For Quick Alerts
ALLOW NOTIFICATIONS  
For Daily Alerts

ಚಿಕನ್ ರೇಷ್ಮಿ ಕಬಾಬ್-ಸ್ಟಾಟರ್ಸ್

|

ಚಿಕನ್ ರೇಷ್ಮಿ ಕಬಾಬ್ ಬೀದಿಬದಿಯ ಅಂಗಡಿಗಳಲ್ಲಿ ದೊರೆಯುವ ರುಚಿಕರವಾದ ನಾನ್ ವೆಜ್ ಸ್ಟಾಟರ್ಸ್. ಗ್ರಿಲ್ಡ್ ಟಿಕ್ಕಾ, ಶೀಕ್ ಕಬಾಬ್ , ರೇಷ್ಮಿ ಕಬಾಬ್ ಈ ರೀತಿಯ ಆಹಾರಗಳನ್ನು ಬೀದಿ ಬದಿಯಲ್ಲಿ ತಿನ್ನುವ ಸ್ವಾದವೇ ಬೇರೆ, ಯಾವ ಫೈ ಸ್ಟಾರ್ ಹೋಟೆಲ್ ಗಳಲ್ಲೂ ಆ ರುಚಿ ಸಿಗುವುದಿಲ್ಲ. ಈ ಕಾರಣದಿಂದಲೇ ಜನರು ಬೀದಿ ಬದಿಯ ಆಹಾರಗಳಾದ ಪಾನಿ ಪುರಿ, ಬೇಲ್ ಪುರಿ, ಈ ನಾನ್ ವೆಜ್ ಸ್ಟಾಟರ್ಸ್ ಗಳನ್ನು ಹೆಚ್ಚು ಇಷ್ಟ ಪಡುತ್ತಾರೆ.

ಕೆಲವರಿಗೆ ಬೀದಿ ಬದಿಯಲ್ಲಿ ಶುಚಿಯಾಗಿ ಮಾಡುತ್ತಾರೋ, ಯಾವ ಎಣ್ಣೆ ಬಳಸುತ್ತಾರೋ ಎಂಬ ಭಯವಿರುತ್ತದೆ. ಕೆಲವೊಂದು ಅಂಗಡಿಗಳನ್ನು ನೋಡುವಾಗ ಆ ರೀತಿಯ ಭಯ ಹುಟ್ಟಿಕೊಳ್ಳುವುದು ಸಹಜ ಕೂಡ. ಅಯ್ಯೋ ಅದಲ್ಲ ನಮಗ್ಯಾಕೆ ಮನೆಯಲ್ಲಿಯೇ ಸವಿರುಚಿಯ ನಾನ್ ವೆಜ್ ಸ್ಟಾಟರ್ಸ್ ಮಾಡಿ ತಿನ್ನಬೇಕೆ? ಹಾಗಾದರೆ ಈ ರೆಸಿಪಿ ಟ್ರೈ ಮಾಡಿ.

Chicken Reshmi Kebab

ಬೇಕಾಗುವ ಸಾಮಾಗ್ರಿಗಳು
* ಬೋನ್ ಲೆಸ್ ಚಿಕನ್ ಅರ್ಧ ಕೆಜಿ
* 1 ನಿಂಬೆ ಹಣ್ಣು
* ವೈಪ್ಡ್ ಕ್ರೀಮ್ ಅರ್ಧ ಕಪ್
* ಮೊಸರು 1 ಚಮಚ
* ಬಾದಾಮಿ 5-6
* ಶುಂಠಿ ಪೇಸ್ಟ್ 1 ಚಮಚ
* ಬೆಳುಳ್ಳಿ ಪೇಸ್ಟ್ 1 ಚಮಚ
* ಅರ್ಧ ಕಟ್ಟು ಪುದೀನಾ
* ಕೊತ್ತಂಬರಿ ಸೊಪ್ಪು ಅರ್ಧ ಚಮಚ
* ರುಚಿಗೆ ತಕ್ಕ ಉಪ್ಪು
* 3-4 ಚಮಚ ಎಣ್ಣೆ

ತಯಾರಿಸುವ ವಿಧಾನ:

* ಬಾದಾಮಿಯನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆ ಹಾಕಿ.

* ಕೊತ್ತಂಬರಿ ಮತ್ತು ಪುದೀನಾ ಸೊಪ್ಪನ್ನು ಶುಚಿ ಮಾಡಿ.

* ಈಗ ಪುದೀನಾ, ಕೊತ್ತಂಬರಿ ಸೊಪ್ಪು, ಬಾದಾಮಿ, ಹಸಿ ಮೆಣಸಿನಕಾಯಿ ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ.

* ಬೋನ್ ಲೆಸ್ ಚಿಕನ್ ಅನ್ನು ಕಬಾಬ್ ಗೆ ನ ಬೇಕಾದಷ್ಟು ಗಾತ್ರದಲ್ಲಿ ಕತ್ತರಿಸಿ. ನಂತರ ಚೆನ್ನಾಗಿ ತೊಳೆದು ರುಬ್ಬಿದ ಮಿಶ್ರಣವನ್ನು ಹಾಕಿ ಅದರ ಜೊತೆ ವೈಪ್ಡ್ ಕ್ರೀಮ್, ಮೊಸರು, ಉಪ್ಪು, ಬೆಳ್ಳುಳ್ಳಿ, ಶುಂಠಿ ಪೇಸ್ಟ್ , ನಿಂಬೆ ರಸ ಹಾಕಿ ಮಿಕ್ಸ್ ಮಾಡಿ 1 ಗಂಟೆ ಕಾಲ ಇಡಿ.

* ಈಗ ತಳ ಸ್ವಲ್ಪ ಅಗಲವಿರುವ ಬಾಣಲೆಗೆ 4 ಚಮಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಚಿಕನ್ ತುಂಡುಗಳನ್ನು ಒಂದೊಂದು ಆಗಿ ಹಾಕಿ (ಪಾತ್ರೆಯ ಬಾಯಿ ಮುಚ್ಚ ಬೇಡಿ). 5 ನಿಮಿಷಕ್ಕೊಮ್ಮೆ ಸೌಟ್ ನಿಂದ ಆಡಿಸುತ್ತಾ ಚಿಕನ್ ತುಂಡುಗಳು ಬೆಂದು ಕಂದು ಬಣ್ಣ ಬರುವವರೆಗೆ (20 ನಿಮಿಷ) ಬೇಯಿಸಿ. ಇಷ್ಟು ಮಾಡಿ ಉರಿಯಿಂದ ಇಳಿಸಿದರೆ ರುಚಿ-ರುಚಿಯಾದ ಸ್ಟಾಟರ್ಸ್ ರೆಡಿ.

English summary

Chicken Reshmi Kebab | Variety Of Kabab Recipe | ಚಿಕನ್ ರೇಷ್ಮಿ ಕಬಾಬ್ | ಅನೇಕ ಬಗೆಯ ಕಬಾಬ್ ರೆಸಿಪಿ

Reshmi literally translates to 'silky'. The kebabs are named so because of their silky smooth texture and the fact that they melt in your mouth as soon as you eat them. Preparing these chicken reshmi kebabs is not as difficult as you imagine. It does not require too many ingredients and can be easily prepared with a little bit of patience.
X
Desktop Bottom Promotion