For Quick Alerts
ALLOW NOTIFICATIONS  
For Daily Alerts

ಸ್ವಾದದ ಘಮಲನ್ನು ಹೆಚ್ಚಿಸುವ ಕ್ಯಾಪ್ಸಿಕಂ ಬಾತ್

|

ನಮ್ಮ ಜೀವನದಲ್ಲಿ ಆಹಾರ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಬೆಳಗಿನ ಉಪಹಾರದಿಂದ ಹಿಡಿದು ರಾತ್ರಿಯ ಊಟದವರೆಗೆ ನಾವು ರುಚಿಯಾಗಿರುವ ಆಹಾರವನ್ನೇ ಬಯಸುತ್ತೇವೆ. ಪ್ರತಿಯೊಬ್ಬರಿಗೂ ಆಹಾರ ತಯಾರಿ ಮತ್ತು ಸವಿಯುವುದು ತುಂಬಾ ಮಹತ್ವಪೂರ್ಣವಾಗಿರುತ್ತದೆ. ಪ್ರತಿಯೊಂದು ಹಬ್ಬಕ್ಕೂ ಅದೇ ರೀತಿಯ ಆಹಾರವನ್ನು ತಯಾರಿಸುವ ನಾವು ಆಹಾರಕ್ಕೂ ನೀತಿ ನಿಯಮಗಳ ಚೌಕಟ್ಟನ್ನು ಹಾಕಿ ಅದರಂತೆ ನಡೆಯುವವರು.

ಇಂದಿನ ಧಾವಂತ ಜೀವನದಲ್ಲಿ ಸ್ವಾದದ ರುಚಿಯನ್ನು ಅಸದಳಗೊಳಿಸುವ ಹಲವಾರು ಖಾದ್ಯಗಳಿವೆ. ಈ ರುಚಿಗಳು ನಿಮ್ಮ ದೈನಂದಿನ ಜೀವನದಲ್ಲಿ ಅತೀ ಮಹತ್ವವಾದ ಪಾತ್ರವನ್ನು ನಿರ್ವಹಿಸುತ್ತವೆ. ನಿಮ್ಮ ಧಾವಂತಹ ಜೀವನದಲ್ಲಿ ಶುಚಿಯಾಗಿಯೂ ರುಚಿಯಾಗಿಯೂ ನಿಮ್ಮ ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವಂತಹ ಆಹಾರ ಪದಾರ್ಥಗಳಿದ್ದರೆ ಎಷ್ಟು ಚೆನ್ನ ಅಲ್ಲವೇ?

ದುಡಿಯುವ ಅಮ್ಮಂದಿರಿಗಾಗಿ 8 ಸ್ನಾಕ್ಸ್ ರೆಸಿಪಿ
ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಬಾಯಿ ರುಚಿಯನ್ನು ಹೆಚ್ಚಿಸುವ ಸೂಪರ್ ಖಾದ್ಯವೊಂದನ್ನು ನಾವಿಲ್ಲಿ ನೀಡುತ್ತಿದ್ದೇವೆ. ಅದುವೇ ಕ್ಯಾಪ್ಸಿಕಂ ಬಾತ್ ಪರಿಮಳ ಯುಕ್ತ ಸುಗಂಧಭರಿತ ಮಸಾಲೆ ಸಾಮಾಗ್ರಿಗಳನ್ನು ಸೇರಿಸಿ ಮಾಡಬಹುದಾದ ಈ ಕ್ಯಾಪ್ಸಿಕಂ ಬಾತ್ ನಿಮ್ಮ ಒತ್ತಡದ ಜೀವನ ಶೈಲಿಯಲ್ಲಿ ತುಂಬಾ ಉಪಯೋಗಕರವಾದುದು.

Tasty Capsicum Rice Bath Recipes

ಇಂದಿನ ಲೇಖನ ನಿಮ್ಮ ಆಸೆಯನ್ನು ಕೈಗೂಡಿಸುವ ಒಂದು ಸುಂದರ ಸರಳ ಪಾಕ ವಿಧಾನದೊಂದಿಗೆ ನಾವು ಬಂದಿದ್ದು ಇದು ಖಂಡಿತ ನಿಮ್ಮ ಊಟಕ್ಕೆ ಹೆಚ್ಚಿನ ಸ್ವಾದವನ್ನು ಪೂರೈಸಿ ಕೊಡುತ್ತದೆ. ಕ್ಯಾಪ್ಸಿಕಂ (ದೊಣ್ಣೆ ಮೆಣಸು) ಅನ್ನು ಬಳಸಿಕೊಂಡು ಮಾಡುವ ಈ ರುಚಿಯಾದ ಕ್ಯಾಪ್ಸಿಕಂ ಬಾತ್ ನಿಮ್ಮ ಮಧ್ಯಾಹ್ನದ ಹಸಿವನ್ನು ತೀರಿಸಿ ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ.

