For Quick Alerts
ALLOW NOTIFICATIONS  
For Daily Alerts

ರುಚಿ ರುಚಿಯಾದ ತರಕಾರಿಗಳಿಂದ ಮಾಡಿದ ಅನ್ನದ ಖಾದ್ಯ

|

ನಮ್ಮ ಜೀವನದಲ್ಲಿ ಆಹಾರ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಬೆಳಗಿನ ಉಪಹಾರದಿಂದ ಹಿಡಿದು ರಾತ್ರಿಯ ಊಟದವರೆಗೆ ನಾವು ರುಚಿಯಾಗಿರುವ ಆಹಾರವನ್ನೇ ಬಯಸುತ್ತೇವೆ. ಪ್ರತಿಯೊಬ್ಬರಿಗೂ ಆಹಾರ ತಯಾರಿ ಮತ್ತು ಸವಿಯುವುದು ತುಂಬಾ ಮಹತ್ವಪೂರ್ಣವಾಗಿರುತ್ತದೆ. ಪ್ರತಿಯೊಂದು ಹಬ್ಬಕ್ಕೂ ಅದೇ ರೀತಿಯ ಆಹಾರವನ್ನು ತಯಾರಿಸುವ ನಾವು ಆಹಾರಕ್ಕೂ ನೀತಿ ನಿಯಮಗಳ ಚೌಕಟ್ಟನ್ನು ಹಾಕಿ ಅದರಂತೆ ನಡೆಯುವವರು.

ನಮ್ಮ ಮಧ್ಯಾಹ್ನದ ಊಟ ಅಚ್ಚುಕಟ್ಟಾಗಿ ಮತ್ತು ರುಚಿಯಾಗಿರಬೇಕೆಂದು ಬಯಸುವವರು ನಾವು. ಕಚೇರಿಗೆ ಹೋಗುವವರು, ಶಾಲೆಗೆ ಹೋಗುವ ಮಕ್ಕಳು ಹೀಗೆ ಪ್ರತಿಯೊಬ್ಬರೂ ರುಚಿಯಾದ ಬುತ್ತಿ ಊಟವನ್ನೇ ಮಧ್ಯಾಹ್ನಕ್ಕೆ ಬಯಸುತ್ತಾರೆ. ಈ ಊಟ ಅನ್ನದಿಂದ ತಯಾರಿಸಿದ್ದಾಗಿದ್ದರೆ ಅದಕ್ಕೆ ತುಸು ಸೊಗಸು ಹೆಚ್ಚು ಎಂದೇ ಹೇಳಬಹುದು.

Tasty mixed vegetable rice Recipe

ಇಂದಿನ ಲೇಖನದಲ್ಲಿ ಅನ್ನದಿಂದ ತಯಾರಿಸುವ ವೆಜಿಟೇಬಲ್ ರೈಸ್ (ತರಕಾರಿ ಅನ್ನ) ದೊಂದಿಗೆ ನಾವು ಬಂದಿದ್ದು ಇದನ್ನು ತಯಾರಿಸಲು ಬಳಸುವ ತರಕಾರಿ ಇಲ್ಲಿ ಮಹತ್ವದ್ದಾಗಿದೆ. ಹೆಚ್ಚು ಮಸಾಲೆಯನ್ನು ಹಾಕದೇ ಆರೋಗ್ಯಕರ ಬೇರೆ ಬೇರೆ ತರಕಾರಿಗಳನ್ನು ಬಳಸಿ ತಯಾರಿಸಿದ ಈ ತರಕಾರಿ ಅನ್ನ ನಿಮ್ಮ ಮಧ್ಯಾಹ್ನದ ಊಟಕ್ಕೆ ಉತ್ತಮ ಸಂಗಾತಿ.

ಇಂತಹ ತರಕಾರಿ ಮಿಶ್ರಿತ ಅನ್ನದ ರೆಸಿಪಿ ಪ್ರತಿಯೊಬ್ಬರಿಗೂ ಇಷ್ಟವಾಗುವುದು ಖಂಡಿತ. ಇದನ್ನು ತಯಾರಿಸಲು ಬಳಸುವ ಅಕ್ಕಿ ಕೂಡ ಇಲ್ಲಿ ಮುಖ್ಯವಾಗುತ್ತದೆ. ಹಾಗಿದ್ದರೆ ಈ ತರಕಾರಿ ಅನ್ನವನ್ನು ತಯಾರಿಸುವ ಪಾಕ ವಿಧಾನವನ್ನು ನಾವಿಲ್ಲಿ ಕೆಳಗೆ ನೀಡಿದ್ದು ನಿಮಗೆ ಇದನ್ನು ಸ್ವಲ್ಪ ಸಮಯದಲ್ಲೇ ತಯಾರಿಸಬಹುದಾಗಿದೆ.

