For Quick Alerts
ALLOW NOTIFICATIONS  
For Daily Alerts

ಆಹಾ ಘಮಘಮಿಸುವ ಕಾಬೂಲ್ ಕಡಲೆ ಬಿರಿಯಾನಿ

By Super
|

ಹಿಂದಿನ ಕಾಲದಲ್ಲಿ ಪಂಚಭಕ್ಷ ಪರಮಾನ್ನವೆಂದರೆ ಊಟಗಳಲ್ಲೇ ಅತ್ಯಂತ ಭರ್ಜರಿ ಎಂದು ಭಾವಿಸಲಾಗುತ್ತಿತ್ತು. ಇಂದು ಅತ್ಯಂತ ಭರ್ಜರಿ ಊಟವೆಂದರೆ ವಿವಿಧ ಉತ್ತರಗಳು ದೊರಕಬಹುದು. ಕೇರಳದವರಿಗೆ ಓಣಂ ಸ್ಪೆಷಲ್ ಊಟ ಭರ್ಜರಿಯಾದರೆ ಕರಾವಳಿಯ ಜನರಿಗೆ ತುಪ್ಪದಲ್ಲಿ ಮಾಡಿದ ಸಿಹಿತಿನಿಸುಗಳು ಭರ್ಜರಿ ಎನಿಸಬಹುದು.

ಆದರೆ ಮಾಂಸಾಹಾರಿ ಸೇವಿಸುವವರಲ್ಲಿ ಈ ಪ್ರಶ್ನೆ ಕೇಳಿದರೆ ಅವರಿಂದ ಬರುವ ಉತ್ತರ - ಬಿರಿಯಾನಿ...! ವಿವಿಧ ಮಸಾಲೆಗಳ ಜೊತೆ ಮಾಂಸ ಮತ್ತು ಅಕ್ಕಿಯನ್ನು ಹಬೆಯಲ್ಲಿ ಬೇಯಿಸಿ ಬಡಿಸಿದ ಬಿರಿಯಾನಿಯನ್ನು ಮೆಚ್ಚದ ಮಾಂಸಾಹಾರಿಗಳಿಲ್ಲ. ಅದರಲ್ಲೂ ಹೈದರಾಬಾದಿ ದಮ್ ಬಿರಿಯಾನಿ ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿದೆ. ಬರೀ 15 ನಿಮಿಷದಲ್ಲಿ ಸಿದ್ಧ ಸ್ವಾದಿಷ್ಟ ಬಟಾಣಿ ಟೊಮೇಟೊ ರೈಸ್

ಇದರ ಮತ್ತೊಂದು ಹೆಚ್ಚುಗಾರಿಕೆಯೆಂದರೆ ಇದಕ್ಕೆ ಕೋಳಿ ಮಾಂಸದ ತುಣುಕುಗಳನ್ನು ಹಾಕಿ, ಇದನ್ನು ಮಾಂಸಾಹಾರಿ ಅಡುಗೆಯಾಗಿ ಸಹ ಬದಲಾಯಿಸಬಹುದು. ಇದಕ್ಕೆ ಹಾಕುವ ಮಸಾಲೆಯೆ ಇದರ ರುಚಿಯ ಮೂಲವಾಗಿರುತ್ತದೆ. ಬನ್ನಿ ಇಂದು ಬೋಲ್ಡ್ ಸ್ಕೈ ತಂಡದಿಂದ ಇದೇ ರುಚಿಯನ್ನು ನೀಡುವ ಕಾಬೂಲ್ ಕಡಲೆಯ ಬಿರಿಯಾನಿಯನ್ನು ಹೇಗೆ ತಯಾರಿಸಬಹುದೆಂದು ವಿವರಿಸಲಾಗಿದೆ. ಬನ್ನಿ ನೋಡೋಣ

Tasty Chickpeas Biryani Recipe

*ಪ್ರಮಾಣ - ಐದು ಜನರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 20 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 30 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಕಾಬೂಲ್ ಕಡಲೆ - 2 ಕಪ್‌ಗಳು (ಬೇಯಿಸಿರುವ)
*ಬಾಸುಮತಿ ಅಕ್ಕಿ - 2 ಕಪ್‌ಗಳು
*ತೆಂಗಿನ ಹಾಲು - 2 ಕಪ್‌ಗಳು
*ನೀರು- 1 1/2 ಕಪ್‌
*ಈರುಳ್ಳಿ - 2 (ಕತ್ತರಿಸಿದಂತಹುದು)
*ಟೊಮೇಟೊ - 2 (ಕತ್ತರಿಸಿದಂತಹುದು)
*ಮೆಣಸಿನ ಪುಡಿ - 1ಟೀ.ಚಮಚ
*ಗರಂ ಮಸಾಲ - 1ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1ಟೀ.ಚಮಚ
*ತುಪ್ಪ - 2 ಟೀ.ಚಮಚ
*ಎಣ್ಣೆ - 1 ಟೀ.ಚಮಚ
*ಮಸಾಲೆ - ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಅನಾನಸ್ ಹೂವು

