For Quick Alerts
ALLOW NOTIFICATIONS  
For Daily Alerts

ಆಲೂ ಹೆಸರುಕಾಳಿನ ಪಕೋಡ-ಹೊಸ ರುಚಿ

|

ಸ್ವಲ್ಪ ದಿನಗಳ ಮುಂಚೆ ನಿಮಗೆ ಹೆಸರುಕಾಳಿನಿಂದ ಪಕೋಡ ಮಾಡುವ ವಿಧಾನ ತಿಳಿಸಿದ್ದೆ. ಆ ಪಕೋಡ ಟ್ರೈ ಮಾಡಿದವರು ಅಷ್ಟೇ ಸರಳವಾಗಿ ಮಾಡಬಹುದಾದ, ರುಚಿಯಲ್ಲಿ ಸ್ವಲ್ಪ ಭಿನ್ನವಾಗಿರುವ ಈ ಪಕೋಡ ಟ್ರೈ ಮಾಡಬಹುದು.

ಈ ಪಕೋಡಕ್ಕೆ ನೀವು ಆಲೂಗಡ್ಡೆ, ಮತ್ತು ಇಂಗು ಮಾತ್ರ ಹೆಚ್ಚಿನ ಸಾಮಾಗ್ರಿಯಾಗಿ ಸೇರಿಸಿದರೆ ಸಾಕು. ಸಂಜೆ ಟೀ ಜೊತೆ ಸವಿಯಲು ಈ ಹೊಸರುಚಿಯನ್ನು ಟ್ರೈ ಮಾಡಿ, ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ.

Aloo-Moong Dal Pakoda

ಬೇಕಾಗುವ ಸಾಮಗ್ರಿಗಳು

*1 ಕಪ್ ಹೆಸರು ಕಾಳು
* 1 ಕಪ್ ಈರುಳ್ಳಿ
* ಆಲೂಗಡ್ಡೆ 2-3
* ಹಸಿ ಮೆಣಸಿನಕಾಯಿ 2 (ಚಿಕ್ಕದಾಗಿ ಕತ್ತರಿಸಿದ್ದು)
* ಸ್ವಲ್ಪ ಶುಂಠಿ (ತುಂಬಾ ಚಿಕ್ಕದಾಗಿ ಕತ್ತರಿಸಿರಬೇಕು) * ಅರ್ಧ ಚಮಚ ಮೆಂತೆ
* ಅರ್ಧ ಚಮಚ ಜೀರಿಗೆ
* ಸ್ವಲ್ಪ ಕೊತ್ತಂಬರಿ ಪುಡಿ
* ನಿಂಬೆ ರಸ
* ರುಚಿಗೆ ತಕ್ಕ ಉಪ್ಪು
* ಸ್ವಲ್ಪ ಇಂಗು
* ಎಣ್ಣೆ
* ಕಡಲೆ ಹಿಟ್ಟು ಅರ್ಧ ಕಪ್

ತಯಾರಿಸುವ ವಿಧಾನ:

* 4 ಗಂಟೆಗಳ ಕಾಲ ಹೆಸರು ಬೇಳೆಯನ್ನು ನೆನೆ ಹಾಕಿರಬೇಕು. ನಂತರ ಅವುಗಳನ್ನು ತೊಳೆದು ಮಿಕ್ಸಿಗೆ ಹಾಕಿ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು.

* ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಿ. ನಂತರ ರುಬ್ಬಿದ ಹೆಸರಕಾಳಿನ ಜೊತೆ ಹಾಕಿ ಮಿಶ್ರಣ ಮಾಡಿ.

* ಈಗ ಆಲೂ, ಹೆಸರುಕಾಳು ಮಿಶ್ರಣಕ್ಕೆ ಎಣ್ಣೆ ಮತ್ತು ಕಡಲೆ ಹಿಟ್ಟು ಬಿಟ್ಟು ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ ಉಂಡೆ ಕಟ್ಟಿ.

* ನಂತರ ಕಡಲೆ ಹಿಟ್ಟನ್ನು ಸ್ವಲ್ಪ ಗಟ್ಟಿಯಾಗಿ ಕಲೆಸಿ. ಈಗ ಬಾಣಲೆಗೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ.

* ಈಗ ಉಂಡೆಯನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ರುಚಿಯಾದ ಆಲೂ ಹೆಸರುಕಾಳಿನ ಪಕೋಡ ರೆಡಿ.

English summary

Aloo-Moong Dal Pakoda | Variety Of Pakoda Recipe | ಆಲೂ ಹೆಸರುಕಾಳಿನ ಪಕೋಡ | ಅನೇಕ ಬಗೆಯ ಪಕೋಡ

Why always taste same taste pakoda. For everything we want change, why not in pakoda. Here we have given Aloo Moong Dal pakoda recipe. Try it and share your experience with us.
X
Desktop Bottom Promotion