For Quick Alerts
ALLOW NOTIFICATIONS  
For Daily Alerts

ಹಿತಮಿತ ಊಟಕ್ಕಾಗಿ ಥಾಯ್ ತೆಂಗಿನಕಾಯಿ ರೈಸ್ ರೆಸಿಪಿ!

|

ಈ ಖಾದ್ಯವು ಒಂದು ಒಳ್ಳೆಯ ರುಚಿಕರವಾದ ಮತ್ತು ಅದೇ ಸಮಯಕ್ಕೆ ಲಘುವಾದ ಊಟವನ್ನು ಮಾಡಬೇಕೆಂದು ಕೊಂಡಲ್ಲಿ ಒಂದು ಅತ್ಯುತ್ತಮವಾದ ಆಯ್ಕೆಯಾಗಿರುತ್ತದೆ. ಸಾಮಾನ್ಯವಾಗಿ ತೆಂಗಿನಕಾಯಿಂದ ಮಾಡಲಾಗುವ ಖಾದ್ಯಗಳು ತಮ್ಮ ಅದ್ಭುತವಾದ ರುಚಿ ಮತ್ತು ಸರಳತೆಗಾಗಿ ಪ್ರಸಿದ್ಧಿಯನ್ನು ಪಡೆದಿವೆ. ಇದರಲ್ಲಿ ಬಳಸಲಾಗುವ ಸರಳ ಪದಾರ್ಥಗಳು ಮತ್ತು ಗಿಡ ಮೂಲಿಕೆಗಳು ಇದರ ಅದ್ಭುತ ರುಚಿಗೆ ಕಾರಣವಾಗಿರುತ್ತವೆ. ಇಂತಹ ಆಹಾರಗಳಲ್ಲಿ ಥಾಯ್ ತೆಂಗಿನಕಾಯಿ ರೈಸ್ ರೆಸಿಪಿ ಸಹ ಒಂದು. ರುಚಿ ರುಚಿಯಾದ ತರಕಾರಿಗಳಿಂದ ಮಾಡಿದ ಅನ್ನದ ಖಾದ್ಯ

ಇದು ನಿಮ್ಮ ರುಚಿ ಗ್ರಂಥಿಗಳಿಗೆ ಅದ್ಭುತವಾದ ರುಚಿಯನ್ನು ತೋರಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಥಾಯ್ ತೆಂಗಿನಕಾಯಿ ರೈಸನ್ನು ಭಾರತೀಯ ಶೈಲಿಯ ಕರಿಗಳ ಜೊತೆಗೆ ಸವಿಯಲು ನೀಡಬಹುದು. ಇದರಲ್ಲಿ ಬಳಸಲಾಗುವ ತೆಂಗಿನಹಾಲು ಈ ಖಾದ್ಯಕ್ಕೆ ವಿಶೇಷವಾದ ರುಚಿಯನ್ನು ಒದಗಿಸುತ್ತದೆ. ಈ ಖಾದ್ಯವನ್ನು ಥಾಯ್ ಜಾಸ್ಮಿನ್ ಪರಿಮಳದ ಅಕ್ಕಿಯ ಜೊತೆಗೆ ತಯಾರಿಸಿದಲ್ಲಿ ಮತ್ತಷ್ಟು ರುಚಿಕರವಾಗಿರುತ್ತದೆ. ಈ ಅಕ್ಕಿಯು ಸೂಪರ್ ಮಾರ್ಕೆಟ್‍ಗಳಲ್ಲಿ ಸುಲಭವಾಗಿ ದೊರೆಯುತ್ತದೆ.

Thai Coconut Rice Recipe

ಒಂದು ವೇಳೆ ಈ ಅಕ್ಕಿಯು ನಿಮಗೆ ದೊರೆಯದಿದ್ದಲ್ಲಿ, ಸುಲಭವಾಗಿ ಸಿಗುವ ಬಾಸುಮತಿ ಅಕ್ಕಿಯಲ್ಲಿ ಇದನ್ನು ಮಾಡಬಹುದು. ಈ ಥಾಯ್ ರೆಸಿಪಿಯನ್ನು ಕೆಲವೇ ನಿಮಿಷಗಳಲ್ಲಿ ಮಾಡಬಹುದು. ಯಾವುದೇ ಶ್ರಮವಿಲ್ಲದೆ ಒಂದು ವಿಶೇಷವಾದ ರಾತ್ರಿಯ ಊಟವನ್ನು ಮಾಡಬೇಕಾದಲ್ಲಿ ಇದು ಒಳ್ಳೆಯ ಆಯ್ಕೆಯಾಗಿರುತ್ತದೆ. ಬನ್ನಿ ಇನ್ನು ತಡ ಮಾಡದೆ ಥಾಯ್ ತೆಂಗಿನಕಾಯಿ ರೈಸ್ ರೆಸಿಪಿ ಯನ್ನು ಮನೆಯಲ್ಲಿಯೇ ಮಾಡುವ ಬಗೆಯನ್ನು ತಿಳಿದುಕೊಳ್ಳೋಣ. ಮಧ್ಯಾಹ್ನ ಊಟದ ಸವಿಯನ್ನು ಹೆಚ್ಚಿಸುವ ಕ್ಯಾರೆಟ್ ಅನ್ನ