ಮಸಾಲೆ ಪೇಸ್ಟ್‌ಗಾಗಿ
*ಸ್ವಲ್ಪ ಕೊತ್ತಂಬರಿ ಸೊಪ್ಪು- ಕತ್ತರಿಸಿದಂತಹುದು
*ಸ್ವಲ್ಪ ಪುದಿನಾ ಸೊಪ್ಪು- ಕತ್ತರಿಸಿದಂತಹುದು
*ತೆಂಗಿನಕಾಯಿ - 1 (ತುರಿದಂತಹುದು)
*ಬೆಳ್ಳುಳ್ಳಿ - 2 -3 ತುಣುಕುಗಳು
*ಚಿಕ್ಕ ಈರುಳ್ಳಿ - 4 -5
*ಹಸಿ ಮೆಣಸಿನ ಕಾಯಿ- 2

ವಿಧಾನ
1. ಪ್ರೆಶ್ಶರ್ ಕುಕ್ಕರಿನಲ್ಲಿ ತುಪ್ಪ ಮತ್ತು ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ.
2. ಇದು ಬಿಸಿಯಾದ ಮೇಲೆ ಇದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಅನಾನಸ್ ಹೂವು ಹಾಗು ಚಿಕ್ಕ ಈರುಳ್ಳಿಯನ್ನು ಹಾಕಿ ಉರಿದುಕೊಳ್ಳಿ. ಈರುಳ್ಳಿ ಹೊಂಬಣ್ಣಕ್ಕೆ ಬರಬೇಕು.
3. ಅದೇ ಸಮಯದಲ್ಲಿ ಕೊತ್ತಂಬಂರಿ, ಪುದಿನಾ, ಈರುಳ್ಳಿ, ತುರಿದ ತೆಂಗಿನಕಾಯಿ, ಹಸಿ ಮೆಣಸಿನ ಕಾಯಿಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಗಟ್ಟಿಯಾದ ಪೇಸ್ಟ್ ಮಾಡಿಕೊಳ್ಳಿ.
4. ಈರುಳ್ಳಿಯು ಹೊಂಬಣ್ಣಕ್ಕೆ ಬಂದ ಮೇಲೆ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಬೆರೆಸಿ. ಆಮೇಲೆ ಅದಕ್ಕೆ ಟೊಮೇಟೊ ಬೆರೆಸಿ, ನಂತರ ಈ ಪದಾರ್ಥಗಳನ್ನು ಹುರಿದುಕೊಳ್ಳಿ.
5. ಈಗ ಇದಕ್ಕೆ ಖಾರದ ಪುಡಿ, ಗರಂ ಮಸಾಲ ಪುಡಿ, ಉಪ್ಪು ಮತ್ತು ಬೇಯಿಸಿದ ಕಾಬೂಲ್ ಕಡಲೆಯನ್ನು ಹಾಕಿ ಕುಕ್ಕರಿನಲ್ಲಿ 3 ನಿಮಿಷ ಬೇಯಿಸಿ.
6. ಇನ್ನು 1 1/2 ಕಪ್ ನೀರನ್ನು ಬೆರೆಸಿ ಪ್ರೆಶ್ಶರ್ ಕುಕ್ಕರಿನಲ್ಲಿಡಿ.
7. ಕುಕ್ಕರಿನ ಮುಚ್ಚಳವನ್ನು ಮುಚ್ಚಿ, 2-3 ವಿಶಲ್ ಬರುವವರೆಗೆ ಒಲೆಯ ಮೇಲೆ ಇಡಿ.

ಪೋಷಕಾಂಶದ ಸಲಹೆ
*ಕಾಬೂಲ್ ಕಡಲೆಗಳು ಪ್ರಾಕೃತಿಕವಾಗಿ ಅಧಿಕ ಪೋಷಕಾಂಶವನ್ನು ಹೊಂದಿರುತ್ತವೆ. ಇವುಗಳಲ್ಲಿ ಅಧಿಕ ನಾರಿನಂಶ, ಪೊಟಾಶಿಯಂ, ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಇರುತ್ತದೆ. ಇವು ಹೃದಯಕ್ಕೆ ಒಳ್ಳೆಯದು. ಈ
*ಕಾಬೂಲ್ ಕಡಲೆ ಫೋಲೆಟ್ ಹೊಂದಿರುತ್ತವೆ. ಇವು ಕ್ಯಾನ್ಸರನ್ನು ನಿಯಂತ್ರಿಸಲು ಸಹಕಾರಿ

English summary

Tasty Chickpeas Biryani Recipe

Chickpeas biryani is simple to prepare and is not at all time consuming. The best thing about this biryani recipe is that, you can easily convert it to a non-vegetarian meal by adding diced chicken. However, it tastes best only with the chickpeas. So, what are you waiting for take a look at how you can prepare this chickpeas biryani recipe.
Story first published: Thursday, May 14, 2015, 19:40 [IST]
X
Desktop Bottom Promotion