For Quick Alerts
ALLOW NOTIFICATIONS  
For Daily Alerts

ರುಚಿ ರುಚಿಯಾದ ಬೀಟ್‎ರೂಟ್ ಪಲಾವ್....

By Jaya Subramanya
|

ಬಾಯಲ್ಲಿ ನೀರೂರಿಸುವ ಖಾದ್ಯಗಳೆಂದರೆ ಯಾರಿಗೆ ತಾನೇ ಇಷ್ಟವಾಗದು ಹೇಳಿ? ತಯಾರಿಸುವ ಆಹಾರ ಮತ್ತು ಸೇವಿಸುವ ಆಹಾರ ಶುಚಿಯಾಗಿ ರುಚಿಯಾಗಿ ಇದ್ದಷ್ಟೂ ಇದು ನಮಗೆ ಆರೋಗ್ಯವನ್ನು ನೀಡುತ್ತದೆ ಅಂತೆಯೇ ರೋಗನಿರೋಧಕ ಶಕ್ತಿಯನ್ನು ದಯಪಾಲಿಸುತ್ತದೆ. ನೀವು ಸೇವಿಸುವ ಆಹಾರದಲ್ಲಿ ಕೊಬ್ಬಿನ ಅಂಶಗಳಿಗಿಂತಲೂ ಅಧಿಕವಾಗಿ ನ್ಯೂಟ್ರೀನ್ ಪ್ರೋಟೀನ್ ಅಂಶಗಳಿದೆಯೇ ಎಂಬುದನ್ನು ಕಂಡುಕೊಳ್ಳಿ. ಎಣ್ಣೆಯುಕ್ತ ಮತ್ತು ಮಸಾಲೆ ಪದಾರ್ಥಗಳಿಗೆ ಇತಿಶ್ರೀ ಹಾಡಿ ಹೆಚ್ಚು ಪೋಷಕಾಂಶ ಭರಿತ ಆಹಾರಗಳ ಸೇವನೆಯನ್ನು ನೀವು ಮಾಡಬೇಕು.

ತರಕಾರಿ ಮತ್ತು ಹಣ್ಣುಗಳು ಯಥೇಚ್ಛ ವಿಟಮಿನ್ ಅಂಶಗಳೊಂದಿಗೆ ಬಂದಿದ್ದು ತರಕಾರಿಗಳನ್ನು ಬೇಯಿಸಿ ತಿನ್ನುವುದಕ್ಕಿಂತಲೂ ಹಸಿಯಾಗಿ ಸೇವಿಸುವುದು ಉತ್ತಮವೆಂದು ವೈದ್ಯರುಗಳೇ ತಿಳಿಸುತ್ತಾರೆ. ಬೇಯಿಸಿದಾಗ ತರಕಾರಿಗಳಲ್ಲಿರುವ ಪೋಷಕಾಂಶ ನಷ್ಟವಾಗುತ್ತದೆ ಆದ್ದರಿಂದ ಈ ಅಂಶಗಳು ದೊರೆಯಬೇಕು ಎಂದಾದಲ್ಲಿ ಅವುಗಳನ್ನು ಹಸಿಯಾಗಿಯೇ ಸೇವಿಸಬೇಕು. ಅದಾಗ್ಯೂ ಕೆಲವೊಂದು ತರಕಾರಿಗಳನ್ನು ಬೇಯಿಸಿದಾಗಲೇ ಅದಕ್ಕೆ ರುಚಿ ಬರುತ್ತಿದ್ದು ಅಂತ ತರಕಾರಿಗಳಲ್ಲಿ ಒಂದಾಗಿದೆ ಬೀಟ್‎ರೂಟ್. ರಕ್ತ ನಿಮ್ಮ ದೇಹದಲ್ಲಿ ಕಡಿಮೆ ಇದೆ ಎಂದಾಗ ಬೀಟ್‎ರೂಟ್ ಸೇವನೆ ಮಾಡುವುದರಿಂದ ರಕ್ತದ ಪೂರೈಕೆ ದೇಹಕ್ಕೆ ದೊರೆಯುತ್ತದೆ. ಮಕ್ಕಳು ಈ ತರಕಾರಿಯನ್ನು ಹೆಚ್ಚು ತಿಂದಷ್ಟೂ ಒಳ್ಳೆಯದು.

