For Quick Alerts
ALLOW NOTIFICATIONS  
For Daily Alerts

ವಿಭಿನ್ನ ರುಚಿಯ ರೈಸ್ ಬಾತ್-ನೀವೂ ಪ್ರಯತ್ನಿಸಿ

By Suma
|

ಮುಂಜಾವಿನ ಬೆಳಗು ನಮ್ಮಲ್ಲಿ ಬತ್ತದ ಉತ್ಸಾಹವನ್ನು ತರಬೇಕೆಂದೇ ನಾವು ಹಲವಾರು ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಬೆಳಗ್ಗಿನ ನಮ್ಮ ಉತ್ತಮ ವಿಚಾರಗಳೇ ದೈನಂದಿನ ನಮ್ಮ ಸಂತಸವನ್ನು ಇಮ್ಮಡಿಗೊಳಿಸುವಂಥದ್ದು. ಅದಕ್ಕಾಗಿಯೇ ನಸುಕಿನ ವೇಳೆಯಲ್ಲಿ ಪ್ರಾಣಾಯಾಮ, ಯೋಗಾಭ್ಯಾಸ, ಓಟ ಮೊದಲಾದ ಚಟುವಟಿಕೆಗಳನ್ನು ವೈದ್ಯರು ನಮಗೆ ಶಿಫಾರಸು ಮಾಡುತ್ತಾರೆ. ಅಂತೆಯೇ ಬೆಳಗಿನ ಜಾವದಲ್ಲಿ ನಾವು ಸೇವಿಸುವ ಆಹಾರ ಕೂಡ ನಮ್ಮ ಚಟುವಟಿಕೆಯನ್ನು ಉದ್ದೀಪನಗೊಳಿಸುವಲ್ಲಿ ಅತಿ ಮುಖ್ಯವಾದುದು ಎಂಬುದೂ ನಿಮಗೆ ತಿಳಿದಿರಲಿ.

ಹಾಗಿದ್ದರೆ ಇದಕ್ಕಾಗಿ ಏನು ಮಾಡುವುದು ಎಂದು ಹೆಚ್ಚು ಚಿಂತಿಸದಿರಿ ನಿಮ್ಮ ಆರೋಗ್ಯವನ್ನು ಕಾಪಾಡುವ ಮತ್ತು ಚಟುವಟಿಕೆಯಿಂದ ನಿಮ್ಮನ್ನು ಇರಿಸುವ ವಿಧ ವಿಧದ ರೈಸ್ ಬಾತ್ ರೆಸಿಪಿಯನ್ನು ಇಂದಿನ ಲೇಖನದಲ್ಲಿ ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ರೈಸ್ ಬಾತ್ ಎಂದರೆ ಇದು ಸಾಧಾರಣವಾದುದಲ್ಲ. ಅತ್ಯುತ್ತಮ ತರಕಾರಿಗಳು, ರುಚಿಕರ ಸಾಂಬಾರ್ ಪದಾರ್ಥಗಳು ಮತ್ತು ಸುವಾಸಿತ ಅನ್ನದೊಂದಿಗೆ ಮಿಶ್ರ ಮಾಡಿ ನಿಮ್ಮ ನಾಲಗೆಯ ರುಚಿಯನ್ನು ಇಮ್ಮಡಿಸುವ ಸ್ವಾದ ಭರಿತ ಖಾದ್ಯಗಳು.

ಈ ರೈಸ್ ಬಾತ್ ರೆಸಿಪಿ ನಿಮ್ಮ ಮನೆಮಂದಿಗೆ ಸಂತಸವನ್ನು ಉಂಟುಮಾಡುವುದು ಮಾತ್ರವಲ್ಲದೆ ಇನ್ನೊಮ್ಮೆ ಇದನ್ನು ತಯಾರಿಸಿ ಎಂಬುದಾಗಿ ಅವರು ನಿಮ್ಮನ್ನು ಕೇಳುವುದು ಖಂಡಿತ.ಆರೋಗ್ಯ ವೃದ್ಧಿಸುವ ಅಂತೆಯೇ ನಾಲಗೆಯ ರುಚಿ ತಣಿಸುವ ಬಗೆಬಗೆಯ ರೈಸ್ ಬಾತ್ ರೆಸಿಪಿ ವಿಧಾನಗಳನ್ನು ಸರಳ ರೀತಿಯಲ್ಲಿ ನಾವು ನಿಮ್ಮ ಮುಂದೆ ಇರಿಸಿದ್ದು ನಿಮ್ಮ ಸಮಯವನ್ನು ಉಳಿತಾಯ ಮಾಡಿಕೊಂಡೇ ಇದರ ಸಿದ್ಧತೆಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು. ಹಾಗಿದ್ದರೆ ತಡಮಾಡದೇ ಕೆಳಗಿನ ಸ್ಲೈಡರ್ ಪರಿಶೀಲಿಸಿ ಮತ್ತು ಅತ್ಯುತ್ತಮ ರೈಸ್ ಬಾತ್ ಖಾದ್ಯಗಳನ್ನು ಮಾಡಿ ಸವಿಯಿರಿ..

ಆಲೂ ರೈಸ್ ಬಾತ್

ಆಲೂ ರೈಸ್ ಬಾತ್

ಆಲೂಗೆಡ್ಡೆ ರೈಸ್ ರೆಸಿಪಿ - ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ..!