*ಪ್ರಮಾಣ: 4 ಜನರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 10 ನಿಮಿಷಗಳು
*ಅಡುಗೆ ಮಾಡಲು ತಗುಲುವ ಸಮಯ: 20 ನಿಮಿಷಗಳು

ಪದಾರ್ಥಗಳು
*ಜಾಸ್ಮಿನ್ ಸೆಂಟೆಡ್ ಅಕ್ಕಿ ಅಥವಾ ಬಾಸುಮತಿ ಅಕ್ಕಿ - 1½ ಕಪ್‍ಗಳು
*ತೆಂಗಿನ ಹಾಲು - 1 ಕಪ್
*ತೆಂಗಿನ ತುರಿ - ½ ಕಪ್
*ಸಕ್ಕರೆ - 1 ಟೀ. ಚಮಚ
*ನಿಂಬೆ ಎಲೆಗಳು - 2-3
*ಉಪ್ಪು - ಒಂದು ಚಿಟಿಕೆ
*ಕೊತ್ತಂಬರಿ ಸೊಪ್ಪು - 2 ಟೀ.ಚಮಚ (ಕತ್ತರಿಸಿದಂತಹುದು)
*ಎಣ್ಣೆ - 1 ಟೀ.ಚಮಚ
*ನೀರು - 1½ ಕಪ್‍ ಬಾಯಿಗೆ ರುಚಿ ದೇಹಕ್ಕೆ ಹಿತ ಅಣಬೆ ಖಾದ್ಯ

ತಯಾರಿಸುವ ವಿಧಾನ
1. ಅಕ್ಕಿಯನ್ನು ನೀರಿನಲ್ಲಿ ತೊಳೆದುಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಿ.
2. ಆಳವಾದ ತಳವಿರುವ ಒಂದು ಪಾತ್ರಗೆ ಎಣ್ಣೆಯನ್ನು ಹಾಕಿ, ಅದಕ್ಕೆ ತೆಂಗಿನ ಹಾಲು, ನೀರು, ಸಕ್ಕರೆ, ನಿಂಬೆ ಎಲೆಗಳು ಮತ್ತು ಉಪ್ಪನ್ನು ಹಾಕಿ.
3. ಈಗ ಈ ಪಾತ್ರೆಯನ್ನು ಒಲೆಯ ಮೇಲೆ ಇಡಿ ಮತ್ತು ಪದಾರ್ಥಗಳನ್ನು ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸಿ.
4. 5-6 ನಿಮಿಷಗಳ ನಂತರ ಇದಕ್ಕೆ ಅನ್ನವನ್ನು ಹಾಕಿ, ಚೆನ್ನಾಗಿ ಕಲೆಸಿ.
5. ಉರಿಯನ್ನು ಕಡಿಮೆ ಮಾಡಿ ಮತ್ತು ಅದರ ಮೇಲೆ ಮುಚ್ಚಳವನ್ನು ಮುಚ್ಚಿ.
6. ಕಡಿಮೆ ಉರಿಯಲ್ಲಿ ಸುಮಾರು 15 ನಿಮಿಷಗಳ ಇದನ್ನು ಬೇಯಿಸಿ.
7. 15 ನಿಮಿಷಗಳ ನಂತರ ಮುಚ್ಚಳವನ್ನು ತೆಗೆದು, ತೆಂಗಿನ ತುರಿಯನ್ನು ಅದರಲ್ಲಿ ಹಾಕಿ.
8. ಚಮಚದ ಸಹಾಯದೊಂದಿಗೆ ನಿಂಬೆ ಎಲೆಗಳನ್ನು ತೆಗೆಯಿರಿ.
9. ಈಗ ಒಲೆಯನ್ನು ಆರಿಸಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅನ್ನವನ್ನು ಅಲಂಕರಿಸಿ. ಥಾಯ್ ತೆಂಗಿನಕಾಯಿ ರೈಸ್ ರೆಸಿಪಿ ಈಗ ತಯಾರಾಗಿದೆ. ನಿಮಗೆ ಇಷ್ಟ ಬಂದ ಕರಿಯ ಜೊತೆಗೆ ಇದನ್ನು ನಿಮ್ಮ ಪ್ರೀತಿ ಪಾತ್ರರಿಗೆ ಬಡಿಸಬಹುದು.

English summary

Thai Coconut Rice Recipe

Thai food is a great option if you are planning for a light yet delicious meal. Thai cuisine is famous for its simplicity and great taste. The use of simple ingredients and herbs makes Thai food an irresistible treat. Thai coconut rice is one such recipe which is bound to take your taste buds on a delightful
X
Desktop Bottom Promotion