For Quick Alerts
ALLOW NOTIFICATIONS  
For Daily Alerts

ನಾಲಿಗೆಯ ರುಚಿ ತಣಿಸುವ ಕಡಲೆಕಾಳು ಪುಲಾವ್ ರೆಸಿಪಿ

|

ಭಾರತದ ಅನೇಕ ಕಡೆಗಳಲ್ಲಿ ತುಂಬಾ ಪ್ರೀತಿಯ ಒಂದು ಸಾಮಾಗ್ರಿಯೆಂದರೆ, ಕಡಲೆಕಾಳು ಆಗಿದೆ. ಭಾರತದ ಉತ್ತರದ ಕಡೆಗಳಲ್ಲಿ ತುಂಬಾ ಜನಪ್ರಿಯವಾಗಿರುವ ಈ ಸಾಮಾಗ್ರಿ, ಭಾರತದ ದಕ್ಷಿಣದಲ್ಲೂ ಇದೊಂದು ಮೆಚ್ಚಿನ ಖಾದ್ಯವಾಗಿದೆ.ಈ ಟೇಸ್ಟೀ ಇಂಗ್ರೀಡಿಯೆಂಟ್, ಮಕ್ಕಳು ಕೂಡ ತುಂಬಾ ಇಷ್ಟಪಡುತ್ತಾರೆ. ನಿಮ್ಮ ಸಣ್ಣ ಮಕ್ಕಳ ಮನತಣಿಸಲು ಅವರ ಮುದ್ದು ಅಮ್ಮಂದಿರು ಯಮ್ಮಿ ಕಡಲೆಕಾಳು ಪುಲಾವ್ ರೆಸಿಪಿಯನ್ನು ಪ್ರಯತ್ನಿಸಬಹುದು.

ಕಡಲೆಕಾಳು ಪುಲಾವ್ ಸರಳ ಮತ್ತು ಸಿದ್ಧಮಾಡಲು ಸುಲಭವಾಗಿದೆ. ಇದನ್ನು ಕೇವಲ 20 ನಿಮಿಷಗಳಲ್ಲಿ ನಿಮಗೆ ತಯಾರಿಸಬಹುದಾಗಿದ್ದು, ನಿಮ್ಮ ಸಂಜೆಯ ಚಹಾದ ವೇಳೆಗೆ ಇದು ಪರ್ಫೆಕ್ಟ್ ಖಾದ್ಯವಾಗುವುದು ಖಂಡಿತ ಮತ್ತು ನಿಮ್ಮ ರಾತ್ರಿಗೂ ಇದು ಉತ್ತಮ ತಿನಿಸಾಗಿದೆ.

ರುಚಿಯಾದ ಕಡಲೆಹುಡಿ ಮೆಂತೆ ರೋಟಿ

ಪ್ರಮಾಣ: 3
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಕಡಲೆಕಾಳು ಪುಲಾವ್ ರೆಸಿಪಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು

*ಅಕ್ಕಿ - 1 ಕಪ್
*ಚಿಕ್‌ಪೀಸ್ - 25 ಗ್ರಾಮ್ಸ್
*ಟೊಮೇಟೊ - 2 (ಕತ್ತರಿಸಿದ್ದು)
*ಆಲುಗಡ್ಡೆ - 1 (ಬೇಯಿಸಿದ್ದು)
*ಸ್ಪಿನಾಚ್ - 1 ಸ್ಪ್ರಿಂಗ್ (ಕತ್ತರಿಸಿದ್ದು)
*ಕ್ಯಾಪ್ಸಿಕಂ - 1 (ಕ್ಯೂಬ್)
*ಎಣ್ಣೆ - 2 ಸ್ಪೂನ್
*ಜೀರಿಗೆ - 1 ಸ್ಪೂನ್
*ಇಂಗು - 1/2 ಸ್ಪೂನ್
*ಶುಂಠಿ - 1 ಸ್ಪೂನ್
*ಹಸಿಮೆಣಸು - 2 (ಕತ್ತರಿಸಿದ್ದು)
*ಅರಶಿನ - 1 ಸ್ಪೂನ್
*ಅಮಚೂರ್ - 1/2 ಸ್ಪೂನ್
*ಗರಂ ಮಸಾಲಾ - 1/4 ಸ್ಪೂನ್
*ನೀರು - 2 ಕಪ್‌ಗಳು
*ಉಪ್ಪು ರುಚಿಗೆ ತಕ್ಕಷ್ಟು
*ಬೇವಿನ ಸೊಪ್ಪು- ಸೊಪ್ಪು

ಕಡಲೆಕಾಳು ಪುಲಾವ್ ರೆಸಿಪಿ ಮಾಡುವ ವಿಧಾನ

1.ನೀರಿನಲ್ಲಿ ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಅಕ್ಕಿ ಬೇಯಿಸುವ ಮುನ್ನ 15 ನಿಮಿಷಗಳ ಕಾಲ ನೆನೆಸಿಡಿ.\

