For Quick Alerts
ALLOW NOTIFICATIONS  
For Daily Alerts

ಗರಂ ಗರಂ ಮದ್ದೂರು ವಡೆ ನೀವೇ ಮಾಡಿ

|
madduru Vada Recipe
ಮದ್ದೂರು ವಡೆ ಕರ್ನಾಟಕದ ಸ್ಪೆಷಲ್ ತಿಂಡಿ ಅಂದರೆ ತಪ್ಪಿಲ್ಲ. ಗರಂ ಗರಂ ಎನ್ನುವ ಮದ್ದೂರು ವಡೆ ತಿಂದರೇನೆ ಅದರ ರುಚಿಯ ಪರಿಚಯವಾಗೋದು. ಹಾಗೆಂದು ಈ ಮದ್ದೂರು ವಡೆ ತಿನ್ನೋದಕ್ಕೆ ಮದ್ದೂರಿಗೇ ಹೋಗಬೇಕೆಂದೇನಿಲ್ಲ. ನಿಮ್ಮ ಮನೆಯಲ್ಲೇ ಮದ್ದೂರು ವಡೆಯನ್ನು ಸುಲಭವಾಗಿ ಮಾಡಬಹುದು.

ಅದರಲ್ಲೂ ಹೊಸ ವರ್ಷಕ್ಕೆ ಏನಾದರೂ ಸ್ಪೆಷಲ್ ತಿಂಡಿ ಮಾಡಬೇಕೆಂದು ಯೋಚಿಸುತ್ತಿದ್ದರೆ ಇದು ನಿಮಗೆ ಒಳ್ಳೆ ಆಯ್ಕೆಯಾಗುತ್ತೆ. ಮದ್ದೂರು ವಡೆ ತಯಾರಿಸೋದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಮದ್ದೂರು ವಡೆಗೆ ಬೇಕಾಗುವ ಸಾಮಾನು:
*1/2 ಕೆ.ಜಿ ಚಿರೋಟಿ ರವೆ
* 150 ಗ್ರಾಂ ಅಕ್ಕಿ ಹಿಟ್ಟು
* 150 ಗ್ರಾಂ ಮೈದಾಹಿಟ್ಟು
* ಅರ್ಧ ಹೋಳು ತೆಂಗಿನಕಾಯಿ
* 1/4 ಕೆ.ಜಿ ಈರುಳ್ಳಿ
* 10 ಹಸಿರು ಮೆಣಸಿನಕಾಯಿ
* ಕೊತ್ತಂಬರಿ, ಕರಿಬೇವು, ಶುಂಠಿ
* ತುಪ್ಪ, ಉಪ್ಪು

ಮದ್ದೂರು ವಡೆ ತಯಾರಿಸುವ ವಿಧಾನ:
* ಮೊದಲು ರವೆಯನ್ನು ಸ್ವಲ್ಪ ಹುರಿದುಕೊಳ್ಳಬೇಕು.
* ಹುರಿದುಕೊಂಡ ನಂತರ ಅದಕ್ಕೆ ಅಕ್ಕಿ ಹಿಟ್ಟು, ಮೈದಾ ಹಿಟ್ಟು, ತೆಂಗಿನ ತುರಿ, ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಉಪ್ಪು, ಶುಂಠಿ ಪೇಸ್ಟ್, ತುಪ್ಪ ಎಲ್ಲವನ್ನೂ ಹಿಟ್ಟಿನಂತೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
* ನಂತರ ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಅಗಲವಾಗಿ ತಟ್ಟಿಕೊಂಡು ಎಣ್ಣೆಗೆ ಹಾಕಿ ಸ್ವಲ್ಪ ಕೆಂಪಗಾಗುವ ತನಕ ಹುರಿದರೆ ಮದ್ದೂರು ವಡೆ ತಿನ್ನಲು ತಯಾರಾಗಿರುತ್ತೆ.

English summary

madduru Vada Recipe | Easy Snacks Idea | ಮದ್ದೂರು ವಡೆ ಮಾಡುವ ವಿಧಾನ | ತಿಂಡಿ ತಿನಿಸು

Madduru Vada is famous snack in Karnataka. If you are feeling bore in this weather, or if you are planning to make some special snacks for new year, just have a look at this recipe.
Story first published: Thursday, December 29, 2011, 14:07 [IST]
X
Desktop Bottom Promotion