For Quick Alerts
ALLOW NOTIFICATIONS  
For Daily Alerts

ಹೊಸ ರುಚಿ ದಹಿ ಭಲ್ಲೆ

|

ಮೊಸರು ವಡೆ ನಮಗೆಲ್ಲ ಗೊತ್ತಿರುವ ತಿಂಡಿ. ಇದೇ ರೀತಿಯಲ್ಲಿ ಮಾಡುವ ಮತ್ತೊಂದು ಚಾಟ್ ದಹಿ ಭಲ್ಲೆ. ಮೊಸರು ವಡೆಯಲ್ಲಿ ಉದ್ದಿನ ಬೇಳೆ ಬಳಸುತ್ತೇವೆ. ಇಲ್ಲಿ ಹೆಸರು ಬೇಳೆಯನ್ನು ಬಳಸಲಾಗುತ್ತದೆ.
ದಹಿ ಭಲ್ಲೆ ಸಣ್ಣ ಮತ್ತು ಮೃದುವಾದ ಗುಂಡಾದ ಉಂಡೆಗಳು ಇದು ದಹಿ ವಡೆ ಅಥವ ಮೊಸರು ವಡೆಗಿಂತ ಭಿನ್ನ. ಆದರೆ ಎರಡನ್ನೂ ಮಾಡುವ ವಿಧಾನ ಮಾತ್ರ ಒಂದೇ. ಇದನ್ನು ಮಾಡುವುದು ಹೇಗೆ ಹೇಳಿಕೊಡುತ್ತೇವೆ ಬನ್ನಿ.

Dahi Bhalle: Indian Snack Recipe

ಬೇಕಾಗುವ ಸಾಮಗ್ರಿಗಳು
ಹಿಟ್ಟು ಕಲಸಿಕೊಳ್ಳಲು:
1. ಹೆಸರು ಬೇಳೆ- 250 ಗ್ರಾಂ (ಹಿಂದಿನ ರಾತ್ರಿಯೇ ನೆನಸಿಡಿ)
2. ಉಪ್ಪು ರುಚಿಗೆ ತಕ್ಕಷ್ಟು

ಚಟ್ನಿಗೆ:
1. ಹುಣಸೆ ಹಣ್ಣಿನ ರಸ - 1 ಕಪ್
2. ನೀರು- 1/2 ಕಪ್
3. ಉಪ್ಪು ರುಚಿಗೆ ತಕ್ಕಷ್ಟು
4. ಸಕ್ಕರೆ- 2 ಟೀಚಮಚ
5. ಅಚ್ಚ ಖಾರದ ಪುಡಿ- 1 ಟೀಚಮಚ
6. ಜೀರಿಗೆ ಪುಡಿ- 1 ಟೀಚಮಚ

ಉಳಿದ ಸಾಮಗ್ರಿಗಳು
1. ಮೊಸರು- 100 ಗ್ರಾಂ
2. ಸಕ್ಕರೆ- 4 ಟೀಚಮಚ
3. ಜೀರಿಗೆ ಪುಡಿ- 1 ಟೀಚಮಚ
4. ಅಚ್ಚಖಾರದ ಪುಡಿ- 1 ಟೀಚಮಚ
5. ಬ್ಲಾಕ್ ಸಾಲ್ಟ್ ರುಚಿಗೆ ತಕ್ಕಷ್ಟು
6. ಎಣ್ಣೆ- 1 ಕಪ್

ಮಾಡುವ ವಿಧಾನ
1. ನೆನಸಿಟ್ಟ ಹೆಸರು ಬೇಳೆಯನ್ನು ರುಬ್ಬಿಕೊಳ್ಳಿ.
2. ಬಾಣಲಿಯಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಹಿಟ್ಟನ್ನು ಉಂಡೆಗಳಾಗಿ ಮಾಡಿಕೊಂಡು ಎಣ್ಣೆಯಲ್ಲಿ ಹಾಕಿ ಹೊಂಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.
3. ಒಂದು ಪಾತ್ರೆಯಲ್ಲಿ ಕರಿದ ಉಂಡೆಗಳನ್ನು ಹಾಕಿ.
4. ಒಂದು ಪಾತ್ರೆಯಲ್ಲಿ ಮೊಸರು, ಸಕ್ಕರೆ, ಉಪ್ಪು, ಜೀರಿಗೆ ಪುಡಿ, ಖಾರದ ಪುಡಿ ಹಾಕಿ ಕಲಸಿಡಿ.
5. ಹುಣಸೆರಸವನ್ನು ಚೆನ್ನಾಗಿ ಕುದಿಸಿ ಅದಕ್ಕೆ ಸಕ್ಕರೆ, ಉಪ್ಪು, ಖಾರದ ಪುಡಿ ಮತ್ತು ಜೀರಿಗೆ ಪುಡಿ ಹಾಕಿ ಚಟ್ನಿ ಗಟ್ಟಿಯಾಗುವವರೆಗೆ ಕುದಿಸಿ.
6.ನಂತರ ವಡೆಗಳಿರುವ ಪಾತ್ರೆಗೆ ಮೊಸರು ಮತ್ತು ಚಟ್ನಿಯ ಮಿಶ್ರಣವನ್ನು ಹಾಕಿ.
7. ಅದರ ಮೇಲೆ ಬ್ಲಾಕ್ ಸಾಲ್ಟ್, ಜೀರಿಗೆ ಪುಡಿ ಮತ್ತು ಖಾರದ ಪುಡಿ ಉದುರಿಸಿ.

ದಹಿ ಭಲ್ಲೆ ತಿನ್ನಲು ಸಿದ್ಧವಾಗಿದೆ. ತಣ್ಣಗಿನ ಮೊಸರನ್ನು ಇದಕ್ಕೆ ಬಳಸಿದರೆ ರುಚಿ ಹೆಚ್ಚುತ್ತದೆ.

Read more about: snacks ಸ್ನಾಕ್ಸ್
English summary

Dahi Bhalle: Indian Snack Recipe

It is the dahi bhalle. Dahi bhalle is a delicious Indian snack which is prepared using moong dal. Some people even use urad dal for preparing dahi bhalle.
Story first published: Tuesday, December 17, 2013, 12:24 [IST]
X
Desktop Bottom Promotion