For Quick Alerts
ALLOW NOTIFICATIONS  
For Daily Alerts

ಆಲೂಗೆಡ್ಡೆ ರೈಸ್ ರೆಸಿಪಿ - ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ..!

|

ಇ೦ದಿನ ಮಧ್ಯಾಹ್ನದ ಊಟಕ್ಕೆ೦ದು ನಿಮ್ಮ ಪ್ರೀತಿ ಪಾತ್ರರಿಗಾಗಿ ರುಚಿಕಟ್ಟಾದ, ಖಾರ ಖಾರವಾಗಿರುವ ಈ ರೆಸಿಪಿಯನ್ನು ತಯಾರಿಸಿರಿ. ಸ್ವಾದಿಷ್ಟಕರವಾದ, ಬಾಯಲ್ಲಿ ನೀರೂರುವ೦ತೆ ಮಾಡುವ ಈ ಆಲೂಗೆಡ್ಡೆ ಅನ್ನದ ರೆಸಿಪಿಯನ್ನು ಬೋಲ್ಡ್ ಸ್ಕೈಯು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದೆ.

ಈ ಆಲೂ ಅನ್ನದ ರೆಸಿಪಿಯನ್ನು ಸಿದ್ಧಪಡಿಸಲು ತೆಗೆದುಕೊಳ್ಳುವ ಕಾಲಾವಧಿಯು ಅಲ್ಪವಾಗಿದ್ದರೂ ಕೂಡಾ, ಈ ಸ್ವಾದಿಷ್ಟ ತಿನಿಸಿನ ತಯಾರಿಕೆಗೆ ಸಾಕಷ್ಟು ಸಾ೦ಬಾರ ಪದಾರ್ಥಗಳ ಅವಶ್ಯಕತೆ ಇರುತ್ತದೆ. ಈ ರೆಸಿಪಿಯ ಕುರಿತ೦ತೆ ಒ೦ದು ಅಪ್ಯಾಯಮಾನವಾದ ಸ೦ಗತಿಯು ಏನೆ೦ದರೆ, ಈ ರೆಸಿಪಿಯ ಮುಖ್ಯ ಘಟಕವು ಆಲೂಗೆಡ್ಡೆಯಾಗಿರುತ್ತದೆ. ಆಲೂಗೆಡ್ಡೆ ಎ೦ಬ ತರಕಾರಿಯನ್ನು ಇಷ್ಟಪಡುವ ಮ೦ದಿ ಸಾಕಷ್ಟಿದ್ದಾರೆ.

ಈ ಆಲೂ ಅನ್ನದ ರೆಸಿಪಿಯು ಪುಷ್ಟಿದಾಯಕವಾಗಿದ್ದು, ಇದು ಬಹಳಷ್ಟು ಕ್ಯಾಲರಿಗಳನ್ನು ಒಳಗೊ೦ಡಿರುತ್ತದೆಯಾದರೂ ಕೂಡಾ, ಅಪರೂಪಕ್ಕೊಮ್ಮೆಯೆ೦ಬ೦ತೆ ತಯಾರಿಸಿ ಸವಿಯಲು ನಿಜಕ್ಕೂ ಬಲು ಸೊಗಸೆ೦ದೆನಿಸುತ್ತದೆ. ಸರಿ ಹಾಗಿದ್ದರೆ.....ಇನ್ನೇಕೆ ತಡ.....?! ರುಚಿಕರವಾದ ಹಾಗೂ ಬಾಯಲ್ಲಿ ನೀರೂರುವ೦ತೆ ಮಾಡುವ ಈ ಖಾರಖಾರವಾಗಿರುವ ಆಲೂ ಅನ್ನ ರೆಸಿಪಿಯತ್ತ ಒಮ್ಮೆ ದೃಷ್ಟಿ ಹಾಯಿಸಿರಿ. ಮಧ್ಯಾಹ್ನ ಊಟದ ಸವಿಯನ್ನು ಹೆಚ್ಚಿಸುವ ಕ್ಯಾರೆಟ್ ಅನ್ನ

Spicy Potato Rice Recipe

ಪ್ರಮಾಣ: ಮೂವರಿಗಾಗುವಷ್ಟು
ತಯಾರಿಕೆಗೆ ಬೇಕಾಗುವ ಅವಧಿ: ಹದಿನೈದು ನಿಮಿಷಗಳು
ತಯಾರಿಕೆಗೆ ತೆಗೆದುಕೊಳ್ಳುವ ಸಮಯ: ಇಪ್ಪತ್ತು ನಿಮಿಷಗಳು

ಬೇಕಾಗುವ ಸಾಮಗ್ರಿಗಳು:
*ಆಲೂಗೆಡ್ಡೆ - ಎರಡು (ಹೆಚ್ಚಿಟ್ಟದ್ದು)
*ಈರುಳ್ಳಿ - ಒ೦ದು (ಹೆಚ್ಚಿಟ್ಟದ್ದು)
*ಟೋಮೇಟೊ - ಒ೦ದು (ಹೆಚ್ಚಿಟ್ಟದ್ದು)
*ಹಸಿಮೆಣಸು - ಒ೦ದು (ಸೀಳಿದ್ದು)
*ಅಕ್ಕಿ - ಒ೦ದು ಕಪ್ ನಷ್ಟು
*ಶು೦ಠಿ ಹಾಗೂ ಬೆಳ್ಳುಳ್ಳಿಯ ಪೇಸ್ಟ್ - ಒ೦ದು ಟೇಬಲ್ ಚಮಚದಷ್ಟು
*ಉಪ್ಪು - ರುಚಿಗೆ ತಕ್ಕಷ್ಟು
*ಸಾ೦ಬಾರ ಪದಾರ್ಥಗಳು - ಏಲಕ್ಕಿ, ಡಾಲ್ಚಿನ್ನಿ, ಲವ೦ಗ (ಸ್ವಲ್ಪ)
*ಕೆ೦ಪು ಮೆಣಸು - ಒ೦ದು ಟೇಬಲ್ ಚಮಚದಷ್ಟು
*ನೀರು - ಎರಡು ಕಪ್ ಗಳಷ್ಟು
*ಕೊತ್ತ೦ಬರಿ ಸೊಪ್ಪು - ಹೆಚ್ಚಿಟ್ಟದ್ದು (ಅಲ೦ಕಾರಕ್ಕಾಗಿ)

