For Quick Alerts
ALLOW NOTIFICATIONS  
For Daily Alerts

ಸುಂದರ ಸಂಜೆಗೆ ನಿಮ್ಮ ಮನತಣಿಸುವ ಬೇಲ್ ಪುರಿ ರೆಸಿಪಿ!

|

ಬೇಲ್ ಪುರಿ ಒಂದು ಪ್ರಸಿದ್ಧವಾಗಿರುವ ಭಾರತೀಯ ಸ್ನ್ಯಾಕ್ಸ್ ಆಗಿದೆ. ರಸ್ತೆಬದಿಗಳಲ್ಲಿ ಗಾಡಿಯನ್ನಿಟ್ಟುಕೊಂಡು ಸಮೋಸಾ, ಬೇಲ್ ಪುರಿ, ಪಾನಿ ಪುರಿಗಳನ್ನು ಬೇಲ್ ಗಾಡಿಯವರು ಮಾರುತ್ತಿರುವುದನ್ನು ನೀವು ನೋಡಿರಬಹುದು.

ಬಾಯಿಯಲ್ಲಿ ನೀರೂರಿಸುವ ಕೊತ್ತಂಬರಿ ಸೊಪ್ಪಿನ ಚಟ್ನಿ!

ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬೇಲ್ ಪುರಿಗೆ ಮಾರುಹೋಗದವರೆ ಇಲ್ಲ. ಈ ಭಾರತೀಯ ಸ್ನ್ಯಾಕ್ಸ್ ಐಟಂ ಒಂದು ರೀತಿಯಲ್ಲಿ ಜಾದೂವನ್ನೇ ಸೃಷ್ಟಸಿದೆ ಎಂದು ಹೇಳಬಹುದು.

ಆರೋಗ್ಯದ ದೃಷ್ಟಿಯಿಂದ ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ಈ ತಿಂಡಿಗಳನ್ನು ಸೇವಿಸದೇ ಇರುವುದು ಒಂದು ರೀತಿಯಲ್ಲಿ ಉತ್ತಮ ಮಾರ್ಗವಾಗಿದೆ. ನಾವು ಮಕ್ಕಳನ್ನಂತೂ ಇದನ್ನು ಸೇವಿಸುವುದು ಬೇಡವೆಂದು ನಿರಾಕರಿಸಬಹುದು.

Easy Homemade Bhel Puri Recipe With Video

ಆದರೆ ಅವರ ಮನಸ್ಸಿಗೆ ಸಮಾಧಾನವುಂಟು ಮಾಡಲು ಮತ್ತು ನೀವು ಜಗತ್ತಿನ ಬೆಸ್ಟ್ ಮಮ್ಮಿ ಎಂದು ತೋರಿಸಲು ಬೇಲ್ ಅನ್ನು ನೀವು ಮನೆಯಲ್ಲೇ ತಯಾರಿಸಿದರೆ ಹೇಗಿರುತ್ತದೆ ಒಮ್ಮೆ ಆಲೋಚಿಸಿ.

ಇಲ್ಲಿ ನಾವು ನೀಡುತ್ತಿರುವ ಬೇಲ್ ಪುರಿ ರೆಸಿಪಿ ವಿಧಾನ ಎಂದಿಗಿಂತ ಕೊಂಚ ಭಿನ್ನವಾಗಿದೆ. ಹೌದು ವೀಡಿಯೋ ಮೂಲಕ ರೆಸಿಪಿಯ ಪ್ರತಿಯೊಂದು ಹಂತವನ್ನು ನಾವಿಲ್ಲಿ ವಿವರಿಸಿದ್ದು ಇದರಿಂದ ಮಾಡುವ ವಿಧಾನವನ್ನು ನಿಮಗೆ ಚೆನ್ನಾಗಿ ತಿಳಿದುಕೊಳ್ಳಬಹುದಾಗಿದೆ.

ಮನೆಯಲ್ಲೇ ಮಾಡಬಹುದು ಶುಚಿರುಚಿ ಪಾನಿಪುರಿ

ಲಂಚ್ ಸ್ಟೀಲ್ ಬಾಕ್ಸ್ ಅನ್ನು ಬಳಸಿ ಇಂದಿನ ಬೇಲ್ ಪುರಿ ರೆಸಿಪಿ ವಿಧಾನವನ್ನು ನಾವಿಲ್ಲಿ ತೋರಿಸಿದ್ದು ನಿಮ್ಮ ಮಕ್ಕಳು ಇದನ್ನು ಖಂಡಿತ ಇಷ್ಟಪಡುತ್ತಾರೆ ಮತ್ತು ನಿಮ್ಮನ್ನು ಇನ್ನಷ್ಟು ಪ್ರೀತಿಸುತ್ತಾರೆ. ಹಾಗಿದ್ದರೆ ಬೇಲ್ ರೆಸಿಪಿ ತಯಾರಿಸುವ ವಿಧಾನವನ್ನು ಸುಲಭವಾಗಿ ವೀಡಿಯೋ ಮೂಲಕ ಗಮನಿಸಿ ನಂತರ ಪ್ರಯತ್ನಿಸಿ.