ರುಚಿಕರವಾದ ತರಕಾರಿ ದಾಲ್ ರೆಸಿಪಿ
ಇದನ್ನು ತಯಾರಿಸಲು ನಿಮಗೆ ಹೆಚ್ಚಿನ ಸಮಯ ಬೇಕೆಂದೇನಿಲ್ಲ. ಕೇವಲ ಕೆಲವೇ ನಿಮಿಷಗಳಲ್ಲಿ ಈ ಕ್ಯಾಪ್ಸಿಕಂ ಕಲಸನ್ನವನ್ನು ತಯಾರಿಸಬಹುದು. ಹಾಗಿದ್ದರೆ ಅತಿ ಸುಲಭವಾಗಿ ತಯಾರಿಸಬಹುದಾದ ಈ ಕ್ಯಾಪ್ಸಿಕಂ ಬಾತ್ ರೆಸಿಪಿಯನ್ನು ಕೆಳಗೆ ನಾವು ನೀಡಿದ್ದು ಇದನ್ನು ತಯಾರಿಸಿ.

ಪ್ರಮಾಣ: 2
*ಸಿದ್ಧತಾ ಸಮಯ: 15 ನಿಮಿಷ
*ಅಡುಗೆಗೆ ಬೇಕಾದ ಸಮಯ: 15 ನಿಮಿಷ

ಸಾಮಾಗ್ರಿಗಳು
*ಅನ್ನ - 2 ಕಪ್
*ಈರುಳ್ಳಿ - 1 ಕತ್ತರಿಸಿದ್ದು
*ಹಸಿಮೆಣಸು - 1 ಕತ್ತರಿಸಿದು
*ಶುಂಠಿ - ಸಣ್ಣದು
*ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ
*ಕರಿಬೇವು - 1 ಎಸಳು
*ಸಾಸಿವೆ - 1 ಚಮಚ
*ಉದ್ದಿನ ಬೇಳೆ - 1/2 ಚಮಚ
*ಅರಶಿನ - 1/2 ಚಮಚ
*ಕ್ಯಾಪ್ಸಿಕಂ - 1 ದೊಡ್ಡದು
*ಟೊಮೇಟೊ - 1 ದೊಡ್ಡದು
*ಗರಮ್ ಮಸಾಲಾ - 1/2 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ
1. ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಯಾದೊಡನೆ ಇದಕ್ಕೆ ಸಾಸಿವೆ, ಉದ್ದಿನ ಬೇಳೆ ಮತ್ತು ಕರಿಬೇವಿನೆ ಎಸಳನ್ನು ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಿ.
2. ನಂತರ ಹೆಚ್ಚಿದ ಈರುಳ್ಳಿ ಮತ್ತು ಟೊಮೇಟೊವನ್ನು ಬಾಣಲೆಗೆ ಹಾಕಿ ಇದು ಬೇಯುವವರೆಗೆ ಚೆನ್ನಾಗಿ ಹುರಿದುಕೊಳ್ಳಿ.
3. ನಂತರ ಇದಕ್ಕೆ ಸ್ವಲ್ಪ ಅರಶಿನ ಮತ್ತು ಗರಮ್ ಮಸಾಲೆಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
4. ಇದೀಗ ಸಣ್ಣಗೆ ಹೆಚ್ಚಿರುವ ಕ್ಯಾಪ್ಸಿಕಂ ಅನ್ನು ಈ ಮಿಶ್ರಣಕ್ಕೆ ಹಾಕಿ ಮತ್ತು ಸ್ವಲ್ಪ ಹೊತ್ತು ಮುಚ್ಚಿಡಿ.
5. ಐದು ನಿಮಿಷಗಳ ತರುವಾಯ ಈ ಮಿಶ್ರಣಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
6. ಮೊದಲೇ ಬೇಯಿಸಿದ ಅನ್ನವನ್ನು ಈ ಮಿಶ್ರಣಕ್ಕೆ ಬೆರೆಸಿ ಚೆನ್ನಾಗಿ ಕಲಸಿ.
7. 10 ನಿಮಿಷಗಳು ಇದನ್ನು ಸಣ್ಣ ಉರಿಯಲ್ಲಿ ಹಾಗೆಯೇ ಬಿಡಿ.
8. ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ರುಚಿಯಾದ ಆರೋಗ್ಯಕರ ಕ್ಯಾಪ್ಸಿಕಂ ಬಾತ್ ಸವಿಯಲು ಸಿದ್ಧವಾಗಿದೆ. ಮಧ್ಯಾಹ್ನದ ಊಟದ ಸವಿಯನ್ನು ಹೆಚ್ಚಿಸುವ ಈ ಬಾತ್ ನಿಮ್ಮ ಹಸಿವಿನ ತುಡಿತವನ್ನು ಸಮಾಧಾನಗೊಳಿಸಿ ನಿಮಗೆ ಹೊಟ್ಟೆ ತುಂಬುವಂತೆ ಮಾಡುವುದರಲ್ಲಿ ಸಂದೇಹವಿಲ್ಲ.

English summary

Tasty Capsicum Rice Bath Recipes

Capsicum Bath is a very simple rice recipe You can prepare this rice in a jiffy if you have cooked rice ready or you can even use left over rice to prepare this.One can replace the green capsicums with the various colored bell peppers to make this rice more colorful.
X
Desktop Bottom Promotion