For Quick Alerts
ALLOW NOTIFICATIONS  
For Daily Alerts

ಖಾರ ಮತ್ತು ಸಿಹಿ ಶಂಕರಪೋಳಿ

By Staff
|
Sweet Shankarpoli
ಬೆಳಿಗ್ಗೆ ಚಹಾದ ಜೊತೆ, ಸಾಯಂಕಾಲದ ತಿಂಡಿಯ ಜೊತೆ, ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ, ಪಿಕ್ನಿಕ್ಕಿಗೆ ಹೋದಾಗ... ಎಲ್ಲೆಂದರಲ್ಲಿ ಬಾಯಿಗೆ ಕೆಲಸ ನೀಡುವ ಮತ್ತು ತಿಂಡಿಪೋತರ ಹಸಿವನ್ನು ನೀಗುವ ಕುರುಕಲು ತಿಂಡಿಯೇ ಶಂಕರಪೋಳಿ. ಹಬ್ಬಹರಿದಿನಗಳಲ್ಲಿ ಡಬ್ಬದಲ್ಲಿ ಮಾಡಿಟ್ಟುಕೊಂಡರೆ ತಿಂಗಳಾನುಗಟ್ಟಲೆ ತಿನ್ನಬಹುದು. ಅಡುಗೆಮನೆಗೆ ಕಾಲಿಟ್ಟಾಗಲೆಲ್ಲ ಕದ್ದುಮುಚ್ಚಿಯಾದರೂ ಸರಿ ಎರಡು ಬಾಯಲ್ಲಿ ಹಾಕಿಕೊಳ್ಳಿ.

* ಗಾಯತ್ರಿ ಶೇಷಾಚಲಂ

ಖಾರದ ಶಂಕರ ಪೋಳಿ

ಬೇಕಾಗುವ ಸಾಮಾಗ್ರಿಗಳು :

ಚಿರೋಟಿ ರವೆ 3ಲೋಟ
ಅಕ್ಕಿ ಹಿಟ್ಟು 1ಲೋಟ
ಮೈದಾಹಿಟ್ಟು 1ಲೋಟ
ಉಪ್ಪು ರುಚಿಗೆ ತಕ್ಕಷ್ಟು
ತುಪ್ಪ 1ಲೋಟ
ಖಾರದ ಪುಡಿ (ಬೇಕಾದಲ್ಲಿ ) 2ಚಮಚ
ಹಾಗೂ ಕರಿಯಲು ಶುದ್ಧ ಎಣ್ಣೆ

ಮಾಡುವ ವಿಧಾನ :

ಮೇಲೆ ಹೇಳಿದ ಎಲ್ಲ ಹಿಟ್ಟುಗಳನ್ನು ಸೇರಿಸಿ ಉಪ್ಪು ಮತ್ತು ತುಪ್ಪ ಬೆರೆಸಿ, ನೀರು ಹಾಕಿ ಚೆನ್ನಾಗಿ ನಾದಬೇಕು. ನೀವು ಕಲಸಿದ ಹಿಟ್ಟು ಚಪಾತಿ ಹಿಟ್ಟಿನಂತೆ ಗಟ್ಟಿಯಾಗಿರಬೇಕು. ಹಿಟ್ಟನ್ನು ಕೈಯಲ್ಲಿ ಒಂದು ಹಿಡಿಯ ಗಾತ್ರದಂತೆ ಉಂಡೆ ಮಾಡಿ. ನಂತರ ಅದನ್ನು ಲಟ್ಟಿಸಿ. ಲಟ್ಟಿಸಿದ ಹಿಟ್ಟು ಸ್ವಲ್ಪ ಮಂದವಾಗಿರಲಿ. ಬಳಿಕ ಬೇಕಾದ ಆಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಕರಿಯಿರಿ. ಸಂಜೆ ಹೊತ್ತು ಚಾ ದ ಜೊತೆ ಒಳ್ಳೆಯ ತಿಂಡಿ.

ಸಿಹಿ ಶಂಕರ ಪೋಳಿ

ಬೇಕಾಗುವ ಸಾಮಾಗ್ರಿಗಳು :

ಸಕ್ಕರೆ 1ಚಮಚ
ಚಿರೋಟಿ ರವೆ 3ಲೋಟ
ಅಕ್ಕಿ ಹಿಟ್ಟು 1ಲೋಟ
ಮೈದಾಹಿಟ್ಟು 1ಲೋಟ
ಉಪ್ಪು ರುಚಿಗೆ ತಕ್ಕಷ್ಟು
ತುಪ್ಪ 1ಲೋಟ
ಹಾಗೂ ಶುದ್ಧ ಎಣ್ಣೆ .

ಮಾಡುವ ವಿಧಾನ :

ಸಕ್ಕರೆಯನ್ನು ಸ್ವಲ್ಪವೇ ನೀರಿನಲ್ಲಿ ಕರಗಿಸಿಕೊಂಡು ಇಟ್ಟು ಕೊಳ್ಳಬೇಕು. ಮೇಲೆ ಹೇಳಿದ ಎಲ್ಲ ಹಿಟ್ಟುಗಳನ್ನು ಸೇರಿಸಿ ಉಪ್ಪು ಮತ್ತು ತುಪ್ಪ ಬೆರೆಸಿ ಸಕ್ಕರೆ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಹಿಟ್ಟನ್ನು ನಿಮ್ಮ ಅಂದಾಜಿನಷ್ಟು ಕೈಯಲ್ಲಿ ಒಂದು ಹಿಡಿಯಷ್ಟು ದೊಡ್ಡದಾಗಿ ಉಂಡೆ ಮಾಡಿ. ನಂತರ ಅದನ್ನು ಲಟ್ಟಿಸಿ. ನಿಮಗೆ ಅಂದವೆನಿಸಿದ ಆಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಕಾಯಿಸಿ. ಕೆಂಪಗೆ ಕಾದಾಗ ತೆಗೆದರೆ ಸಾಕು. ಈಗ ತಯಾರಾಗಿದೆ 'ಶಂಕರ ಪೊಳಿ". ಮಾಡಿ ನೋಡಿ ನಿಮಗೆ ಹೇಗನ್ನಿಸುತ್ತದೆ ಎಂದು ತಿಳಿಸಿ.

Story first published: Thursday, August 13, 2009, 13:41 [IST]
X
Desktop Bottom Promotion