ಬರಿಯ ರಕ್ತಪೂರೈಕೆ ಗುಣವನ್ನು ಮಾತ್ರ ಹೊಂದಿರದೇ ಬೀಟ್‎ರೂಟ್ ಕೆಲವೊಂದು ಅತ್ಯುತ್ತಮ ಅಂಶಗಳನ್ನು ಒಳಗೊಂಡಿದೆ. ಈ ತರಕಾರಿಯನ್ನು ಹಸಿಯಾಗಿ ಸಲಾಡ್ ರೂಪದಲ್ಲಿ ಕೂಡ ಸೇವಿಸಬಹುದು ಅಥವಾ ಸ್ವಾದಿಷ್ಟ ಖಾದ್ಯಗಳನ್ನು ತಯಾರಿಸಿ ಕೂಡ ಸೇವಿಸಬಹುದು. ಇಂದಿನ ಲೇಖನದಲ್ಲಿ ಕೂಡ ರಾಯಿತ ಸಲಾಡ್ ಅಲ್ಲದೆ ಬೀಟ್‎ರೂಟ್ ಬಳಸಿ ಸಿದ್ಧಪಡಿಸಲಾದ ಪಲಾವ್ ರೆಸಿಪಿಯ ಪರಿಚಯವನ್ನು ನಾವು ಮಾಡಿಕೊಡಲಿದ್ದೇವೆ. ಹೆಚ್ಚಿನ ರಸಯುಕ್ತ ಅಂಶಗಳನ್ನು ಒಳಗೊಂಡಿರುವ ಬೀಟ್‎ರೂಟ್ ಸ್ವಾದಿಷ್ಟ ಖಾದ್ಯಗಳಲ್ಲಿ ಕೂಡ ತನ್ನ ಚಮತ್ಕಾರವನ್ನು ತೋರಿಸುವಂತಹದ್ದು. ಹಾಗಿದ್ದರೆ ಬೀಟ್‎ರೂಟ್ ಪಲಾವ್ ಮಾಡುವ ವಿಧಾನವನ್ನು ಅರಿತುಕೊಳ್ಳಿ..

Tasty And Healthy Beetroot Pulao Recipe

*ಪ್ರಮಾಣ - 4
*ಅಡುಗೆಗೆ ಬೇಕಾದ ಸಮಯ - 15 ನಿಮಿಷಗಳು
*ಸಿದ್ಧತಾ ಸಮಯ - 20 ನಿಮಿಷಗಳು

ಸಾಮಾಗ್ರಿಗಳು
*ಬೀಟ್‎ರೂಟ್ - 1 ಕಪ್ (ಕತ್ತರಿಸಿದ್ದು)
*ಅಕ್ಕಿ - 2 ಕಪ್ಸ್
*ಹಸಿಮೆಣಸು - 4ರಿಂದ 5
*ಗರಮ್ ಮಸಾಲಾ - 1 ಚಮಚ
*ಕೊತ್ತಂಬರಿ ಹುಡಿ - 1 ಚಮಚ
*ಬೇ ಲೀಫ್ - 2
*ಈರುಳ್ಳಿ - 1 ಕಪ್
*ಜೀರಿಗೆ - 1/4 ಚಮಚ
*ಏಲಕ್ಕಿ - 3 ರಿಂದ 4
*ಕರಿಮೆಣಸು - 1/4 ಚಮಚ
*ಗೇರುಬೀಜ - 8 ರಿಂದ 10
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ

ಮಾಡುವ ವಿಧಾನ
*ಕುಕ್ಕರ್ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ, ಕತ್ತರಿಸಿದ ಈರುಳ್ಳಿ, ಬೇ ಲೀವ್ಸ್, ಜೀರಿಗೆ ಮತ್ತು ಹಸಿಮೆಣಸನ್ನು ಹಾಕಿ.
*ಇನ್ನು ಗರಮ್ ಮಸಾಲಾ, ಕೊತ್ತಂಬರಿ ಹುಡಿ, ಏಲಕ್ಕಿ, ಕರಿಮೆಣಸು ಮತ್ತು ಗೇರುಬೀಜವನ್ನು ಹಾಕಿ, ಚೆನ್ನಾಗಿ ಕಲಸಿಕೊಳ್ಳಿ
*ಈಗ ಕತ್ತರಿಸಿದ ಬೀಟ್‎ರೂಟ್ ಹಾಕಿ, ಸೌಟಿನಿಂದ ಕೈಯಾಡಿಸಿ
*ಸರಿಯಾದ ನೀರಿನ ಅಳತೆಯೊಂದಿಗೆ ಅಕ್ಕಿಯನ್ನು ಹಾಕಿ
*ಉಪ್ಪು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಎರಡು ವಿಶಲ್‎ಗಾಗಿ ಕಾಯಿರಿ
ಇನ್ನು ಬೀಟ್‎ರೂಟ್ ಪಲಾವ್ ಅನ್ನು ತಟ್ಟೆಗೆ ಹಾಕಿಕೊಳ್ಳಿ, ಸೌತೆಕಾಯಿ ರಾಯಿತದೊಂದಿಗೆ ಪಲಾವ್ ಅನ್ನು ಸವಿಯಲು ನೀಡಿ.

English summary

Tasty And Healthy Beetroot Pulao Recipe

If you are anaemic, the best vegetable for you to have is a beetroot. Beetroot not only helps you increase your blood count, but it also has several health benefits. So, today we shall share with you the recipe of beetroot pulao that you must try at home.Beetroot pulao recipe is very simple and easy to prepare, have a look
Story first published: Monday, March 7, 2016, 19:28 [IST]
X
Desktop Bottom Promotion