ಬಾಯಿಯಲ್ಲಿ ನೀರೂರಿಸುವ ರುಚಿಯಾದ ಕ್ಯಾಪ್ಸಿಕಮ್ ಬಾತ್

ಪ್ರಮಾಣ: 3
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 1/2 ಗಂಟೆ

ಸಾಮಾಗ್ರಿಗಳು
*ಕಪ್ ಬೆಳ್ತಿಗೆ ಅನ್ನ (ಬಾಸುಮತಿ ಅಥವಾ ಸೋನಾಮಸೂರಿ ಅಕ್ಕಿ) - 1 1/2 ಕಪ್
*ಬೀನ್ಸ್ - 20-30
*ಮಧ್ಯಮ ಗಾತ್ರದ ಕ್ಯಾರೇಟ್ -2
*ಸಣ್ಣ ಆಲೂಗಡ್ಡೆ -2
*ಬಟಾಣಿ - 1/2 ಕಪ್
*ಟೊಮೇಟೊ - 1 (ಕತ್ತರಿಸಿದ್ದು)
*ಮಧ್ಯಮ ಗಾತ್ರದ ಈರುಳ್ಳಿ - 1 (ಕತ್ತರಿಸಿದ್ದು)
*ಬೆಳ್ಳುಳ್ಳಿ - 6-8
*ಶುಂಠಿ - 1/2 ಇಂಚು
*ಕರಿಬೇವಿನೆಲೆ - 8-10 ಎಸಳು
*ಕೊತ್ತಂಬರಿ ಸೊಪ್ಪು - 4-6 ಎಸಳು
*ಹಸಿಮೆಣಸು - 3-4
*ತಾಜಾ ಲಿಂಬೆ ರಸ - 1 1/2 ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ತುಪ್ಪ - 4-5 ಚಮಚ
*ಜೀರಿಗೆ - 1/2 ಚಮಚ
*ಸಾಸಿವೆ - 1 ಚಮಚ
*ಸ್ವಲ್ಪ ಅರಶಿನ ಹುಡಿ

ಮಾಡುವ ವಿಧಾನ
1.ಮೊದಲಿಗೆ ಬೀನ್ಸ್, ಕ್ಯಾರೇಟ್, ಟೊಮೇಟೊ, ಆಲೂಗಡ್ಡೆಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
2.ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಹಸಿಮೆಣಸನ್ನು ಎರಡು ಭಾಗಗಳನ್ನಾಗಿ ಮಾಡಿಕೊಳ್ಳಿ. ಕೊನೆಗೆ ಶುಂಠಿ ಬೆಳ್ಳುಳ್ಳಿಯನ್ನು ಹೆಚ್ಚಿಟ್ಟುಕೊಳ್ಳಿ (ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಬಳಸಬಹುದು)
3.ಈರುಳ್ಳಿಯನ್ನು ದಪ್ಪಗೆ ಹೆಚ್ಚಿಕೊಳ್ಳಿ.
4.ಇನ್ನು ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಬಸಿದು ಪಕ್ಕದಲ್ಲಿಡಿ.
5.4-5 ಚಮಚ ತುಪ್ಪ, ಸಾಸಿವೆ ಜೀರಿಗೆಯನ್ನು ಪ್ರೆಶ್ಶರ್ ಕುಕ್ಕರ್‌ನಲ್ಲಿ ಬಿಸಿ ಮಾಡಿ ಎಣ್ಣೆಯೊಂದಿಗೆ ಹುರಿಯಿರಿ. ಇದು ಸಿಡಿಸ ಒಡನೆ ಶುಂಠಿ ಬೆಳ್ಳುಳ್ಳಿಯನ್ನು 2 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಇದಕ್ಕೆ ಕತ್ತರಿಸಿದ ಹಸಿಮೆಣಸು, ಕರಿಬೇವಿನೆಲೆ, ಅರಶಿನ, ಈರುಳ್ಳಿ ಉಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
6.ತದನಂತರ ಇದಕ್ಕೆ ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ ಇದನ್ನು 1-2 ನಿಮಿಷಗಳ ಕಾಲ ಹುರಿಯಿರಿ. ಇದಕ್ಕೆ ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಚೆನ್ನಾಗಿ 1-2 ನಿಮಿಷಗಳ ಕಾಲ ಹುರಿದುಕೊಳ್ಳಿ. ನಿಮ್ಮ ಅಕ್ಕಿಯ ಅಳತೆಗೆ ಅನುಗುಣವಾಗಿ 3 ಕಪ್‌ಗಳಷ್ಟು ನೀರನ್ನು ಸೇರಿಸಿ. ಉಪ್ಪು ಹಾಕಿ ಮಿಶ್ರ ಮಾಡಿಕೊಳ್ಳಿ. (3 ವಿಶಲ್ ಬರುವರೆಗೆ ಬೇಯಿಸಿಕೊಳ್ಳಿ).
6.ಒಮ್ಮೆ ಕುಕ್ಕರ್ ತಣಿದ ನಂತರ ಇದಕ್ಕೆ ಲಿಂಬೆ ರಸವನ್ನು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿಮ್ಮ ಇಷ್ಟ ರಾಯಿತ/ಮೊಸರು ಗೊಜ್ಜನ್ನು ತಯಾರಿಸಿ ಮತ್ತು ಬಿಸಿಯಾಗಿ ಬಡಿಸಿ. ವೆಜಿಟೇಬಲ್ ರೈಸ್ (ತರಕಾರಿ ಅನ್ನ) ಸವಿಯಲು ಸಿದ್ಧವಾಗಿದೆ.

English summary

Tasty mixed vegetable rice Recipe

This is not vegetable pulao or vegetable biryani but just plain mixed vegetable rice.This recipe comes handy when you come home tired after a hectic day in the office or college or do not have time to cook or feeling too lazy to cook, yet long for a comforting and simple meal. 
X
Desktop Bottom Promotion