ಪ್ರಮಾಣ: 1
ಸಿದ್ಧತಾ ಸಮಯ:
10 ನಿಮಿಷಗಳು

ಸಾಮಾಗ್ರಿಗಳು:
*ಹುರಿಯಕ್ಕಿ - 1 ಬೌಲ್
*ಸೇವ್ - 1 ಬೌಲ್ (ಕಡಲೆ ಇಲ್ಲದ)
*ಈರುಳ್ಳಿ - 1 (ಕತ್ತರಿಸಿದ್ದು)
*ಕೊತ್ತಂಬರಿ ಸೊಪ್ಪು - 2 ದಂಟು (ಕತ್ತರಿಸಿದ್ದು)
*ಚಿಲ್ಲಿ ಟೊಮೇಟೋ ಸಾಸ್ - 1 ಸ್ಪೂನ್
*ಚಾಟ್ ಮಸಾಲಾ - 1 ಸ್ಫೂನ್
*ಟೊಮೇಟೋ - 1/2 (ಕತ್ತರಿಸಿದ್ದು)
*ಉಪ್ಪು - ರುಚಿಗೆ ತಕ್ಕಷ್ಟು

ಸರಳವಾಗಿ ಮಾಡಬಹುದಾದ ಕ್ರಿಸ್ಪಿ ಹಪ್ಪಳದ ರೆಸಿಪಿ!

ಮಾಡುವ ವಿಧಾನ:
1. ಗಟ್ಟಿ ಮುಚ್ಳಳದ ಒಂದು ಸ್ಟೀಲ್ ಲಂಚ್ ಬಾಕ್ಸ್ ತೆಗೆದುಕೊಳ್ಳಿ.

2. ಮುಚ್ಚಳ ತೆರೆದು ಅದರಲ್ಲಿ ಸ್ವಲ್ಪ ಈರುಳ್ಳಿ ಹಾಕಿ.

3. ಈಗ ಟೋಮೇಟೋ ಮತ್ತು ಕತ್ತರಿಸಿದ ಸೊಪ್ಪನ್ನು ಅದಕ್ಕೆ ಹಾಕಿ.

4. ಸೇವ್ ಹಾಗೂ ಹುರಿಯಕ್ಕಿಯನ್ನು ಸೇರಿಸಿ.

5. ಚಾಟ್ ಮಸಾಲಾ ಮತ್ತು ಉಪ್ಪಿನ ಒಗ್ಗರಣೆಯನ್ನು ಈ ಮಿಶ್ರಣಕ್ಕೆ ನೀಡಿ.

6. ಬಾಕ್ಸ್‌ಗೆ ಒಂದು ಸ್ಪೂನ್‌ನಷ್ಟು ಟೊಮೇಟೋ ಕೆಚಪ್ ಅನ್ನು ಹಾಕಿ.

7. ನಿಮಗೆ ಬೇಕೆಂದಲ್ಲಿ ಕತ್ತರಿಸಿದ ಹಸಿಮೆಣಸನ್ನು ಇದಕ್ಕೆ ಹಾಕಬಹುದು.

8.ಲಂಚ್ ಬಾಕ್ಸ್‌ನ ಮುಚ್ಚಳವನ್ನು ಗಟ್ಟಿಯಾಗಿ ಹಾಕಿ ಮತ್ತು ಚೆನ್ನಾಗಿ ಕುಲುಕಿಸಿ.

9.ಮುಚ್ಚಳ ಗಟ್ಟಿಯಾಗಿದ್ದ ಪಕ್ಷಷದಲ್ಲಿ ಇನ್ನು ಚೆನ್ನಾಗಿ ಅದನ್ನು ಕುಲುಕಿಸಿ.

10.ನಂತರ ಮುಚ್ಳವನ್ನು ತೆರೆದು ಸಿದ್ಧವಾಗಿರುವ ಬೇಲ್ ರೆಸಿಪಿಯನ್ನು ಅನಂದಿಸಿ.

11.ಸಣ್ಣ ಪಾತ್ರೆಗಳಲ್ಲಿ ಅದನ್ನು ಸರ್ವ್ ಮಾಡಿ ಅಥವಾ ನಿಮ್ಮ ಮಕ್ಕಳಿಗೆ ಪಿಕ್ ನಿಕ್ ಸ್ನ್ಯಾಕ್ ಆಗಿ ಕಟ್ಟಿಕೊಡಿ.

<center><iframe width="100%" height="417" src="//www.youtube.com/embed/FWYZXYJp_Fk" frameborder="0" allowfullscreen></iframe></center>

X
Desktop Bottom Promotion