಳುಮೆಣಸಿನ ಪುಡಿ ಹಾಕಿ ಎಲ್ಲಾ ತುಣುಕುಗಳಿಗೆ ಸಮನಾಗಿ ಆವರಿಸಿಕೊಳ್ಳುವಂತೆ ಹೊರಳಾಡಿಸಿ
5) ಈ ತುಣುಕುಗಳನ್ನು ಮೈಕ್ರೋವೇವ್ ಪಾತ್ರೆಯಲ್ಲಿಟ್ಟು ಸುಮಾರು ಇಪ್ಪತ್ತೈದು ನಿಮಿಷಗಳವರೆಗೆ ಇದೇ ತಾಪಮಾನದಲ್ಲಿ ಹುರಿಯಿರಿ
6) ನಡುನಡುವೆ ಹೊರತೆಗೆದು ಆಲುಗಡ್ಡೆಯ ತುಣುಕುಗಳ ಪಾರ್ಶ್ವಗಳನ್ನು ಬದಲಿಸುತ್ತಾ ಎಲ್ಲಾ ಪಾರ್ಶ್ವಗಳು ಸಮನಾಗಿ ಹುರಿಯುವಂತೆ ಮಾಡಿ ಹೊರತೆಗೆದು ಐದು ನಿಮಿಷ ತಣಿಯಲು ಬಿಡಿ.
7) ಕಡೆಯದಾಗಿ ಈ ತುಣುಕುಗಳ ಮೇಲೆ ತುರಿದ ಚೀಸ್ ಹಾಕಿ 250 ಡಿಗ್ರಿಯಲ್ಲಿ ಸುಮಾರು ಒಂದರಿಂದ ಎರಡು ನಿಮಿಷ ಹುರಿಯಿರಿ. ಅಗತ್ಯಬಿದ್ದರೆ ಐದು ನಿಮಿಷಗಳವರೆಗೂ ಹುರಿಯಬಹುದು.
8) ನಂತರ ಉಳಿದ ಸಾಮಾಗ್ರಿಗಳನ್ನು (ಉಪ್ಪು, ಥೈಮ್ ಎಲೆಗಳು, ಜೀರಿಗೆ) ಹಾಕಿ ಹೊರಳಾಡಿಸಿ
9) ಬಿಸಿಬಿಸಿ ಇರುವಂತೆಯೇ ಇಫ್ತಾರ್‪ ಗೆ ಆಗಮಿಸಿದ ಅತಿಥಿಗಳಿಗೆ ಬಡಿಸಿ.

English summary

Iftaar Snacks: Crispy French Fries

Try these tasty French fries as a best and light iftaar snacks during the holy month of Ramadan. Normally when we try to make French fries they become soft and break easily. French fries are a healthy snack to have when you at breakfast (iftaar) during Ramadan. Try out this yummy and crispy French fries recipe.
Story first published: Wednesday, June 24, 2015, 15:21 [IST]
X
Desktop Bottom Promotion