For Quick Alerts
ALLOW NOTIFICATIONS  
For Daily Alerts

ಆಹಾ 'ಚನ್ನಾ ಬ್ರೆಡ್ ಬೋಂಡ', ಬೊಂಬಾಟ್ ರುಚಿ

By Vani Naik
|

ಬೆಳಗಾದರೆ ಸಾಕು, ಪ್ರತಿ ನಿತ್ಯದ ದೈನಂದಿಕ ಚಟುವಟಿಕೆಗಳು ಪ್ರತಿಯೊಬ್ಬರ ಮನೆಯಲ್ಲಿ ಶುರುವಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಅಡುಗೆ ಮನೆಯಲ್ಲಿ ಅಡುಗೆ, ತಿಂಡಿ ತಯಾರು ಮಾಡುವುದು, ಡಬ್ಬಿ ಕಟ್ಟುವುದು...ಹೀಗೆ ಕೆಲಸದ ಸರಪಳಿಯೇ ಶುರುವಾಗುತ್ತದೆ. ಇದರ ಜೊತೆಗೆ ಶಾಲೆಗೆ ಹೋಗುವ ಮಕ್ಕಳ ಡಬ್ಬಿಗೆ ಯಾವ ತಿಂಡಿಯನ್ನು ಮಾಡಿ ಹಾಕಿ ಕಳುಹಿಸಬೇಕು ಎಂಬುದು ಒಂದು ಯಕ್ಷ ಪ್ರಶ್ನೆಯಾಗಿಬಿಡುತ್ತದೆ.

ಮಕ್ಕಳಿಗೆ ಬೇಕಾದ ಪೌಷ್ಠಿಕಾಂಶ ಹಾಗು ರುಚಿ, ಎರಡನ್ನೂ ಗಮನದಲ್ಲಿಟ್ಟುಕೊಂಡು ತಿಂಡಿಯನ್ನು ಮಾಡಿಕೊಡಬೇಕಾಗುತ್ತದೆ. ಸೊಪ್ಪು, ತರಕಾರಿ, ಕಾಳು ಮುಂತಾದವು ಮಕ್ಕಳಿಗೆ ಕೊಡಬೇಕಾದ ಆಹಾರದಲ್ಲಿ ಇರಲೇ ಬೇಕಾದ ಕೆಲವು ಪದಾರ್ಥಗಳು. ಕಾಳುಗಳಲ್ಲಿ ಪ್ರೋಟೀನ್ ಅಂಶ ಬಹಳ ಹೇರಳವಾಗಿರುತ್ತದೆ ಮತ್ತು ಮಕ್ಕಳ ಬೆಳವಣಿಗೆಗೆ ಅತ್ಯಾವಶ್ಯಕವೂ ಆಗಿರುತ್ತದೆ. ಆದ್ದರಿಂದ ಕಾಬುಲ್ ಚನ್ನಾ ಕಾಳನ್ನು ಬಳಸಿ ಒಂದು ಬಗೆಯ ತಿಂಡಿಯನ್ನು ಮಾಡುವುದು ಹೇಗೆ ಎಂದು ನೋಡೋಣ. ಈ ರೆಸಿಪಿ ಮಕ್ಕಳಿಗೆ ಮಾತ್ರವಲ್ಲದೇ ಮನೆಗೆ ಬರುವ ಅತಿಥಿಗಳಿಗೂ ಮಾಡಿಕೊಟ್ಟು ಸತ್ಕರಿಸಬಹುದು. ಸಂಜೆ ಸಮಯದಲ್ಲಿ ಚಹಾದೊಡನೆಯೂ ಸವಿಯಬಹುದು. ಸಂಜೆ ಟೀ ಜೊತೆ ಸವಿಯಲು ಆಲೂ ಬೋಂಡಾ

Channa bread bonda recipe....

ಈ ರೆಸಿಪಿಯ ಹೆಸರು "ಚನ್ನಾ ಬ್ರೆಡ್ ಬೋಂಡ". ಇದನ್ನು ತಯಾರಿಸಲು ಕಾಬುಲ್ ಚನ್ನಾ ಅಥವಾ ಕಾಬುಲ್ ಕಡಲೆಯನ್ನು ಬಳಸಬೇಕಾಗುತ್ತದೆ. ಇದರಲ್ಲಿ ಸಾಕಷ್ಟು ನಾರಿನಾಂಶ ಇರುವುದರಿಂದ, ಪಚನಕಾರ್ಯಕ್ಕೆ ಸಹಕಾರಿಯಾಗಿದೆ. ಪಚನ ಕಾರ್ಯಕ್ಕೆ ಸಂಬಂಧಪಟ್ಟ ಏರುಪೇರುಗಳೇನಾದರು ಇದ್ದರೆ ಅದನ್ನು ಕೂಡ ನಿವಾರಿಸುತ್ತದೆ. ಇದರಲ್ಲಿ ಕಬ್ಬಿಣಾಂಶವೂ ಹೇರಳವಾಗಿರುವುದರಿಂದ, ಇದರ ನಿಯಮಿತವಾದ ಸೇವನೆಯಿಂದ ಸುಸ್ತು, ಅನೀಮಿಯಾ ಮುಂತಾದ ಸಮಸ್ಯೆಗಳನ್ನು ದೂರ ಮಾಡಬಹುದು. ಬನ್ನಿ, ಹಾಗಿದ್ದರೆ "ಚನ್ನಾ ಬ್ರೆಡ್ ಫ್ರೈಸ್" ಮಾಡಲು ಬೇಕಾಗುವ ಸಾಮಗ್ರಿಗಳೇನೇನು, ಅದನ್ನು ತಯಾರಿಸುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ.

