For Quick Alerts
ALLOW NOTIFICATIONS  
For Daily Alerts

ಎಲ್ಲಾ ಟೈಮ್ ಗೂ ಓಕೆ-ಚಿಲ್ಲಿ, ಗಾರ್ಲಿಕ್ ನೂಡಲ್ಸ್

|

ನೂಡಲ್ಸ್ ಅನ್ನು ಇದೇ ಸಮಯದಲ್ಲಿ ಮಾಡಬೇಕೆಂದು ಇಲ್ಲ. ಏಕೆಂದರೆ ಇದನ್ನು ಬ್ರೇಕ್ ಫಾಸ್ಟ್ ಗೆ ಮಾಡಬಹುದು, ಲಂಚ್ ಗೂ ಸೈ, ಇನ್ನು ಸಂಜೆ ಟೀ ಜೊತೆ ಸವಿಯಲು ಓಕೆ, ಡಿನ್ನರ್ ಆಗಿಯೂ ತಿನ್ನಬಹುದು. ಆದ್ದರಿಂದ ನೂಡಲ್ಸ್ ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿ ತಿನ್ನಬಹುದು.

ನೂಡಲ್ಸ್ ನಲ್ಲೂ ಅನೇಕ ರುಚಿ. ಇಲ್ಲಿ ನಾವು ಚಿಲ್ಲಿ, ಗಾರ್ಲಿಕ್ ನೂಡಲ್ಸ್ ನ ರೆಸಿಪಿ ನೀಡಿದ್ದೇವೆ ನೋಡಿ:

Chilli Garlic Noodles Recipe

ಬೇಕಾಗುವ ಸಾಮಾಗ್ರಿಗಳು
ನೂಡಲ್ಸ್ 250ಗ್ರಾಂ
ಈರುಳ್ಳಿ 2
ಬೆಳ್ಳುಳ್ಳಿ 2 ಚಮಚ(ಚಿಕ್ಕದಾಗಿ ಕತ್ತರಿಸಿದ್ದು)
ಹಸಿ ಮೆಣಸಿನಕಾಯಿ ಪೇಸ್ಟ್ 2 ಚಮಚ, ಟೊಮಡಟೊ ಸಾಸ್ 1 ಚಮಚ
ಖಾರದ ಪುಡಿ 1 ಚಮಚ
ನೂಡಲ್ಸ್ ಮಸಾಲ 1 ಚಮಚ
ನೀರು
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಸ್ವಲ್ಪ ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಕಾಯಿಸಿ. ನೀರು ಕುದಿ ಬರುವಾಗ ನೂಡಲ್ಸ್, 1 ಚಮಚ ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ ನೂಡಲ್ಸ್ ಅನ್ನು ಬೇಯಿಸಿ.

* ನೂಡಲ್ಸ್ ಅನ್ನು ತುಂಬಾ ಬೇಯಿಸಿಬೇಡಿ, ತುಂಬಾ ಬೆಂದರೆ ಅಂಟುತ್ತದೆ. ಈಗ ನೀರನ್ನು ನೀರನ್ನು ಬಸಿದು, ಅದನ್ನು ತಣ್ಣೀರಿನಲ್ಲಿ ಹಾಕಿ ತೆಗೆದು ಒಂದು ಪಾತ್ರೆಯಲ್ಲಿ ಹಾಕಿ ಹರಡಿ ಇಡಿ.

* ಈಗ ಪಾತ್ರೆಯನ್ನು ಬಿಸಿ ಮಾಡಿ. ಅದರಲ್ಲಿ ಎಣ್ಣೆ ಹಾಕಿ ನಂತರ ಈರುಳ್ಳಿ , ಬೆಳ್ಳುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

ಇದನ್ನು ಕೊತ್ತಂಬರಿ ಸೊಪ್ಪು ಮತ್ತು ಎಲೆಕೋಸಿನಿಂದ ಅಲಂಕರಿಸಿದರೆ ನೂಡಲ್ಸ್ ರೆಡಿ.

* ಈಗ ರುಚಿಗೆ ಉಪ್ಪನ್ನು ಉದುರಿಸಿ ಟೊಮೆಟೊ ಸಾಸ್, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ ಪೇಸ್ಟ್ ಹಾಕಿ ಬೇಯಿಸಿದ ನೂಡಲ್ಸ್ ಹಾಕಿ, ಮೆಣಸಿನ ಬೀಜ (chilli flakes) ಹಾಕಿ ಮಿಕ್ಸ್ ಮಾಡಿ. ಈಗ ನೂಡಲ್ಸ್ ಮಸಾಲ ಹಾಕಿ ಮಿಕ್ಸ್ ಮಾಡಿ ಕಡಿಮೆ ಉರಿಯಲ್ಲಿ 2 ನಿಮಿಷ ಬೇಯಿಸಿದರೆ ಚಿಲ್ಲಿ ಗಾರ್ಲಿಕ್ ನೂಡಲ್ಸ್ ರೆಡಿ.

English summary

Chilli Garlic Noodles Recipe | Variety Of Noodles

Noodles is a hot pick for everyone. The Chinese dish has gained popularity worldwide and people love to eat noodles at any time of the day. So, if you want to try some Chinese noodles, here is the simple yet classic recipe to prepare chilli garlic noodles.
X
Desktop Bottom Promotion