ಸೋಯಾದಿಂದ ಅನೇಕ ರೀತಿಯ ರುಚಿಕರವಾದ ಆಹಾರವನ್ನು ತಯಾರಿಸಬಹುದು. ಸೋಯಾದಲ್ಲಿ ಪ್ರೊಟೀನ್ ಅಂಶ ಜಾಸ್ತಿ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಡಯಟ್ ಮಾಡುವವರಿಗೆ ಸೋಯಾ ಬೆಸ್ಟ್ ಆಹಾರ. ಇವತ್ತು ನಾವು ಸೋಯಾದಿಂದ ತಯಾರಿಸುವ ರುಚಿಕರವಾದ ಟೋಫು ಖಾದ್ಯ ಮಾಡುವ ವಿಧಾನ ತಿಳಿದುಕೊಳ್ಳೋಣ. ( ಟೋಫು ಸೂಪರ್ ಮಾರ್ಕೆಟ್ ನಲ್ಲಿ ದೊರೆಯುತ್ತದೆ.)
ಬೇಕಾಗುವ ಸಾಮಾಗ್ರಿಗಳು:
* 1/2 ಕೆಜಿ ಟೋಫು
* ಎಣ್ಣೆ
* ಈರುಳ್ಳಿ 2 ( ಕತ್ತರಿಸಿದ್ದು)
* ದೊಡ್ಡ ಮೆಣಸು 1 ( ಕತ್ತರಿಸಿದ್ದು)
* 1/2 ಚಮಚ ಶುಂಠಿ ಪೇಸ್ಟ್
* ಹಸಿಮೆಣಸು 2 ( ಕತ್ತರಿಸಿದ್ದು)
* ಕರಿಮೆಣಸು ಮತ್ತು ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಬಾಣಲೆಯಲ್ಲಿ ಎಣ್ಣೆ ಹಾಕಿ ಕುದಿಸಿ ಅದರಲ್ಲಿ ಟೋಫು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅದನ್ನು ಪ್ರತ್ಯೇಕ ಪಾತ್ರೆಯಲ್ಲಿ ತೆಗೆದಿಡಬೇಕು.
2. ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ, ಮೆಣಸು ಮತ್ತು ಶುಂಠಿ ಪೇಸ್ಟ್ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಹುರಿಯಬೇಕು.
3. ಈಗ ಈ ಮಿಶ್ರಣಕ್ಕೆ ತಟ್ಟೆಯಲ್ಲಿರುವ ಟೋಫು ಹಾಕಿ ಚೆನ್ನಾಗಿ ಮಿಶ್ರ ಮಾಡಿ 2-3 ನಿಮಿಷ ಬೇಯಿಸಿದರೆ ಟೋಫು ರೆಡಿ.
ಈ ಟೋಫು ಖಾದ್ಯಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿದರೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.