ಟೊಮೇಟೊ ರೈಸ್ ಬಾತ್

ಟೊಮೇಟೊ ರೈಸ್ ಬಾತ್

15 ನಿಮಿಷದಲ್ಲಿ ಸಿದ್ಧ ಸ್ವಾದಿಷ್ಟ ಬಟಾಣಿ ಟೊಮೇಟೊ ರೈಸ್

ಮಸಾಲ ಘೀ ರೈಸ್ ಬಾತ್

ಮಸಾಲ ಘೀ ರೈಸ್ ಬಾತ್

ಮಸಾಲ ಘೀ ರೈಸ್ ರೆಸಿಪಿಯು ಅನ್ನದ ಪ್ರಕಾರಗಳಲ್ಲಿಯೇ ಅತ್ಯುತ್ತಮವಾದ ಒಂದು ರೆಸಿಪಿಯಾಗಿದೆ. ಈ ಘೀ ರೈಸನ್ನು ನೀವು ಎರಡು ಬಗೆಯಲ್ಲಿ ಸವಿಯಬಹುದು. ಒಂದು ಇದು ಹೇಗಿದೆಯೋ ಹಾಗೆಯೇ ಸವಿಯಬಹುದು ಅಥವಾ ಸೋಯಾ ತುಣುಕುಗಳನ್ನು ಇದರಲ್ಲಿ ಹಾಕಿಕೊಂಡು ತಿನ್ನಬಹುದು. ಆದರೆ ಯಾವುದು ಇದ್ದರು ಇಲ್ಲದಿದ್ದರು ಈ ಅನ್ನದ ಪ್ರಕಾರವು ನಿಮ್ಮ ಬಾಯಿಯಲ್ಲಿ ನೀರೂರಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಬನ್ನಿ ಹಾಗಾದರೆ ಘೀ ರೈಸ್ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿಫಟಾಫಟ್ ತಯಾರಿಸಿ ಘಮಘಮಿಸುವ ಘೀ ರೈಸ್ ರೆಸಿಪಿ!

ಪಾಲಕ್ ರೈಸ್ ಬಾತ್

ಪಾಲಕ್ ರೈಸ್ ಬಾತ್

ಧಾವಂತದಲ್ಲಿ ಬೆಳಗಿನ ಉಪಾಹಾರಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲದೇ ಹೆಚ್ಚಿನ ದಿನಗಳು ಬ್ರೆಡ್ ಜಾಮ್‌ನಲ್ಲಿಯೇ ಕಳೆದುಹೋಗುತ್ತವೆ. ಬೇಗನೇ ತಯಾರಾಗುವ ಉಪ್ಪಿಟ್ಟು, ಶ್ಯಾವಿಗೆಗಳನ್ನು ನೋಡಿದಾಕ್ಷಣ ಮುಖ ಸಿಂಡರಿಸಿಕೊಳ್ಳುವ ಪತಿಯರೇ ಹೆಚ್ಚು. ಈ ಸಮಯದಲ್ಲಿ ಪಾಲಕ್ ರೈಸ್ ಬಾತ್ ಖಂಡಿತವಾಗಿಯೂ ನಿಮ್ಮ ನೆರವಿಗೆ ಬರಲಿದೆ. ಸರಳ ತಯಾರಿಕೆಯ ಹರಿಕಾರ: ಪಾಲಕ್ ರೈಸ್ ಬಾತ್

ಕೊತ್ತಂಬರಿ ರೈಸ್ ಬಾತ್

ಕೊತ್ತಂಬರಿ ರೈಸ್ ಬಾತ್

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್

ಕಾರೆಟ್ ರೈಸ್ ಬಾತ್

ಕಾರೆಟ್ ರೈಸ್ ಬಾತ್

ಕ್ಯಾರೆಟ್ ರೈಸ್ ಬಾತ್-ಸಕತ್ ರುಚಿ ಕಣ್ರೀ!

ಚಿತ್ರಾನ್ನ

ಚಿತ್ರಾನ್ನ

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಮಾಡುವ ಹೆಚ್ಚಿನ ತಿನಿಸುಗಳಲ್ಲಿ ಚಿತ್ರಾನ್ನ ಕೂಡ ಒಂದು. ಅತಿ ಸರಳವಾಗಿ ಮಾಡಬಹುದಾದ ಈ ತಿನಿಸು ಎಲ್ಲರ ಅಚ್ಚುಮೆಚ್ಚಿನ ರೈಸ್ ಬಾತ್ ಆಗಿದೆ. ಉದುರುದಾಗಿರುವ ಅನ್ನದೊಂದಿಗೆ ಬೆರೆಸಲಾಗುವ ಈರುಳ್ಳಿ, ಟೊಮೇಟೊ, ತೆಂಗಿನ ತುರಿ ಕರಿಬೇವಿನ ಒಗ್ಗರಣೆ ಚಿತ್ರಾನ್ನದ ಸವಿಯನ್ನು ಹೆಚ್ಚಿಸುತ್ತದೆ ಮತ್ತು ಅಸದಳ ಸ್ವಾದವನ್ನು ನೀಡುತ್ತದೆ. ಬನ್ನಿ ಚಿತ್ರಾನ್ನ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ರುಚಿಕರವಾಗಿರುವ ಟೊಮೇಟೊ ಚಿತ್ರಾನ್ನ ರೆಸಿಪಿ

English summary

Variety styles of rice bath for morning breakfast

Here is a list of vaiety styles of ricebath recipe which should be easily we can prepare for the morning breakfast, have a look
X
Desktop Bottom Promotion