For Quick Alerts
ALLOW NOTIFICATIONS  
For Daily Alerts

ಸಾಯಂಕಾಲದ ತಿಂಡಿಗೆ ಬ್ರೆಡ್ ಸಮೋಸದ ರುಚಿ

|
Bread Samosa Recipe
ಕೆಲವೊಂದು ತಿಂಡಿಗಳನ್ನು ಮಾಡಲು ತಿಂಬಾ ಸಮಯ ತೆಗೆದುಕೊಳ್ಳುತ್ತದೆ, ಆದರೆ ಇನ್ನು ಕೆಲವು ತಿಂಡಿಗಳನ್ನು ಮಾಡಲು ಬಲು ಸುಲಭ , ಅದರಲ್ಲೂ ಬ್ರೆಡ್ ಬಳಸಿ ಮಾಡುವ ತಿಂಡಿಗಳು ರುಚಿಯ ಜೊತೆಗೆ ಸರಳವಾಗಿ ಕೂಡ ಇರುತ್ತದೆ.

ಈ ಬ್ರೆಡ್ ಬಳಸಿ ಸಮೋಸವನ್ನು ಸಹ ಮಾಡಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

1. ಒಂದು ಪೌಂಡ್ ಬ್ರೆಡ್
2. ಒಂದು ಬಟ್ಟಲಿನಲ್ಲಿ ನೀರು
3. ಎಣ್ಣೆ
4. ಒಂದು ಚಮಚ ಅಕ್ಕಿ ಪುಡಿ

ಜೊತೆಗೆ ಹಾಕಲು ಮಸಾಲೆ ಸಾಮಾಗ್ರಿಗಳು:

1.ಆಲುಗೆಡ್ಡೆ (ಬೇಯಿಸಿ ಕಿವುಚಿರಬೇಕು)
2. ಬಟಾಣಿ ಬೇಯಿಸಿದ್ದು
3. ಪುದೀನ ಕತ್ತರಿಸಿದ್ದು
4. 1/2 ಚಮಚ ಮೆಣಸಿನ ಪುಡಿ
5. 1/2 ಚಮಚ ಗರಂ ಮಸಾಲ
6. ಹಸಿಮೆಣಸು 2-3
7. ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:


1.
ಎಲ್ಲಾ ಮಸಾಲೆ ಸಾಮಾಗ್ರಿಗಳನ್ನು ಬಟ್ಟಲಿನಲ್ಲಿ ಹಾಕಿ ಮಿಶ್ರ ಮಾಡಬೇಕು.

2.
ಬಾಣಲೆಗೆ ಎಣ್ಣೆಯನ್ನು ಹಾಕಿ ಕಾಯಿಸಿ.

3. ಬ್ರೆಡ್ ನ ತುದಿಯನ್ನು ಕತ್ತರಿಸಿ ,ಬ್ರೆಡ್ ಅನ್ನು ನೀರಿನಲ್ಲಿ ಮುಳುಗಿಸಬೇಕು.

4. ಅದರಲ್ಲಿರುವ ಹೆಚ್ಚು ನೀರನ್ನು ಮೃದುವಾಗಿ ಹಿಂಡಿ ತೆಗೆಯಬೇಕು, ಅದರ ಮೇಲೆ ಮಸಾಲೆಯನ್ನು ಹಾಕಿ ಮಡಚಬೇಕು. ಅದರ ತುದಿಯನ್ನು ಹಿಟ್ಟಿನಿಂದ ಮುಚ್ಚಬೇಕು.

5. ಕುದಿಯುತ್ತಿರುವ ಎಣ್ಣೆಗೆ ಸಮೋಸ ಹಾಕಿ ಅದು ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿದು ನಂತರ ಅದನ್ನು ಎಣ್ಣೆಯಿಂದ ತೆಗೆಯಬೇಕು.

ರೆಡಿಯಾದ ಸಮೋಸವನ್ನು ಚಟ್ನಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

English summary

Bread Samosa Recipe | Tasty Snacks From Bread | ಬ್ರೆಡ್ ಸಮೋಸ ರೆಸಿಪಿ | ಬ್ರೆಡ್ ನಿಂದ ಮಾಡಬಹುದಾದ ರುಚಿಯಾದ ತಿಂಡಿ

Bread samosa doesn't require as many ingredients as the normal samosa, it is more crunchier and can be prepared as an evening snack. The stuffing may change according to choice. Take a look to know how to prepare the crispy and crunchy bread samosa.
Story first published: Saturday, November 19, 2011, 11:01 [IST]
X
Desktop Bottom Promotion