For Quick Alerts
ALLOW NOTIFICATIONS  
For Daily Alerts

ಯಮ್ಮೀ... ಆಲೂ ಕಟ್ಲೇಟ್ ರೆಸಿಪಿ

|

ಮಳೆಗಾಲದಲ್ಲಿ ಮಾತ್ರ ತಿನ್ನಲು ರುಚಿ-ರುಚಿಯಾದ ಆಹಾರಗಳನ್ನೇ ಇಷ್ಟಪಡುತ್ತೇವೆ. ಹೊರಗಡೆ ಮಳೆ ಸುರಿಯುವುದನ್ನು ನೋಡುತ್ತಾ ಟೀ ಕುಡಿಯುವಾಗ ಬಜ್ಜಿ ತಿನ್ನಬೇಕು, ಬೋಂಡ ಬೇಕು, ಕಟ್ಲೇಟ್ ಬೇಕು ಹೀಗೆ ನಮ್ಮ ಮನಸ್ಸು ಬರೀ ಈ ರೀತಿಯ ತಿಂಡಿಗಳನ್ನೇ ಕೇಳುತ್ತದೆ. ಮನಸ್ಸು ಕೇಳುತ್ತದೆ ಎಂದು ಕರಿದ ಪದಾರ್ಥಗಳನ್ನು ಮಿತಿಮೀರಿ ತಿನ್ನಬೇಡಿ ಅನ್ನುವುಧೇ ನಮ್ಮ ಆಪ್ತ ಸಲಹೆ.

ಇಲ್ಲಿ ನಾವು ಆರೋಗ್ಯಕರವಾದ, ರುಚಿಯಾದ ಆಲೂ ಕಟ್ಲೇಟ್ ರೆಸಿಪಿ ನೀಡಿದ್ಧೇವೆ. ಈ ಕಟ್ಲೇಟ್ ರುಚಿಯಲ್ಲಿ ಸೂಪರ್ ಆಗಿದ್ದರೂ ಮಾಡುವ ವಿಧಾನ ಮಾತ್ರ ಸರಳವಾಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು

ಬೇಯಿಸಿದ ಆಲೂಗಡ್ಡೆ 2-3
ರುಚಿಗೆ ತಕ್ಕ ಉಪ್ಪು
ಚಿಟಿಕೆಯಷ್ಟು ಬ್ಲ್ಯಾಕ್ ಸಾಲ್ಟ್
ಗರಂ ಮಸಾಲ 1/2 ಚಮಚ
ಖಾರದ ಪುಡಿ 1/2 ಚಮಚ
ಚಾಟ್ ಮಸಾಲ 1/4 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು(ಚಿಕ್ಕದಾಗಿ ಕತ್ತರಿಸಿದ್ದು)
ಎಣ್ಣೆ 1 ಚಮಚ

ಮಾಡುವ ವಿಧಾನ

* ಆಲೂಗಡ್ಡೆಯನ್ನು ಮ್ಯಾಶ್ ಮಾಡಿ, ಅದರಲ್ಲಿ ಇಲ್ಲಿ ನೀಡಿರುವ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಕ್ಸ್ ಮಾಡಿ, ಉಂಡೆ ಕಟ್ಟಿ ಕಟ್ಲೇಟ್ ಗೆ ತಟ್ಟುವ ರೀತಿ ತಟ್ಟಿ.

* ತವಾವನ್ನು ಉರಿ ಮೇಲೆ ಇಡಿ, ನಂತರ ಅದಕ್ಕೆ ಎಣ್ಣೆ ಸವರಿ ಅದರಲ್ಲಿ ತಟ್ಟಿದ ಕಟ್ಲೇಟ್ ಹಾಕಿ ಕಡಿಮೆ ಉರಿ 3-4 ನಿಮಿಷ ಬೇಯಿಸಿ, ನಂತರ ಮಗುಚಿ ಹಾಕಿ, ಕಟ್ಲೇಟ್ ನ ಎರಡೂ ಸ್ವಲ್ಪ ಕಂದು ಬಣ್ಣಕ್ಕೆ ಬಂದಾಗ ತೆಗೆದು ತಟ್ಟೆಗೆ ಹಾಕಿ. ಈಗ ರೆಡಿಯಾದ ಕಟ್ಲೇಟ್ ಅನ್ನು ಟೊಮೆಟೊ ಸಾಸ್ ಜೊತೆ ಸವಿಯಿರಿ.

English summary

Aloo cutlet Recipe

Aloo cutlet is a very popular vegetarian recipe all over the world. It is highly preferred as a snack. Take a bite into this Aoo cutlet to have a taste of delight this season
X
Desktop Bottom Promotion