2.ಚಿಕ್‌ಪೀಸ್‌ನಲ್ಲಿರುವ ನೀರನ್ನು ಬಸಿದು 5 ನಿಮಿಷಗಳ ಕಾಲ ಚಿಕ್‌ಪೀಸ್ ಅನ್ನು ಕುಕ್ಕರ್‌ನಲ್ಲಿ ಬೇಯಿಸಿ. ನಂತರ ಅದನ್ನು ಪಕ್ಕದಲ್ಲಿಡಿ.\

3.ಪ್ಯಾನ್‌ನಲ್ಲಿ, ಮಧ್ಯಮ ಗಾತ್ರದಲ್ಲಿ ಎಣ್ಣೆಯನ್ನು ಬಿಸಿ ಮಾಡಿ.

4.ಎಣ್ಣೆ ಬಿಸಿಯಾದಾಗ, ಪ್ಯಾನ್‌ಗೆ ಜೀರಿಗೆ ಹಾಕಿ ಮತ್ತು ಅದನ್ನು ಸಿಡಿಯುವವರೆಗೆ ಸ್ವಲ್ಪ ಕಾಯಿರಿ. ಶುಂಠಿ, ಹಸಿಮೆಣಸು ಮತ್ತು ಅರಶಿನವನ್ನು ಸೇರಿಸಿ\

5.ಪ್ಯಾನ್‌ಗೆ ಕತ್ತರಿಸಿದ ಟೊಮೇಟೊಗಳನ್ನು ಹಾಕಿ ಮತ್ತು ಪ್ಯಾನ್‌ನಲ್ಲಿರುವ ಸಾಮಾಗ್ರಿಗಳಿಗೆ ಉಪ್ಪು ಚಿಮುಕಿಸಿ.

6.ಟೊಮೇಟೊ ಬೆಂದ ನಂತರ, ಪ್ಯಾನ್‌ಗೆ ಬೇಯಿಸಿದ ಚಿಕ್‌ಪೀಸ್, ಬಟಾಟೆ ಮತ್ತು ನೀರು ಹಾಕಿ. ಅದು ಬೆಂದಾಗ, ಪ್ಯಾನ್‌ಗೆ ಮುಚ್ಚಳ ಮುಚ್ಚಿ 12-15 ನಿಮಿಷಗಳ ಕಾಲ ಮಂದ ಉರಿಯಲ್ಲಿ ಬೇಯಿಸಿ.

7.ಇದು ಚೆನ್ನಾಗಿ ಬೆಂದ ನಂತರ, ಪ್ಯಾನ್‌ಗೆ ಅಕ್ಕಿ, ಸ್ಪಿನಾಚ್, ಬೇಲೀಫ್ ಮತ್ತು ಕ್ಯಾಪ್ಸಿಕಂ ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ ಬೇಯಲು ಬಿಡಿ. ಪ್ಯಾನ್‌ಗೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 12-15 ನಿಮಿಷಗಳ ಕಾಲ ಬೇಯಲು ಬಿಡಿ.

8.ಪ್ಯಾನ್‌ನಲ್ಲಿ ನಿಧಾನವಾಗಿ ಅಕ್ಕಿಯನ್ನು ಬೇಯಸಿ ಮತ್ತು ಚೆನ್ನಾಗಿ ಬೇಯಲು ಬಿಡಿ.

9.ಚಿಕ್‌ಪಾಸ್ ಪುಲಾವ್ ಸಿದ್ಧವಾದಾಗ, ಅಮೆಚೂರ್ ಪೌಡರ್ ಮತ್ತು ಗರಂ ಮಸಾಲಾವನ್ನು ಪ್ಯಾನ್‌ಗೆ ಹಾಕಿ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಗೊಳಿಸಿ.

10.ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಪುಲಾವ್ ಅನ್ನು ಬಡಿಸಿ.

ನಿಮ್ಮ ಚಿಕ್‌ಪೀಸ್ ಪುಲಾವ್ ಸವಿಯಲು ಸಿದ್ಧವಾಗಿದೆ. ನಿಮ್ಮ ಊಟವನ್ನು ಇನ್ನಷ್ಟು ಸವಿಯಾಗಿಸಲು, ರಾಯಿತವನ್ನು ಸೈಡ್ ಡಿಶ್ ಆಗಿ ಬೆರೆಸಿಕೊಳ್ಳಿ.

English summary

Tasty Chickpeas Pulav Recipe

One of the most loved ingredients in many parts of India is chickpeas. Being an important ingredient in Northern parts of India, chickpeas has also become a common ingredient in South India too.
X
Desktop Bottom Promotion