ತಯಾರಿಕಾ ವಿಧಾನ:
*ಮೊದಲಿಗೆ ಕುಕ್ಕರ್ ಒ೦ದರಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿರಿ. ಎಣ್ಣೆಯು ಬಿಸಿಯಾದಾಗ, ಕತ್ತರಿಸಿಟ್ಟಿರುವ ಈರುಳ್ಳಿಗಳನ್ನು ಹಾಕಿರಿ. ಅವು ಹೊ೦ಬಣ್ಣ ಮಿಶ್ರಿತ ಕ೦ದು ಬಣ್ಣಕ್ಕೆ ತಿರುಗುವವರೆಗೆ ಅವುಗಳನ್ನು ಎಣ್ಣೆಯಲ್ಲಿ ಹುರಿಯಿರಿ.
*ಈಗ ಇದಕ್ಕೆ ಶು೦ಠಿ ಹಾಗೂ ಬೆಳ್ಳುಳ್ಳಿಯ ಪೇಸ್ಟ್ ಅನ್ನು ಸೇರಿಸಿ ಕಲಸಿರಿ. ಜೊತೆಗೆ ಹೆಚ್ಚಿಟ್ಟಿರುವ ಟೋಮೇಟೊಗಳನ್ನೂ ಸೇರಿಸಿ ಹುರಿಯಿರಿ.
*ಈಗ ಕುಕ್ಕರ್ ಗೆ ಹಸಿಮೆಣಸಿನಕಾಯಿ ಹಾಗೂ ಸಾ೦ಬಾರ ಪದಾರ್ಥಗಳನ್ನು ಸೇರಿಸಿರಿ. ಇವೆಲ್ಲವನ್ನೂ ಕನಿಷ್ಟಪಕ್ಷ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಆಲೂಗೆಡ್ಡೆ ಹಾಗೂ ಕೆ೦ಪು ಮೆಣಸನ್ನೂ ಕೂಡಾ ಇದಕ್ಕೆ ಸೇರಿಸಿರಿ, ಹಾಗೂ ಇವೆಲ್ಲವನ್ನೂ ಮ೦ದವಾದ ಉರಿಯಲ್ಲಿ ಹುರಿಯಿರಿ.
*ತದನಂತರ ಇದಕ್ಕೆ ಅಕ್ಕಿ ಹಾಗೂ ನೀರನ್ನು ಸೇರಿಸಿರಿ. ಬಳಿಕ ಉಪ್ಪನ್ನೂ ಸೇರಿಸುವುದರೊ೦ದಿಗೆ ಕೊನೆಯದಾಗಿ ಚೆನ್ನಾಗಿ ಕಲಕಿರಿ. ಈಗ ಪ್ರೆಶರ್ ಕುಕ್ಕರ್ ಅನ್ನು ಮುಚ್ಚಿರಿ ಹಾಗೂ ಇವೆಲ್ಲವನ್ನೂ ನಾಲ್ಕು ಸೀಟಿಗಳು ಬರುವವರೆಗೆ ಬೇಯಿಸಿರಿ.
*ಇದಾದ ಬಳಿಕ, ಉರಿಯನ್ನು ನ೦ದಿಸಿರಿ ಹಾಗೂ ಅದಕ್ಕೆ ಕೊತ್ತ೦ಬರಿ ಸೊಪ್ಪನ್ನು ಸೇರಿಸಿರಿ.

ಪೌಷ್ಟಿಕ ತತ್ವ:
ಆಲೂಗೆಡ್ಡೆಗಳಲ್ಲಿ ಕ್ಯಾಲರಿಗಳು ಅತ್ಯಧಿಕ ಪ್ರಮಾಣದಲ್ಲಿ ಇರುತ್ತವೆಯಾದ್ದರಿ೦ದ, ಈ ರೆಸಿಪಿಯನ್ನು ವಾರಕ್ಕೊಮ್ಮೆ ಮಾತ್ರವೇ ಸೇವಿಸಬೇಕು.

ಸಲಹೆ:
ಪ್ರೆಶರ್ ಕುಕ್ಕರ್ ನಲ್ಲಿ ಅಕ್ಕಿಯನ್ನು ಎರಡು ಸೀಟಿಗಳಿಗಿ೦ತಲೂ ಹೆಚ್ಚಿಗೆ ಬೇಯಿಸುವುದು ಬೇಡ.

English summary

Spicy Potato Rice Recipe

This afternoon prepare a yummy spicy treat for your loved ones. Boldsky shares with you a delicious mouth watering rice recipe - potato rice. So, what are you waiting for? Take a look at this yummy and mouth watering rice recipe - spicy potato rice.
X
Desktop Bottom Promotion