ಬ್ರೆಡ್ ಬುರ್ಜಿ ರುಚಿ ನೋಡಿದ್ದೀರಾ?

By:
Subscribe to Boldsky

ಎಗ್ ಬುರ್ಜಿ ಕೇಳಿರುತ್ತೇವೆ. ಆದರೆ ಬ್ರೆಡ್ ಬುರ್ಜಿ ಹೊಸ ರುಚಿ ಅಡುಗೆಯಾಗಿದೆ. ಬ್ರೆಡ್ ನಿಂದ ಬುರ್ಜಿ ಮಾಡಿದರೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಸವಿರುಚಿಯಾದ ಬುರ್ಜಿಯನ್ನು ಸುಲಭವಾಗಿ ಮಾಡಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

Bread Burji Recipe

ಬೇಕಾಗುವ ಸಾಮಾಗ್ರಿಗಳು:
* ಬ್ರೆಡ್ 8-10 ತುಂಡುಗಳು
* ಮೊಸರು 1 ಕಪ್
* ಈರುಳ್ಳಿ 2 (ಕತ್ತರಿಸಿದ್ದು)
* ಹಸಿಮೆಣಸಿನಕಾಯಿ 3
* ಟೊಮೆಟೊ 1
* ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
* ಅರಿಶಿಣ ಪುಡಿ ಅರ್ಧ ಚಮಚ
* ಕೆಂಪು ಮೆಣಸಿನ ಪುಡಿ 1 ಚಮಚ
* ನಿಂಬೆ ರಸ 2 ಚಮಚ
* ಜೀರಿಗೆ 1 ಚಮಚ
* ಎಣ್ಣೆ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ಸ್ವಲ್ಪ ಸೇವ್
* ವೃತ್ತಾಕಾರವಾಗಿ ಕತ್ತರಿಸಿದ ಈರುಳ್ಳಿ

ತಯಾರಿಸುವ ವಿಧಾನ:

1. ಒಂದು ಬಟ್ಟಲಿನಲ್ಲಿ ಮೊಸರು, ಅರಿಶಿಣ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ, ಬೇಕಿದ್ದರೆ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ ಒಂದು ಬದಿಯಲ್ಲಿಡಬೇಕು.

2. ಬ್ರೆಡ್ ತುಂಡುಗಳನ್ನು ಪುಡಿ ಮಾಡಿ ಮೊಸರಿನಲ್ಲಿ ಹಾಕಿಡಬೇಕು.

3. ಈಗ ಎಣ್ಣೆಯನ್ನು ಚಿಕ್ಕ ಬಾಣಲೆಗೆ ಹಾಕಿ ಬಿಸಿ ಮಾಡಿ ಅದಕ್ಕೆ ಜೀರಿಗೆ ಹಾಕಿ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಟೊಮೆಟೊ ಹಾಕಿ ಎರಡು ನಿಮಿಷ ಬಿಸಿ ಮಾಡಿ ಈಗ ಬ್ರೆಡ್ ಇರುವ ಮೊಸರಿನ ಮಿಶ್ರಣ ಹಾಕಿ ರುಚಗೆ ತಕ್ಕ ಉಪ್ಪು ಸೇರಿಸಿ ಬ್ರೆಡ್ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

4. ನಂತರ ಈ ಬುರ್ಜಿಯನ್ನು ಪಾತ್ರೆಗೆ ಹಾಕಿ ಕೊತ್ತಂಬರಿ ಸೊಪ್ಪು, ಸೇವ್ ಮತ್ತು ಈರುಳ್ಳಿಯಿಂದ ಅಲಂಕರಿಸಿದರೆ ಬ್ರೆಡ್ ಬುರ್ಜಿ ರೆಡಿ.

Story first published: Saturday, September 22, 2012, 12:07 [IST]
English summary

Bread Burji Recipe | Variety Of Snacks Recipe | ಬ್ರೆಡ್ ಬುರ್ಜಿ ರೆಸಿಪಿ | ಅನೇಕ ಬಗೆಯ ತಿಂಡಿ ರೆಸಿಪಿ

If you want, you can make bread bhurji too. The recipe can be made in just 20 minutes! What are you waiting for. Try this recipe at home.
Please Wait while comments are loading...
Subscribe Newsletter