For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಕೊತ್ತಂಬರಿ,ಲಿಂಬೆ ಸೂಪ್ ರೆಸಿಪಿ

By Manohar .V
|

ಚಳಿಗಾಲದಲ್ಲಿ ಎಲ್ಲರ ಮನೆಯಲ್ಲೂ ಸೂಪ್ ಸಾಮಾನ್ಯ. ನೀವು ಕೇವಲ 20 ನಿಮಿಷಗಳಲ್ಲಿ ತಯಾರಿಸಬಹದಾದ ಹಲವಾರು ಸೂಪ್‌ಗಳಿವೆ. ಅದರಲ್ಲೂ ಟೊಮೇಟೊ ಸೂಪ್ ಸರಳ ರುಚಿಕರ ಸೂಪ್ ಆಗಿದ್ದು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ.

ಆದರೂ ಸೂಪ್‌ನೊಂದಿಗೆ ತಾಜಾ ತರಕಾರಿಗಳು ಸೊಪ್ಪುಗಳು ಮಿಶ್ರಗೊಂಡಿದ್ದರೆ ಅದರ ರುಚಿಯೇ ಬೇರೆಯಾಗಿರುತ್ತದೆ. ಅದರಲ್ಲೂ ಕೊತ್ತಂಬರಿ ಸೊಪ್ಪು ತನ್ನಲ್ಲಿ ಹೇರಳವಾದ ಪೋಷಕಾಂಶಗಳನ್ನು ಒಳಗೊಂಡಿದೆ. ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಿ ದೇಹವನ್ನು ಆರೋಗ್ಯವಾಗಿಸುತ್ತದೆ.

Coriander And Lemon Clear Soup Recipe

ಕೊತ್ತಂಬರಿ ಸೊಪ್ಪು ಸೂಪ್ ಅನ್ನು ಮನೆಯಲ್ಲಿ ತಯಾರಿಸುವುದು ಹೇಗೆ? ಈ ಚಳಿಗಾಲವನ್ನು ಆನಂದಿಸಲು ನಾವಿಂದು ನಿಮಗೆ ಕೊತ್ತಂಬರಿ ಸೊಪ್ಪು ಮತ್ತು ಲಿಂಬೆ ಸೂಪ್ ಅನ್ನು ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಇದು ನಿಮ್ಮನ್ನು ಪ್ರಫುಲ್ಲಗೊಳಿಸಿ ತೂಕ ಇಳಿಸುವಲ್ಲಿ ನೆರವು ನೀಡುತ್ತದೆ.

ಪ್ರಮಾಣ: 2
ಸಿದ್ಧತೆ ಸಮಯ: 10 ನಿಮಿಷಗಳು
ಅಡುಗೆ ಸಮಯ:15 ನಿಮಿಷಗಳು

ಸಾಮಾಗ್ರಿಗಳು
1.ಕತ್ತರಿಸಿದ ಕೊತ್ತಂಬರಿ ಸೊಪ್ಪು - 2 ಟೇಸ್ಫೂನ್

2.ಈರುಳ್ಳಿ -1 (ಕತ್ತರಿಸಿದ್ದು)

3.ಸ್ಪ್ರಿಂಗ್ ಈರುಳ್ಳಿ - 1 (ಕತ್ತರಿಸಿದ್ದು)

4.ಶುಂಠಿ - 1 ಇಂಚು (ಜಜ್ಜಿದ್ದು)

5.ಬೆಳ್ಳುಳ್ಳಿ - 1 ಎಸಳು (ಜಜ್ಜಿದ್ದು)

6.ನಿಂಬೆ ರಸ - 2 ಟೇಸ್ಪೂನ್

7.ತರಕಾರಿ ಕತ್ತರಿಸಿದ್ದು - 4 ಕಪ್

8. ಕರಿಮೆಣಸು - 4-5 (ಜಜ್ಜಿದ್ದು)

9.ಉಪ್ಪು - ರುಚಿಗೆ ತಕ್ಕಷ್ಟು

10.ಬೆಣ್ಣೆ - 1 ಟೇಸ್ಪೂನ್

ಮಾಡುವ ವಿಧಾನ

1. ಪ್ಯಾನ್‌ನಲ್ಲಿ ಬೆಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಈರುಳ್ಳಿ, ಶುಂಠಿ, ಮತ್ತು ಸ್ಪ್ರಿಂಗ್ ಈರುಳ್ಳಿಯನ್ನು ಸಣ್ಣ ಉರಿಯಲ್ಲಿ ಫ್ರೈ ಮಾಡಿ.

2. ನಂತರ ಈರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ. ಸಣ್ಣ ಉರಿಯಲ್ಲಿ ಫ್ರೈ ಆಗಲು ಇದಕ್ಕೆ 4 ನಿಮಿಷಗಳು ಬೇಕಾಗಬಹುದು.

3. ತದನಂತರ ಕತ್ತರಿಸಿರುವ ತರಕಾರಿಗಳನ್ನು ಪ್ಯಾನ್‌ಗೆ ಹಾಕಿ ಹಾಗೂ ಚೆನ್ನಾಗಿ ಅದನ್ನು ಕುದಿಸಿ.

4. ಕೊತ್ತಂಬರಿ ಸೊಪ್ಪು, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಮೆಣಸನ್ನು ಪ್ಯಾನ್‌ಗೆ ಸೇರಿಸಿ ಮತ್ತು ಮಿಶ್ರ ಮಾಡಿ.

5. ಸೂಪ್ ದಪ್ಪಗಾದ ನಂತರ, ಗ್ಯಾಸ್ ಆಫ್ ಮಾಡಿ.

ಕೊತ್ತಂಬರಿ ಸೊಪ್ಪು ನಿಂಬೆ ಸೂಪ್ ಸವಿಯಲು ಸಿದ್ಧವಾಗಿದೆ. ಸ್ವಲ್ಪ ಬೆಣ್ಣೆಯೊಂದಿಗೆ ಅಲಂಕರಿಸಿ ಸವಿಯಲು ನೀಡಿ.

English summary

Coriander And Lemon Clear Soup Recipe

Soups are very commonly made in every household during the winters. There are many soup recipes that you can prepare at home within 20 minutes.
Story first published: Thursday, January 9, 2014, 12:02 [IST]
X
Desktop Bottom Promotion