For Quick Alerts
ALLOW NOTIFICATIONS  
For Daily Alerts

ಸೋರೆಕಾಯಿ ಕೋಫ್ತಾ-ಸ್ಟೆಪ್ ಬೈ ಸ್ಟೆಪ್ ರೆಸಿಪಿ

|

ಕೋಫ್ತಾ ಉತ್ತರ ಭಾರತದ ಪ್ರಮುಖ ಅಡುಗೆಗಳಲ್ಲಿ ಒಂದು. ಕೋಫ್ತಾವನ್ನು ಸ್ನ್ಯಾಕ್ಸ್ ಆಗಿ ಬಳಸಬಹುದು, ಕೋಫ್ತಾ ಗ್ರೇವಿಯನ್ನೂ ತಯಾರಿಸಲಾಗುವುದು. ಇಲ್ಲಿ ನಾವು ಕೋಫ್ತಾ ಸ್ನ್ಯಾಕ್ಸ್ ರೆಸಿಪಿ ನೀಡಿದ್ದೇವೆ. ಸೋರೆಕಾಯಿಯಿಂದ ಮಾಡುವ ಈ ಕೋಫ್ತಾ ತಿನ್ನಲು ರುಚಿಕರವಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು

ಸೋರೆಕಾಯಿ 1, ಕಡಲೆಹಿಟ್ಟು 1 ಕಪ್, ಖಾರದ ಪುಡಿ ಅರ್ಧ ಚಮಚ, ಗರಂ ಮಸಾಲ 1 ಚಮಚ, ಹಸಿ ಮೆಣಸಿನಕಾಯಿ 3, ಸ್ವಲ್ಪ ಕೊತ್ತಂಬರಿ ಸೊಪ್ಪು, ಅಜ್ವೈನ್, ಚಿಟಿಕೆಯಷ್ಟು ಅಡುಗೆ ಸೋಡಾ, ರುಚಿಗೆ ತಕ್ಕ ಉಪ್ಪು, ಎಣ್ಣೆ

ಚಟ್ನಿಗೆ : ಪುದೀನಾ, ಈರುಳ್ಳಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಉಪ್ಪು

ತಯಾರಿಸುವ ವಿಧಾನ:

ಸ್ಟೆಪ್ 1

ಸ್ಟೆಪ್ 1

ಪುದೀನಾ ಸೊಪ್ಪನ್ನು ಸ್ವಚ್ಛ ಮಾಡಿ.

ಸ್ಟೆಪ್ 2

ಸ್ಟೆಪ್ 2

ಈರುಳ್ಳಿಯನ್ನು ಕತ್ತರಿಸಿ.

ಸ್ಟೆಪ್ 3

ಸ್ಟೆಪ್ 3

ಬೆಳ್ಳುಳ್ಳಿ ಎಸಳು 4-5 ಹಾಕಿ.

ಸ್ಟೆಪ್ 4

ಸ್ಟೆಪ್ 4

ಖಾರಕ್ಕೆ ತಕ್ಕ ಹಸಿ ಮೆಣಸಿನಕಾಯಿ ಸೇರಿಸಿ.

ಸ್ಟೆಪ್ 5

ಸ್ಟೆಪ್ 5

ನಂತರ ಇವೆಲ್ಲಾವನ್ನು ಮಿಕ್ಸಿಗೆ ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಪೇಸ್ಟ್ ಮಾಡಿ.

ಸ್ಟೆಪ್ 6

ಸ್ಟೆಪ್ 6

ಈಗ ಚಟ್ನಿಯನ್ನು ಒಂದು ಬಟಲ್ಲಿನಲ್ಲಿ ಹಾಕಿಟ್ಟು, ನಂತರ ಕೋಫ್ತಾ ಮಾಡುವತ್ತ ಗಮನ ಹರಿಸಿ.

ಸ್ಟೆಪ್ 7

ಸ್ಟೆಪ್ 7

ಸೋರೆಕಾಯಿ ಸಿಪ್ಪೆ ಸುಲಿದು ಅದನ್ನು ತುರಿಯಿರಿ. ನಂತರ ಅದನ್ನು ಹಿಂಡಿ ಅದರಲ್ಲಿರುವ ಅಧಿಕ ನೀರಿನಂಶವನ್ನು ತೆಗೆದು ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ.

ಸ್ಟೆಪ್ 8

ಸ್ಟೆಪ್ 8

ಈಗ ಬಟ್ಟಲಿಗೆ ಕಡಲೆ ಹಿಟ್ಟು ಹಾಕಿ ಅದರಲ್ಲಿ ತುರಿದ ಸೋರೆಕಾಯಿ ಹಾಕಿ.

ಸ್ಟೆಪ್ 9

ಸ್ಟೆಪ್ 9

ಈಗ ಖಾರದ ಪುಡಿ, ಗರಂ ಮಸಾಲ, ಸೋಡಾ, ಕೊತ್ತಂಬರಿ ಸೊಪ್ಪು , ಅಜ್ವೈನ್, ಅಡುಗೆ ಸೋಡಾ, ರುಚಿಗೆ ತಕ್ಕ ಉಪ್ಪು, ಸ್ವಲ್ಪ ಸೋರೆ ಕಾಯಿ ನೀರು, ಬೇಕಿದ್ದರೆ ಸ್ವಲ್ಪ ತಣ್ಣೀರು ಹಾಕಿ ಹಾಕಿ ಚೆನ್ನಾಗಿ ಕಲೆಸಿ.

ಸ್ಟೆಪ್ 10

ಸ್ಟೆಪ್ 10

ನಂತರ ಇವುಗಳಿಂದ ಉಂಡೆ ಕಟ್ಟಿ.

ಸ್ಟೆಪ್ 11

ಸ್ಟೆಪ್ 11

ಎಣ್ಣೆಯಲ್ಲಿ ಹಾಕಿ ಕರಿಯಿರಿ.

ಸ್ಟೆಪ್ 12

ಸ್ಟೆಪ್ 12

ಕೋಪ್ತಾ ಕಂದು ಬಣ್ಣಕ್ಕೆ ಬರುವಾಗ ಅದನ್ನು ಬಟ್ಟಲಿಗೆ ಹಾಕಿ.

ಸ್ಟೆಪ್ 13

ಸ್ಟೆಪ್ 13

ನಂತರ ಬಿಸಿ ಬಿಸಿ ಕೋಫ್ತಾವನ್ನು ಪುದೀನಾ ಚಟ್ನಿ ಜೊತೆ ಸವಿಯಿರಿ.

English summary

Ghiya Kofta Recipe: Step By Step | Variety Of Snacks Recipe | ಸ್ಟೆಪ್ ಬೈ ಸ್ಟೆಪ್ ಕೋಫ್ತಾ ರೆಸಿಪಿ | ಅನೇಕ ಬಗೆಯ ಸ್ನ್ಯಾಕ್ಸ್ ರೆಸಿಪಿ

Ghiya koftas are really easy to make. All you need to do is grate the bottle gourd, mix it with besan or gram flour, add some spices and roll it into small balls. Then fry the kofta balls in steaming hot oil.
X
Desktop Bottom Promotion