For Quick Alerts
ALLOW NOTIFICATIONS  
For Daily Alerts

ಹೊಸ ರುಚಿಯ ತಿಂಡಿ-ಹುರಿಗಡಲೆಯ ವಡೆ

|

ಕಡ್ಲೆ ವಡೆ, ಪಾಲಾಕ್ ವಡೆ ಹೀಗೆ ಅನೇಕ ಬಗೆಯ ವಡಾ ರುಚಿ ನೋಡಿರಬಹುದು. ಹುರಿಗಡಲೆಯಿಂದ ತಯಾರಿಸಿದ ವಡೆಯ ರುಚಿ ನೋಡಿದ್ದೀರಾ? ಬರೀ ಹುರಿಗಡಲೆ ತಿನ್ನಲು ರುಚಿಯಾಗಿರುತ್ತದೆ, ಇನ್ನು ಅದರಿಂದ ವಡೆ ಮಾಡಿದರೆ ಹೇಳಬೇಕೆ?

ಈ ಸವಿರುಚಿಯ ಹುರಿಗಡಲೆಯ ವಡೆ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

Huri Kadale Vadai

ಬೇಕಾಗುವ ಸಾಮಾಗ್ರಿಗಳು
ಹುರಿಗಡಲೆ ಅರ್ಧ ಕಪ್
ಕಡಲೆ ಹಿಟ್ಟು 2 ಚಮಚ
ಗಸೆಗಸೆ 1ಚಮಚ
ಸೋಂಪು 1 ಚಮಚ
ಸ್ವಲ್ಪ ಗೋಡಂಬಿ
ಈರುಳ್ಳಿ 2-3
ಹಸಿ ಮೆಣಸಿನಕಾಯಿ 1
ಸ್ವಲ್ಪ ಕೊತ್ತಂಬರಿ ಸೊಪ್ಪು
ತೆಂಗಿನ ತುರಿ 2 ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

* ಹುರಿಗಡಲೆ, ಗಸೆ ಗಸೆ, ಸೋಂಪು, ಗೋಡಂಬಿ ಎಲ್ಲಾವನ್ನು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.

* ನಂತರ ಇದನ್ನು ಬಟ್ಟಲಿಗೆ ಹಾಕಿ, ಕಡಲೆ ಹಿಟ್ಟು, ಕತ್ತರಿಸಿ ಈರುಳ್ಳು ಮತ್ತು ಹಸಿ ಮೆಣಸಿನಕಾಯಿ ಹಾಕಿ, ಕೊತ್ತಂಬರಿ ಸೊಪ್ಪು, ತುರಿದ ತೆಂಗಿನಕಾಯಿ, ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಮಿಶ್ರಣವನ್ನು ಕಲೆಸಿ (ಮಿಶ್ರಣ ಗಟ್ಟಿಯಾಗಿರಬೇಕು).

* ನಂತರ ಇದರಿಂದ ಉಂಡೆಕಟ್ಟಿ, ವಡೆಗೆ ತಟ್ಟುವಂತೆ ತಟ್ಟಿ.

* ಈಗ ಎಣ್ಣೆಯನ್ನು ಬಾಣಲಿಗೆ ಹಾಕಿ ಕಾಯಿಸಿ, ನಂತರ ಕಾದ ಎಣ್ಣೆಗ ತಟ್ಟಿದ ವಡೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದರೆ ಹುರಿಗಡಲೆ ವಡೆ ರೆಡಿ. ಇದನ್ನು ಹಾಗೇ ತಿನ್ನಬಹುದು ಅಥವಾ ತೆಂಗಿನಕಾಯಿ ಚಟ್ನಿ ಜೊತೆಯೂ ತಿನ್ನಬಹುದು.

English summary

Huri Kadale Vadai | Variety Of Snacks Recipe | ಹುರಿಗಡಲೆ ವಡೆಯ ರೆಸಿಪಿ | ಅನೇಕ ಬಗೆಯ ತಿಂಡಿಯ ರೆಸಿಪಿ

Pottu Kadalai Vadai one of the tasty snacks. Make Delicious Pottukadalai Vadai using this simple recipe from awesome cuisine.
X
Desktop Bottom Promotion