For Quick Alerts
ALLOW NOTIFICATIONS  
For Daily Alerts

ಸಾಮಾನ್ಯವಾಗಿ ಮಾಡುವ ಬಾಳೆ ಹಣ್ಣಿನ ಬೋಂಡಾ ಇದಲ್ಲ

|

ಚೀಸ್ ಬಾಳೆ ಹಣ್ಣಿನ ಬೋಂಡಾ, ಸಾಮಾನ್ಯವಾಗಿ ನಾವು ಮಾಡುವ ಬಾಳೆ ಹಣ್ಣಿನ ಬೋಂಡಕ್ಕಿಂತ ರುಚಿಯಲ್ಲಿ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಈ ಬೋಂಡಾದ ರುಚಿ ಅಡಗಿರುವುದೇ ಇದಕ್ಕೆ ಬಳಸುವ ಚೀಸ್ ನಲ್ಲಿ.

ಸಂಜೆ ಟೀ ಜೊತೆ ಈ ಬೋಂಡಾವನ್ನು ಸವಿದರೆ ಒಂದು ಕ್ಷಣ ಎಲ್ಲಾ ಟೆನ್ಷನ್ ಮರೆತು ಇದರ ರುಚಿ ಸವಿಯುವುದರಲ್ಲಿ ತಲ್ಲೀನರಾಗುವಿರಿ. ಈ ಸ್ಪೆಷಲ್ ಬಾಳೆ ಹಣ್ಣಿನ ಬೋಂಡಾದ ರೆಸಿಪಿ ನೋಡಿ ಇಲ್ಲಿದೆ.

Cheesy Banana Bonda

ಚೀಸ್ ಬಾಳೆ ಹಣ್ಣಿನ ಬೋಂಡಾ
ಬೇಕಾಗುವ ಸಾಮಾಗ್ರಿಗಳು
ಗಟ್ಟಿಯಾದ ಚೀಸ್ 1 ಕಪ್
ಬಾಳೆಹಣ್ಣು 4(ಮ್ಯಾಶ್ ಮಾಡಿ)
ಗೋಧಿ ಹಿಟ್ಟು 1 ಕಪ್
ಮೈದಾ ಅರ್ಧ ಕಪ್
ಜೀರಿಗೆ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
1/4 ಚಮಚ ಕರಿ ಮೆಣಸಿನ ಪುಡಿ
ಮೊಸರು 2 ಚಮಚ
ಸಕ್ಕರೆ 5 ಚಮಚ
ಎಣ್ಣೆ

ತಯಾರಿಸುವ ವಿಧಾನ

* ಮೈದಾ ಮತ್ತು ಗೋಧಿಗೆ ಸ್ವಲ್ಪ ನೀರು ಹಾಕಿ ಕೆಲೆಸಿ ( ಹಿಟ್ಟು ಹದವಾಗಿರಲಿ)

* ಚೀಸ್, ಬಾಳೆ ಹಣ್ಣು, ಮೊಸರು, ಸಕ್ಕರೆ, ಸ್ವಲ್ಪ ಉಪ್ಪು, ಜೀರಿಗೆ, ಸ್ವಲ್ಪ ಕರಿ ಮೆಣಸಿನ ಪುಡಿ ಇವುಗಳನ್ನು ಹಾಕಿ ಕಲೆಸಿ. ಈಗ ಕಲೆಸಿದ ಈ ಎರಡೂ ಮಿಶ್ರಣವನ್ನು ಪ್ರತ್ಯೇಕವಾದ ಪಾತ್ರೆಗೆ ಹಾಕಿ ಅವುಗಳ ಬಾಯಿ ಮುಚ್ಚಿ 2 ಗಂಟೆಗಳ ಕಾಲ ಇಡಿ.

* ಈಗ ಕಲೆಸಿದ ಹಿಟ್ಟಿನಿಂದ 8-9 ಉಂಡೆ ಕಟ್ಟಿ ಹೆಬ್ಬರಳಿನಿಂದ ತೂತ ಮಾಡಿ , ಅವುಗಳಲ್ಲಿ ಚೀಸ್, ಬಾಳೆ ಹಣ್ಣಿನ ಮಿಶ್ರಣವನ್ನು ತುಂಬಿ.

* ಇದೇ ಸಮಯದಲ್ಲಿ ಬಾಣಲೆಗೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ.

* ಈಗ ಕಾದ ಎಣ್ಣೆಗೆ ಬಾಳೆ ಹಣ್ಣು ತುಂಬಿದ ಹಿಟ್ಟನ್ನು ನಿಮಗೆ ಬೇಕಾದ ಆಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆದು ಎಣ್ಣೆ ಹೋಗಲು ನೀರಿನಂಶ ಇಲ್ಲದ ಪಾತ್ರೆಗೆ ಪೇಪರ್ ಹಾಕಿ ನಂತರ ಕರಿದ ಈ ತಿಂಡಿಯನ್ನು ಹಾಕಿ. ಈ ರೀತಿ ಎಲ್ಲಾ ಚೀಸ್ ಬನಾನ ಬೋಂಡವನ್ನು ಕರಿಯಿರಿ.

ಇವುಗಳನ್ನು ಸಂಜೆ ಟೀ ಜೊತೆ ಸವಿಯಿರಿ.

X
Desktop Bottom Promotion