*ಸಿದ್ಧತಾ ಸಮಯ: 15 - 20 ನಿಮಿಷ
*ತಯಾರಿಸಲು ಬೇಕಾಗುವ ಅವಧಿ: 10 - 15 ನಿಮಿಷ

ತಯಾರಿಸಲು ಬೇಕಾಗುವ ಸಾಮಗ್ರಿಗಳು:
*ಬೇಯಿಸಿದ ಕಾಬುಲ್ ಕಡ್ಲೆ : 1 ಕಪ್ (ಮೊದಲೇ 8 ತಾಸುಗಳ ಕಾಲ ನೆನೆಸಿಟ್ಟು ನಂತರ ಬೇಯಿಸಬೇಕು)
*ಬ್ರೆಡ್ ಸ್ಲೈಸ್: 2
*ಹೆಚ್ಚಿದ ಹಸಿ ಮೆಣಸಿನಕಾಯಿ: 2
*ಮ್ಯಾಂಗೋ ಪುಡಿ : ಅರ್ಧ ಚಮಚ
*ಗರಂ ಮಸಾಲಾ : ಅರ್ಧ ಚಮಚ
*ಅಚ್ಚ ಖಾರದ ಪುಡಿ : ಕಾಲು ಚಮಚ
*ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು : ಸ್ವಲ್ಪ
*ಜೀರಿಗೆ ಪುಡಿ : ಕಾಲು ಚಮಚ
*ಹಾಲು : 1 ಸಣ್ಣ ಕಪ್
*ಎಣ್ಣೆ : ಕರಿಯಲು
*ಉಪ್ಪು : ರುಚಿಗೆ ತಕ್ಕಷ್ಟು ಸ್ಪೆಷಲ್ ಎಗ್ ಬೋಂಡಾ ರೆಸಿಪಿ

ಮಾಡುವ ವಿಧಾನ :
*ಕಾಬುಲ್ ಕಡಲೆಯನ್ನು 8 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಕುಕ್ಕರ್‍‌ನಲ್ಲಿ ಇಟ್ಟು ಬೇಯಿಸಬೇಕು. ಬೇಯಿಸಿದ ಕಡಲೆಯನ್ನು ಆರಿದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದನ್ನು ಒಂದು ಬೌಲ್ ಗೆ ಹಾಕಿಕೊಳ್ಳಬೇಕು.
*ಬ್ರೆಡ್ ಸ್ಲೈಸ್ ಗಳ ಅಂಚನ್ನು ತೆಗೆದು ಹಾಲಿನಲ್ಲಿ ಅದ್ದಿ ಹಿಂಡಿ ತೆಗೆದು ಬೌಲ್ ಗೆ ಹಾಕಬೇಕು. ನಂತರ ಮೊದಲೇ ತಯಾರು ಮಾಡಿಟ್ಟುಕೊಂಡ ಹೆಚ್ಚಿದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಅಚ್ಚ ಖಾರದ ಪುಡಿ, ಗರಂ ಮಸಾಲ, ಜೀರಿಗೆ ಪುಡಿ , ಮ್ಯಾಂಗೋ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನು ಬೌಲ್ ಗೆ ಹಾಕಿ, ನೀರಿಲ್ಲದೇ ಕಲಿಸಿಕೊಳ್ಳಬೇಕು.
*ನಂತರ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ, ಮೊದಲೇ ಬೌಲ್‌ನಲ್ಲಿ ಕಲಿಸಿಟ್ಟುಕೊಂಡ ಮಿಶ್ರಣವನ್ನು ಆಂಬೊಡೆ ಆಕಾರದಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ.

ಹೀಗೆ ಮಾಡಿದರೆ, ಬಿಸಿ ಬಿಸಿಯಾದ ರುಚಿರುಚಿಯಾದ ಚನ್ನಾ ಬ್ರೆಡ್ ಬೋಂಡಾ ಸವಿಯಲು ಸಿದ್ಧವಾಗುತ್ತದೆ. ಮನೆಯಲ್ಲಿಯೇ ಔತಣಕೂಟ ಇಟ್ಟುಕೊಂಡಿದ್ದರೆ ಯಾವುದಾದರು ಸಿಹಿ ತಿಂಡಿಯ ಜೊತೆ ಇದನ್ನು ಬಂದ ಅತಿಥಿಗಳಿಗೆ ಮಾಡಿಕೊಟ್ಟರೆ ವಿಭಿನ್ನವಾಗಿಯೂ ಇರುತ್ತದೆ ಹಾಗು ರುಚಿಯಾಗೂ ಇರುತ್ತದೆ. ಇದರ ಪೌಷ್ಠಿಕಾಂಶವನ್ನು ಮತ್ತಷ್ಟು ಹೆಚ್ಚಿಸ ಬೇಕಾದ್ದಲ್ಲಿ ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿ ಬೇಯಿಸಿ ರುಬ್ಬಿದ ಕಡಲೇ ಮಿಶ್ರಣಕ್ಕೆ ಸೇರಿಸಿಕೊಳ್ಳಬಹುದು.

English summary

Channa bread bonda recipe....

Today’s recipe is an easy to make morning break fastrecipe – a bonda made with bread and channa, and its very easy to prepare and consumes very less time. Have a look, of channa bread bonda recipe....
Story first published: Friday, July 15, 2016, 20:07 [IST]
X
Desktop Bottom Promotion