For Quick Alerts
ALLOW NOTIFICATIONS  
For Daily Alerts

ಹತ್ತೇ ನಿಮಿಷದಲ್ಲಿ ರೆಡಿ-ಪೀಸ್ ಸ್ಯಾಂಡ್ ವಿಚ್

|

ಸೂಚನೆ: ಈ ಸ್ಯಾಂಡ್ ವಿಚ್ ಅನ್ನು ವೈಟ್ ಬ್ರೆಡ್ ಅಥವಾ ಗೋಧಿ ಬ್ರೆಡ್ ಬಳಸಿ ಮಾಡಬಹುದು. ಗೋಧಿ ಬ್ರೆಡ್ ಹೆಚ್ಚು ಆರೋಗ್ಯಕರವಾದ ಕಾರಣ ಅದನ್ನೇ ಬಳಸಿ ಅನ್ನುವುದು ನನ್ನ ಸಲಹೆ.

ಈ ಬಟಾಣಿ ಸ್ಯಾಂಡ್ ವಿಚ್ ಅನ್ನು ಹತ್ತೇ ನಿಮಿಷದಲ್ಲಿ ತಯಾರಿಸಬಹುದು. ಅಡುಗೆಗೆ ಪುರುಸೊತ್ತು ಇಲ್ಲದಿದ್ದಾಗ ಈ ಸ್ಯಾಂಡ್ ವಿಚ್ ಮಾಡಿದರೆ ಹೊಟ್ಟೆ ತುಂಬುವುದು, ರುಚಿಕರ ಹಾಗೂ ಆರೋಗ್ಯಕರ. ರುಚಿಯಾದ ಈ ಸ್ಯಾಂಡ್ ಮಕ್ಕಳಿಗಂತೂ ತುಂಬಾ ಪ್ರಿಯವಾಗುವುದು. ಈ ಸ್ಯಾಂಡ್ ವಿಚ್ ರುಚಿ ನೋಡಲು ನೀವು ಮಾಡಬೇಕಾದದು ಇಷ್ಟೇ...

Green Peas Sandwich

ಮೊದಲು ಸಾಮಾಗ್ರಿಗಳನ್ನು ಜೋಡಿಸಿ
ಬೇಕಾಗುವ ಸಾಮಾಗ್ರಿಗಳು
8 ಬ್ರೆಡ್ ತುಂಡುಗಳು
1 ಟೊಮೆಟೊ (ಕತ್ತರಿಸಿದ್ದು)

ಬ್ರೆಡ್ ಒಳಗೆ ತುಂಬಲು
1 ಕಪ್ ಬೇಯಿಸಿದ ಬಟಾಣಿ
1 ಚಮಚ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
4 ಚಮಚ ಗಟ್ಟಿ ಮೊಸರು
1 ಚಮಚ ಸಾಸಿವೆ ಪುಡಿ
ಅರ್ಧ ಚಮಚ ಸಕ್ಕರೆ
2 ಚಮಚ ಟೊಮೆಟೊ ಕೆಚಪ್
1/4 ಚಮಚ ಚಿಲ್ಲಿ ಸಾಸ್
1 ಚಮಚ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ
1 ಹಸಿ ಮೆಣಸು( ಚಿಕಕ್ದಾಗಿ ಕತ್ತರಿಸಿದ್ದು)

ಈಗ ತಯಾರಿಸುವ ವಿಧಾನ
* ಬ್ರೆಡ್ ಒಳಗೆ ತುಂಬಲು ಹೇಳಿರುವ ಪಾದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ, ಬಟಾಣಿ ಹಾಕಿ ಮಿಕ್ಸ್ ಮಾಡಿ.

* ನಂತರ ತವಾವನ್ನು ಬಿಸಿ ಮಾಡಿ ಅದರಲ್ಲಿ ಬ್ರೆಡ್ ಹಾಕಿ ಅದರ ಎರಡೂ ಬದಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಬೇಯಿಸಿ. ಈ ರೀತಿ 8 ಬ್ರೆಡ್ ಗಳನ್ನು ಮಾಡಿ.

* ಈಗ 4 ಬ್ರೆಡ್ ಮೇಲೆ ಟೊಮೆಟೊದ ಚೂರುಗಳನ್ನು ಉದುರಿಸಿ, ನಂತರ ಸ್ವಲ್ಪ ಉಪ್ಪು ಉದುರಿಸಿ.

* ಈಗ ಮಿಕ್ಸ್ ಮಾಡಿದ ಪದಾರ್ಥಗಳನ್ನು ನಾಲ್ಕು ಬ್ರೆಡ್ ನ ಮೇಲೆ ಹಾಕಿ ಅವುಗಳನ್ನು ಮತ್ತೊಂದು ಬ್ರೆಡ್ ನಿಂದ ಮುಚ್ಚಿ.
ಇಷ್ಟು ಮಾಡಿದರೆ ಸೂಪರ್ ಟೇಸ್ಟ್ ನ ಸ್ಯಾಂಡ್ ವಿಚ್ ರೆಡಿ.

English summary

Green Peas Sandwich | Variety Of Sandwich Recipe

Chock full of nutrients required for growth, green peas make a surprising filling for sandwiches!
X
Desktop Bottom Promotion